ಗುರುವಾರ ಕುಸಿತ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಯುದ್ಧದ ಭೀತಿ, ಭಾರತದಲ್ಲಿ ಕುಸಿಯುತ್ತಿರುವ ಷೇರು ಮಾರುಕಟ್ಟೆ ಪರಿಣಾಮ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾದ ಕಾರಣ ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಗುರುವಾರ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 60 ರೂಪಾಯಿ ಕಡಿಮೆಯಾಗುವ ಮೂಲಕ ವ್ಯಾಪಾರಿಗಳಲ್ಲಿ ಸಂತಸ ತಂದಿತ್ತು, ಶುಕ್ರವಾರ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 11 ರೂಪಾಯಿ ಏರಿಕೆ ಕಂಡಿದೆ.
22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 100 ರೂಪಾಯಿ ಏರಿಕೆಯಾಗಿದೆ. ಗುರುವಾರ 72,850 ರೂಪಾಯಿ ಇದ್ದ ಆಭರಣ ಚಿನ್ನದ ಬೆಲೆ ಶುಕ್ರವಾರ 72,950 ರೂಪಾಯಿಗೆ ಏರಿಕೆಯಾಗಿದೆ. ಒಂದು ಗ್ರಾಂ ಆಭರಣ ಚಿನ್ನದ ಬೆಲೆ 10 ರೂಪಾಯಿ ಏರಿಕೆ ಕಂಡಿದೆ. ಗುರುವಾರ 7,285 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 7,295 ರೂಪಾಯಿಗೆ ಏರಿಕೆಯಾಗಿದೆ.

24 ಕ್ಯಾಟರ್ ಚಿನ್ನದ ಬೆಲೆ 100 ಗ್ರಾಂಗೆ 110 ರೂಪಾಯಿ ಏರಿಕೆಯಾಗಿದೆ. ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 11 ರೂಪಾಯಿ ಏರಿಕೆಯಾಗಿದೆ. ಗುರುವಾರ 7,947 ರೂಪಾಯಿ ಇದ್ದ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ ಶುಕ್ರವಾರ 7,958 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 79,580 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಏರಿಕೆಯಾಗಿದ್ದು, ಪ್ರತಿ ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 8 ರೂಪಾಯಿ ಏರಿಕೆಯಾಗಿದೆ. ಗುರುವಾರ 5,961 ರೂಪಾಯಿ ಇದ್ದ 18 ಕ್ಯಾರಟ್ ಚಿನ್ನದ ಬೆಲೆ 5,969 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 80 ರೂಪಾಯಿ ಏರಿಕೆ ಕಂಡಿದೆ. ಗುರುವಾರ 59,610 ರೂಪಾಯಿ ಇದ್ದ 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 59,690 ರೂಪಾಯಿಗೆ ಏರಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಗ್ಮಾಂಟ್ ಗೋಲ್ಡ್ ಫಾರ್ ಆಲ್ ಸಂಸ್ಥೆಯ ಮುಖ್ಯ ಸಂಶೋಧಕಿ ರೆನಿಶಾ ಚೈನಾನಿ, ನವೆಂಬರ್ 5ರಂದು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಶ್ವೇತಭವನ ಪ್ರವೇಶಿಸಲು ಎರಡು ಪಕ್ಷಗಳ ನಡುವೆ ಹೋರಾಟ ನಡೆಯುತ್ತಿದೆ. ಇದರ ಜೊತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವೆ ಸಂಘರ್ಷ ಉಲ್ಬಣವಾಗುತ್ತಿದೆ. ಉಕ್ರೇನ್ ಜೊತೆ ಸಂಘರ್ಷ ತೀವ್ರಗೊಳಿಸಲು ರಷ್ಯಾಗೆ ಉತ್ತರ ಕೊರಿಯಾ ಪಡೆಗಳನ್ನು ಕಳಿಸಿದೆ ಎನ್ನುವ ಸುದ್ದಿ ಕೂಡ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಯುಎಸ್ ಚುನಾವಣೆ ಫಲಿತಾಂಶದ ಬಗ್ಗೆ ಗೊಂದಲಗಲು ಜಾಗತಿಕವಾಗಿ ಪರಿಣಾಮ ಬೀರುತ್ತಿವೆ. ಚಿನ್ನದ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ಬೆಳ್ಳಿ ಬೆಲೆ ಕುಸಿತ
ಒಂದು ಕಡೆ ಚಿನ್ನದ ಬೆಲೆ ಏರಿಕೆ ಕಂಡರೆ ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆ 3000 ರೂಪಾಯಿ ಕುಸಿತ ಕಂಡಿದೆ. ಗುರುವಾರ 1,01,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಶುಕ್ರವಾರ 98,000 ರೂಪಾಯಿಗೆ ಕುಸಿದಿದೆ.


Click it and Unblock the Notifications