Gold Rate: ಚಿನ್ನಪ್ರಿಯರಿಗೆ 'ಮಂಗಳಕರ' ಸುದ್ದಿ..ಇಂದು ಕೊಂಡರೆ 24K ಚಿನ್ನದಲ್ಲಿ 8,800 ಉಳಿತಾಯ! ಹಾಗಾದ್ರೆ ಬೆಲೆ ಎಷ್ಟು?

ಭಾರತದಲ್ಲಿ ಚಿನ್ನದ ಬೆಲೆಗಳು ಇಂದು ಮತ್ತೆ ಜಾರಿಕೊಂಡಿವೆ. 24 ಕ್ಯಾರೆಟ್‌ನಿಂದ 18 ಕ್ಯಾರೆಟ್‌ವರೆಗೆ ಎಲ್ಲ ವರ್ಗಗಳಲ್ಲಿಯೂ ದರ ಇಳಿಕೆ ಕಂಡುಬಂದಿದ್ದು, ಮದುವೆ, ಹೂಡಿಕೆ ಅಥವಾ ಆಭರಣ ಖರೀದಿ ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ. 24 ಕ್ಯಾರೆಟ್ ನೂರು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 8.800 ಇಳಿಕೆಯಾಗಿದ್ದು, ನಿನ್ನೆಗಿಂತ ಇಂದು 8,800 ಉಳಿಸಬಹುದಾಗಿದೆ. ಹಾಗಾದರೆ ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ.

ಚಿನ್ನದ ದರ ಭಾರಿ ಇಳಿಕೆ..ಇಂದು 8,800 ರೂ ಉಳಿತಾಯ!

ಭಾರತದಲ್ಲಿ 24 ಕ್ಯಾರೆಟ್ ಚಿನ್ನ:

ಇಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ.10,140 ಆಗಿದ್ದು, ನಿನ್ನೆಗಿಂತ ರೂ.88 ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ.1,01,400 ಆಗಿದ್ದು, ಇದು ನಿನ್ನೆಗಿಂತ ರೂ.880 ಇಳಿಕೆಯಾಗಿದೆ. ದೊಡ್ಡ ಪ್ರಮಾಣಕ್ಕೆ, 100 ಗ್ರಾಂ ಚಿನ್ನದ ಇಂದಿನ ಬೆಲೆ ರೂ.10,14,000 ಆಗಿದ್ದು, ನಿನ್ನೆಗಿಂತ ರೂ.8,800 ಕುಸಿತವಾಗಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನ:

ಇಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ.9,295 ಆಗಿದ್ದು, ನಿನ್ನೆಗಿಂತ ರೂ.80 ಇಳಿಕೆಯಾಗಿದೆ. 10 ಗ್ರಾಂ ಬೆಲೆ ರೂ.92,950 ಆಗಿದ್ದು, ಇದು ನಿನ್ನೆಗಿಂತ ರೂ.800 ಕಡಿಮೆಯಾಗಿದೆ. 100 ಗ್ರಾಂ ಚಿನ್ನವನ್ನು ಖರೀದಿಸಲು ಇಂದು ರೂ.9,29,500 ಖರ್ಚಾಗಲಿದ್ದು, ನಿನ್ನೆಗಿಂತ ರೂ.8,000 ಇಳಿಕೆಯಾಗಿದೆ.

ಭಾರತದಲ್ಲಿ 18 ಕ್ಯಾರೆಟ್ ಚಿನ್ನ:

ಭಾರತದಲ್ಲಿ 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು ರೂ.7,605 ಆಗಿದ್ದು, ನಿನ್ನೆಗಿಂತ ರೂ.66 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ರೂ.76,050 ಆಗಿದ್ದು, ನಿನ್ನೆಗಿಂತ ರೂ.660 ಕಡಿಮೆಯಾಗಿದೆ. 100 ಗ್ರಾಂ ಚಿನ್ನವನ್ನು ಇಂದು ಖರೀದಿಸಲು ರೂ.7,60,500 ಬೇಕಾಗಿದ್ದು, ನಿನ್ನೆಗಿಂತ ರೂ.6,600 ಇಳಿಕೆಯಾಗಿದೆ.

ಭಾರತದ ಬೇರೆ ನಗರಗಳಲ್ಲಿ ಎಷ್ಟಿದೆ ಬೆಲೆ?

ಇಂದು ಭಾರತದ ಪ್ರಮುಖ ನಗರಗಳಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ದರವು ಸಾಮಾನ್ಯವಾಗಿ ರೂ.10,140ರ ಸುತ್ತ ಮುತ್ತ ಉಳಿದಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೇರಳ, ಪುಣೆಗಳಲ್ಲಿ ಬೆಲೆ ರೂ.10,140 ಇದ್ದರೆ, ದೆಹಲಿಯಲ್ಲಿ ಸ್ವಲ್ಪ ಹೆಚ್ಚು ರೂ.10,155, ವಡೋದರಾ ಮತ್ತು ಅಹಮದಾಬಾದ್‌ನಲ್ಲಿ ರೂ.10,145 ಇದೆ. 22 ಕ್ಯಾರೆಟ್ ಚಿನ್ನದ ಬೆಲೆ ಹೆಚ್ಚಿನ ನಗರಗಳಲ್ಲಿ ರೂ.9,295 ಇದ್ದು, ದೆಹಲಿಯಲ್ಲಿ ರೂ.9,310, ವಡೋದರಾ ಮತ್ತು ಅಹಮದಾಬಾದ್‌ನಲ್ಲಿ ರೂ.9,300 ಇದೆ. 18 ಕ್ಯಾರೆಟ್ ಚಿನ್ನದ ಬೆಲೆ ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೇರಳ, ಪುಣೆಗಳಲ್ಲಿ ರೂ.7,605 ಇದ್ದರೆ, ಚೆನ್ನೈಯಲ್ಲಿ ಸ್ವಲ್ಪ ಹೆಚ್ಚಾಗಿ ರೂ.7,675, ದೆಹಲಿಯಲ್ಲಿ ರೂ.7,618 ಮತ್ತು ವಡೋದರಾ ಹಾಗೂ ಅಹಮದಾಬಾದ್‌ನಲ್ಲಿ ರೂ.7,609 ಇದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆ:

ಇಂದು ಭಾರತದಲ್ಲಿ ಬೆಳ್ಳಿಯ ಬೆಲೆ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ರೂ.115 ಆಗಿದ್ದು, ನಿನ್ನೆಗಿಂತ ರೂ.2 ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ರೂ.1,150 ಆಗಿದ್ದು, ಇದು ನಿನ್ನೆಗಿಂತ ರೂ.20 ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ರೂ.11,500 ಆಗಿದ್ದು, ರೂ.200 ಇಳಿಕೆಯಾಗಿದೆ. 1 ಕಿಲೋ ಬೆಳ್ಳಿಯ ದರ ರೂ.1,15,000 ಆಗಿದ್ದು, ನಿನ್ನೆಗಿಂತ ರೂ.2,000 ಕಡಿಮೆಯಾಗಿದೆ. ಒಟ್ಟಾರೆ, ಬೆಳ್ಳಿ ಖರೀದಿಸಲು ಇಂದಿನ ದರ ಹೂಡಿಕೆದಾರರು ಮತ್ತು ಆಭರಣ ಪ್ರಿಯರಿಗೆ ಅನುಕೂಲಕರವಾಗಿದೆ.

ಸ್ಪಾಟ್ ಗೋಲ್ಡ್ ವಿವರ:

ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರ ಇಂದು ಬೆಳಗ್ಗೆ 04:53 GMT ವೇಳೆಗೆ 0.3% ಏರಿಕೆ ಕಂಡು, ಪ್ರತಿ ಔನ್ಸ್‌ಗೆ 3,354.91 ಡಾಲರ್ ತಲುಪಿದೆ. ಇದೇ ವೇಳೆ, ಅಮೆರಿಕದ ಡಿಸೆಂಬರ್ ವಿತರಣೆಗೆ ನಿಗದಿತ ಚಿನ್ನದ ಭವಿಷ್ಯ ವಹಿವಾಟು ದರವು ಯಾವುದೇ ಬದಲಾವಣೆ ಇಲ್ಲದೆ 3,405.40 ಡಾಲರ್ ಮಟ್ಟದಲ್ಲಿ ಸ್ಥಿರವಾಗಿದೆ.

ಇಂದಿನ ಚಿನ್ನದ ದರದಲ್ಲಿ ಕಂಡುಬಂದ ಈ ಇಳಿಕೆ, ಹೂಡಿಕೆದಾರರಿಗೆ ಖರೀದಿ ಮಾಡಲು ಒಳ್ಳೆಯ ಅವಕಾಶ ಒದಗಿಸಿದೆ. ಮಾರುಕಟ್ಟೆಯ ಪರಿಸ್ಥಿತಿ, ಅಂತರರಾಷ್ಟ್ರೀಯ ದರ ಬದಲಾವಣೆ ಮತ್ತು ಕರೆನ್ಸಿ ಮೌಲ್ಯದ ಅಸ್ಥಿರತೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿ ಮತ್ತಷ್ಟು ಚಲನವಲನ ತರಬಹುದೆಂಬ ನಿರೀಕ್ಷೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+