ಅಯ್ಯಯ್ಯೋ, ವಾರವಿಡೀ ಏರಿಕೆಯ ಹಾದಿಯಲ್ಲಿದೆ ಭಾರತದಲ್ಲಿ ಚಿನ್ನದ ದರ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ದಿನಹೋದಂತೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಇದೆ. ಇದೀಗ ಇಂದು ಚಿನ್ನದ ದರ (Gold Rate) ಭಾರೀ ಏರಿಕೆ ಕಂಡಿದೆ. ಹಾಗಿದ್ರೆ 24K, 22K, 18K ಚಿನ್ನದ ಬೆಲೆ ಇಂದು ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ ಇಂದು 14,122 ರೂ. ಆಗಿದ್ದು, ನಿನ್ನೆ 13,002 ರೂ. ಇತ್ತು. ನಿನ್ನೆಗಿಂತ ಇಂದು ₹120 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,12,976 ರೂ. ಆಗಿದ್ದು, ನಿನ್ನೆ 1,12,016 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹960 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,41,220 ರೂ. ಆಗಿದ್ದು, ನಿನ್ನೆ 1,40,020 ರೂ. ಇತ್ತು. ನಿನ್ನೆಗಿಂತ ಇಂದು 1,200 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,12,200 ರೂ. ಆಗಿದ್ದು, ನಿನ್ನೆ 14,00,200 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 12,945 ರೂ. ಆಗಿದ್ದು, ನಿನ್ನೆ 12,835 ರೂ. ಇತ್ತು. ಒಟ್ಟು ₹110 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,03,560 ರೂ. ಆಗಿದ್ದು, ನಿನ್ನೆ 1,02,680 ರೂ. ಇತ್ತು. ನಿನ್ನೆಗಿಂತ ಇಂದು ₹880 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,29,450 ರೂ. ಆಗಿದ್ದು, ನಿನ್ನೆ 1,28,350 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,100 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 12,94,500 ರೂ. ಆಗಿದ್ದು, ನಿನ್ನೆ 12,83,500 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 11,000 ರೂ. ಹೆಚ್ಚಳ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ 1 ಗ್ರಾಂ ಬೆಲೆ ಇಂದು 10,592 ರೂ. ಆಗಿದ್ದು, ನಿನ್ನೆ 10,502 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ₹90 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹84,736 ರೂ. ಆಗಿದ್ದು, ನಿನ್ನೆ 84,016 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹720 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,05,920 ರೂ. ಆಗಿದ್ದು, ನಿನ್ನೆ 1,05,020 ರೂ. ಇತ್ತು. ನಿನ್ನೆಗಿಂತ ಇಂದು ₹900 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 10,59,200 ರೂ. ಆಗಿದ್ದು, ನಿನ್ನೆ 10,50,200 ರೂ. ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 14,182, 22K ರೂ. 13,000, 18K ರೂ. 10,850
ಮುಂಬೈ: 24K ರೂ. 14,122, 22K ರೂ. 12,945, 18K ರೂ. 10,592
ದೆಹಲಿ: 24K ರೂ. 14,137, 22K ರೂ. 12,960, 18K ರೂ. 10,607
ಕೋಲ್ಕತ್ತಾ: 24K ರೂ. 14,122, 22K ರೂ. 12,945, 18K ರೂ. 10,592
ಬೆಂಗಳೂರು: 24K ರೂ. 14,122, 22K ರೂ. 12,945, 18K ರೂ. 10,592
ಹೈದರಾಬಾದ್: 24K ರೂ. 14,122, 22K ರೂ. 12,945, 18K ರೂ. 10,592
ಕೇರಳ: 24K ರೂ. 14,122, 22K ರೂ. 12,945, 18K ರೂ. 10,592
ಪುಣೆ: 24K ರೂ. 14,122, 22K ರೂ. 12,945, 18K ರೂ. 10,592
ವಡೋದರಾ: 24K ರೂ. 14,127, 22K ರೂ. 12,950, 18K ರೂ. 10,597
ಅಹಮದಾಬಾದ್: 24K ರೂ. 14,127, 22K ರೂ. 12,950, 18K ರೂ. 10,597
ಬೆಳ್ಳಿ ಬೆಲೆ:
ಇತ್ತೀಚೆಗೆ ಚಿನ್ನದ ಬೆಲೆ ಕೂಡಾ ಭಾರೀ ಏರಿಕೆ ಕಾಣುತ್ತಿದೆ. ಇಂದು 1 ಗ್ರಾಂ ಬೆಳ್ಳಿ ದರ ₹251 ರೂ. ಆಗಿದ್ದು, ನಿನ್ನೆ ₹240 ರೂ. ಇತ್ತು. ನಿನ್ನೆಗಿಂತ ಇಂದು ₹11 ರೂ. ಹೆಚ್ಚಳವಾಗಿದೆ. 8 ಗ್ರಾಂ ಬೆಳ್ಳಿ ದರ ₹2,008 ರೂ. ಆಗಿದ್ದು, ನಿನ್ನೆ ₹1,920 ರೂ. ಇತ್ತು. ಒಟ್ಟು ₹88 ರೂ. ಏರಿಕೆಯಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ದರ ₹2,510, 100 ಗ್ರಾಂ ಬೆಳ್ಳಿ ಬೆಲೆ ₹25,100 ರೂ., 1000 ಗ್ರಾಂ ಬೆಳ್ಳಿ ದರ ₹2,51,000 ರೂ. ಹೆಚ್ಚಳ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 26ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಬೆಳ್ಳಿ ಮೊದಲ ಬಾರಿ $77ರ ಗಡಿಯನ್ನು ದಾಟಿದೆ. ಆದರೆ ಚಿನ್ನ ಮತ್ತ ಪ್ಲಾಟಿನಂ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಇನ್ನು ಯುಎಸ್ ಫೆಡರಲ್ ರಿಸರ್ವ್ ದರ ಕಡಿತ ನಿರೀಕ್ಷೆಯೂ ಬೆಲೆ ಏರಿಕೆ ಕಾರಣವಾಗಿದೆ.


Click it and Unblock the Notifications