ದೀಪಾವಳಿ ಹಬ್ಬಕ್ಕೆ ಚಿನ್ನ ಕೊಳ್ಳುವ ಯೋಜನೆಯಲ್ಲಿದ್ದ ಆಭರಣ ಪ್ರಿಯರಿಗೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ. ಶನಿವಾರ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಮತ್ತೊಮ್ಮೆ ಗ್ರಾಂಗೆ 8,000 ರೂಪಾಯಿ ದಾಟಿದೆ. ಶನಿವಾರ ಒಂದೇ ದಿನ ಒಂದು ಕ್ಯಾರಟ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 71 ರೂಪಾಯಿ ಏರಿಕೆಯಾಗಿದೆ.
ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿರುವುದು, ರಷ್ಯಾ ಉಕ್ರೇನ್ ಸಂಘರ್ಷ ಮತ್ತು ಯುಎಸ್ ಚುನಾವಣೆಗಳ ಅನಿಶ್ಚಿತತೆಗಳು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಕಳೆದ ವಾರದಲ್ಲಿ ಒಂದು ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡರೆ ಉಳಿದ ದಿನ ಬೆಲೆ ಏರಿಕೆಯಾಗುತ್ತಲೇ ಇದೆ.

ಭಾರತದಲ್ಲಿ ಶನಿವಾರ ಒಂದೇ ದಿನ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 650 ರೂಪಾಯಿ ಏರಿಕೆಯಾಗಿದೆ. 1 ಗ್ರಾಂ ಆಭರಣ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಏರಿಕೆಯಾಗಿದೆ. 100 ಗ್ರಾಂ ಆಭರಣ ಚಿನ್ನದ ಬೆಲೆ 6500 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 7295 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಶನಿವಾರ 7360 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಆಭರಣ ಚಿನ್ನದ ಬೆಲೆ ಶುಕ್ರವಾರ 7,29,500 ರೂಪಾಯಿ ಇದ್ದರೆ ಶನಿವಾರ 7,36,000 ರೂಪಾಯಿಗೆ ಏರಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 71 ರೂಪಾಯಿ ಏರಿಕೆಯಾಗಿದೆ. 100 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ 7,100 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 7,958 ರೂಪಾಯಿ ಇದ್ದ 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ ಶನಿವಾರ 8,029 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 7,95,800 ರೂಪಾಯಿ ಇದ್ದರೆ ಶನಿವಾರ 8,02,900 ರೂಪಾಯಿಗೆ ಏರಿಕೆಯಾಗಿದೆ.
18 ಗ್ರಾಂ ಚಿನ್ನದ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ. ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 53 ರೂಪಾಯಿ ಏರಿಕೆಯಾಗಿದೆ. ಶುಕ್ರವಾರ 5,969 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನದ ಬೆಲೆ ಶನಿವಾರ 6,022 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 59,690 ರೂಪಾಯಿ ಇದ್ದರೆ ಶನಿವಾರ 60,220 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಒಂದು ಕಡೆ ಚಿನ್ನದ ಬೆಲೆ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಶುಕ್ರವಾರ ಕೂಡ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 3,000 ರೂಪಾಯಿ ಕಡಿಮೆಯಾಗಿದ್ದರೆ, ಶನಿವಾರ ಕೂಡ 1,000 ರೂಪಾಯಿ ಕುಸಿತ ಕಂಡಿದೆ.


Click it and Unblock the Notifications