ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇ ದಿನೆ ಹಾವು-ಏಣಿಯಂತೆ ಏರಿಳಿತ ನೋಡುತ್ತಿದೆ. ನಿನ್ನೆ ಚಿನ್ನದ ಬೆಲೆ ಕಡಿಮೆ ಆಗಿರುವ ಸುದ್ದಿ ಕೇಳಿದ್ದ ಜನರು, ಇದೀಗ ಮತ್ತೆ ಬೆಲೆ ಏರಿಕೆಯ ಶಾಕ್‌ಗೆ ಒಳಗಾಗುವಂತಾಗಿದೆ. ಏಕೆಂದರೆ ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿನ್ನೆಗಿಂತ ಇಂದು ಮತ್ತೆ ಏರಿಕೆಯಾಗಿದೆ.

ನಾರಿಮಣಿಯರು ಅತಿಹೆಚ್ಚು ಇಷ್ಟ ಪಡುವುದೇ ಬಂಗಾರ. ಎಷ್ಟೇ ಹಣ ಬಂದರೂ ಅವರು ಮೊದಲು ಹೂಡಿಕೆ ಮಾಡುವುದು ಚಿನ್ನ ಹಾಗೂ ಬೆಳ್ಳಿ ಮೇಲೆ. ಈ ಚಿನ್ನದ ಮೇಲಿನ ಹೂಡಿಕೆ ಒಂಥರಾ ತ್ವರಿತವಾಗಿರುವ ಆಸ್ತಿಯಂತೆ. ಈ ಚಿನ್ನ ಎಲ್ಲದ್ದಕ್ಕಿಂತ ದೊಡ್ಡ ಆಸ್ತಿ ಎಂದರೂ ತಪ್ಪಾಗಲ್ಲ. ಮಹಿಳೆಯರು ಆಭರಣ ತೊಟ್ಟು ಅಲಂಕಾರಕ್ಕಷ್ಟೇ ಚಿನ್ನವನ್ನು ಇಷ್ಟ ಪಡಲ್ಲ. ಕಷ್ಟ ಬಂದಾಗ ಚಿನ್ನ ನೆರವಿಗೆ ಬರುವ ಸಾಧನ ಎಂದು ಸಹ ಭಾವಿಸುತ್ತಾರೆ. ಹೀಗಾಗಿ ಚಿನ್ನ ಒಂದು ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ. ಆದರೆ ಚಿನ್ನದ ಬೆಲೆ ದಿನೇ ದಿನೆ ಏರಿಕೆ ಕಾಣುತ್ತಿರುವುದು, ಎಲ್ಲಾ ವರ್ಗದ ಜನರಿಗೆ ದೊಡ್ಡ ಶಾಕ್ ಅಂತಲೇ ಹೇಳಬಹುದು. ಹಾಗಾದರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ, 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,045 ಇದೆ. ಅಂದರೆ ನಿನ್ನೆ ₹8,025 ಆಗಿದ್ದು ಇಂದು ₹20 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 80 ಸಾವಿರದ 450 ರೂ. ಇದೆ. ಅಂದರೆ ನಿನ್ನೆ 80 ಸಾವಿರದ 250 ರೂ. ಆಗಿದ್ದು ಇಂದು ₹200 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 4 ಸಾವಿರದ 500 ರೂ. ಇದೆ. ಅಂದರೆ ನಿನ್ನೆ 8 ಲಕ್ಷ 2 ಸಾವಿರದ 500 ರೂ. ಆಗಿದ್ದು ಇಂದು ₹2,000 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ
24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,777 ಇದೆ. ಅಂದರೆ ನಿನ್ನೆಯ ಬೆಲೆ ₹8,755 ಆಗಿದ್ದು ಇಂದು ಪ್ರತಿ ಗ್ರಾಂಗೆ ₹22 ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 87 ಸಾವಿರದ 770 ರೂ. ಇದೆ. ಅಂದರೆ ನಿನ್ನೆಯ ಬೆಲೆ 87 ಸಾವಿರದ 550 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹220 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 77 ಸಾವಿರದ 700 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 8 ಲಕ್ಷದ 75 ಸಾವಿರದ 500 ರೂ. ಆಗಿದ್ದು ಇಂದು ₹2,200 ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
19 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,582 ಇದೆ. ಅಂದರೆ ನಿನ್ನೆಯ ಬೆಲೆ ₹6,566 ಆಗಿದ್ದು ಇಂದು ಪ್ರತಿ ಗ್ರಾಂಗೆ ₹16 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ10 ಗ್ರಾಂಗೆ 65 ಸಾವಿರದ 820 ರೂ. ಇದೆ. ಅಂದರೆ ನಿನ್ನೆಯ ಬೆಲೆ 65 ಸಾವಿರದ 660 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹160 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 6 ಲಕ್ಷ 58 ಸಾವಿರದ 200 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 6 ಲಕ್ಷದ 56 ಸಾವಿರದ 600 ರೂ. ಆಗಿದ್ದು ಇಂದು ₹1,600 ಏರಿಕೆಯಾಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಹೇಗಿದೆ..?
ಭಾರತದಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 100.50 ರೂ. ಇದೆ. 10 ಗ್ರಾಂ ಬೆಳ್ಳಿಯ ಬೆಲೆ 1,005 ರೂ. ಇದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ 10,050 ರೂ.ಆಗಿದ್ದು, 1000 ಗ್ರಾಂ ( ಒಂದು ಕೆ.ಜಿ) ಬೆಳ್ಳಿ ಬೆಲೆ 1 ಲಕ್ಷದ 500 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ನಗರ 22K ಚಿನ್ನ 24K ಚಿನ್ನ 18K ಚಿನ್ನ
ಚೆನೈ ₹8,045 ₹8,777 ₹6,582
ಮುಂಬೈ ₹8,045 ₹8,777 ₹6,582
ದಹಲಿ ₹8,060 ₹8,792 ₹6,595
ಬೆಂಗಳೂರು ₹8,045 ₹8,777 ₹6,582
ಹೈದರಾಬಾದ್ ₹8,045 ₹8,777 ₹6,582
ಕೇರಳ ₹8,045 ₹8,777 ₹6,582
ಪುಣೆ ₹8,045 ₹8,777 ₹6,582
ಬರೋಡಾ ₹8,050 ₹8,782 ₹6,587
ಅಹಮದಾಬಾದ್ ₹8,050 ₹8,782 ₹6,587
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ:
ನಗರ 10 ಗ್ರಾಂ 100 ಗ್ರಾಂ 1 ಕೆಜಿ
ಚೆನೈ ₹1,070 ₹10,700 ₹1,07,000
ಮುಂಬೈ ₹1,005 ₹10,050 ₹1,00,500
ದೆಹಲಿ ₹1,005 ₹10,050 ₹1,00,500
ಕೋಲ್ಕತಾ ₹1,005 ₹10,050 ₹1,00,500
ಬೆಂಗಳೂರು ₹1,005 ₹10,050 ₹1,00,500
ಹೈದರಾಬಾದ್ ₹1,070 ₹10,700 ₹1,07,000
ಕೇರಳ ₹1,080 ₹10,800 ₹1,08,000
ಪುಣೆ ₹1,005 ₹10,050 ₹1,00,500
ಬರೋಡಾ ₹1,005 ₹10,050 ₹1,00,500
ಅಹಮದಾಬಾದ್ ₹1,005 ₹10,050 ₹1,00,500
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?
ರಾಯಿಟರ್ಸ್ ಪ್ರಕಾರ 05:01 GMT ರಂತೆ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ.0.4 ರಷ್ಟು ಕುಸಿದು $2,927.89 ಕ್ಕೆ ತಲುಪಿದೆ. ಈ ಕುಸಿತದ ಹೊರತಾಗಿಯೂ, ಈ ವಾರ ಬೆಳ್ಳಿಯು ಶೇ.1 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ಗುರುವಾರ ದಾಖಲೆಯ ಗರಿಷ್ಠ $2,954.69 ತಲುಪಿದೆ. ಯುಎಸ್ ಚಿನ್ನದ ಭವಿಷ್ಯವು ಶೇ.0.5ರಷ್ಟು ಕುಸಿದು $2,942 ಕ್ಕೆ ತಲುಪಿದೆ.ಆದರೆ ಸ್ಪಾಟ್ ಬೆಳ್ಳಿ ಕೂಡ ಶೇ.0.4ರಷ್ಟು ಕುಸಿದು ಪ್ರತಿ ಔನ್ಸ್‌ಗೆ $32.79 ಕ್ಕೆ ತಲುಪಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications