ಚಿನ್ನಪ್ರಿಯರಿಗೆ ಇಂದು ಕಹಿಸುದ್ದಿ ಇಲ್ಲ. ಯಾಕಂದ್ರೆ ಎರಡ್ಮೂರು ದಿನಗಳಿಂದ ಇಳಿಕೆ ನೋಡಿದ್ದ ಚಿನ್ನ ಎಲ್ಲಿ ಏರಿಕೆಯಾಗುತ್ತದೋ ಎಂಬ ಭಯ ಹುಟ್ಟಿಸಿತ್ತು. ಆದ್ರೆ ಇಂದು ಇಳಿಕೆಯೂ ಅಲ್ಲ, ಏರಿಕೆಯೂ ಅಲ್ಲ. ಭಾರತದಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಸ್ಥಿರವಾಗಿದೆ. 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಎಲ್ಲ ದರಗಳಲ್ಲೂ ನಿನ್ನೆಗಿಂತ ಯಾವುದೇ ಬದಲಾವಣೆ ಕಂಡುಬಂದಿಲ್ಲ. 1 ಗ್ರಾಂನಿಂದ 100 ಗ್ರಾಂವರೆಗೆ ಎಲ್ಲಾ ಪ್ರಮಾಣಗಳ ಬೆಲೆ ಯಥಾಸ್ಥಿತಿಯಲ್ಲೇ ಇರುವುದರಿಂದ ಚಿನ್ನ ಖರೀದಿಸಲು ಬಯಸುವವರಿಗೆ ಇದು ಸ್ಥಿರ ದರದ ಪರಿಸ್ಥಿತಿಯಾಗಿದೆ.

ಬೆಲೆಯ ಸ್ಥಿರತೆ ಮಾರುಕಟ್ಟೆಯ ಬೇಡಿಕೆ ಹಾಗೂ ಪೂರೈಕೆ ಸಮತೋಲನದಲ್ಲಿರುವುದನ್ನು ಸೂಚಿಸುತ್ತದೆ. ಹೂಡಿಕೆ ಅಥವಾ ಆಭರಣ ಖರೀದಿ ಉದ್ದೇಶದಿಂದ ಚಿನ್ನ ಪಡೆಯುವವರು, ತಾತ್ಕಾಲಿಕವಾಗಿ ಏರಿಳಿತದ ಆತಂಕವಿಲ್ಲದೆ ಖರೀದಿ ಮಾಡಲು ಇದು ಅನುಕೂಲಕರ ಸಮಯವಾಗಬಹುದು.
ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಸ್ಥಿರವಾಗಿದೆ. 1 ಗ್ರಾಂ 24K ಚಿನ್ನದ ಬೆಲೆ ರೂ.10,135 ಆಗಿದ್ದು, 10 ಗ್ರಾಂ ಬೆಲೆ ರೂ.1,01,350 ಆಗಿದೆ. ಹೆಚ್ಚಿನ ಪ್ರಮಾಣಕ್ಕೆ, 100 ಗ್ರಾಂ ಚಿನ್ನವನ್ನು ಖರೀದಿಸಲು ರೂ.10,13,500 ಖರ್ಚಾಗುತ್ತದೆ. ನಿನ್ನೆಗಿನೊಂದಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಭಾರತದಲ್ಲಿ 22K ಚಿನ್ನದ ಬೆಲೆ:
22 ಕ್ಯಾರೆಟ್ ಚಿನ್ನದ ದರದಲ್ಲೂ ಇಂದು ಯಾವುದೇ ಏರಿಳಿತವಾಗಿಲ್ಲ. 1 ಗ್ರಾಂ 22K ಚಿನ್ನದ ಬೆಲೆ ರೂ.9,290 ಆಗಿದ್ದು, 10 ಗ್ರಾಂ ಬೆಲೆ ರೂ.92,900 ಆಗಿದೆ. ದೊಡ್ಡ ಪ್ರಮಾಣಕ್ಕೆ, 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.9,29,000 ಆಗಿದೆ. ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಖರೀದಿದಾರರಿಗೆ ಸ್ಥಿರ ಮಾರುಕಟ್ಟೆ ಪರಿಸ್ಥಿತಿ ಮುಂದುವರಿದಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18 ಕ್ಯಾರೆಟ್ ಚಿನ್ನದ ಬೆಲೆಯೂ ಸ್ಥಿರವಾಗಿದೆ. 1 ಗ್ರಾಂ ಬೆಲೆ ರೂ.7,601 ಆಗಿದ್ದು, 10 ಗ್ರಾಂ ಬೆಲೆ ರೂ.76,010 ಆಗಿದೆ. ಹೆಚ್ಚಿನ ಪ್ರಮಾಣದಲ್ಲಿ 100 ಗ್ರಾಂ 18K ಚಿನ್ನದ ಬೆಲೆ ರೂ.7,60,100 ಆಗಿದೆ. ನಿನ್ನೆಗೂ ಹೋಲಿಸಿದರೆ ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಭಾರತದ ಬೇರೆ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
- ಚೆನ್ನೈನಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,675.
- ಮುಂಬೈನಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ದೆಹಲಿಯಲ್ಲಿ 1 ಗ್ರಾಂ 24K ಚಿನ್ನ ರೂ.10,150, 22K ರೂ.9,305, 18K ರೂ.7,614.
- ಕೋಲ್ಕತ್ತಾದಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ಬೆಂಗಳೂರಿನಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ಹೈದರಾಬಾದ್‌ನಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ಕೇರಳದಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ಪುಣೆಯಲ್ಲಿ 1 ಗ್ರಾಂ 24K ಚಿನ್ನ ರೂ.10,135, 22K ರೂ.9,290, 18K ರೂ.7,601.
- ವಡೋದರದಲ್ಲಿ 1 ಗ್ರಾಂ 24K ಚಿನ್ನ ರೂ.10,140, 22K ರೂ.9,295, 18K ರೂ.7,605.
- ಅಹಮದಾಬಾದ್‌ನಲ್ಲಿ 1 ಗ್ರಾಂ 24K ಚಿನ್ನ ರೂ.10,140, 22K ರೂ.9,295, 18K ರೂ.7,605.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿಯ ದರ ಸ್ವಲ್ಪ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ರೂ.116 ಆಗಿದ್ದು, ನಿನ್ನೆಗಿಂತ ರೂ.1 ಹೆಚ್ಚಾಗಿದೆ. 10 ಗ್ರಾಂ ಬೆಲೆ ರೂ.1,160 ಆಗಿದ್ದು, ಇದು ನಿನ್ನೆಗಿಂತ ರೂ.10 ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣಕ್ಕೆ, 100 ಗ್ರಾಂ ಬೆಳ್ಳಿ ರೂ.11,600 ಮತ್ತು 1 ಕೆಜಿ (1000 ಗ್ರಾಂ) ಬೆಳ್ಳಿ ರೂ.1,16,000 ಆಗಿದೆ, ಎರಡೂ ಪ್ರಮಾಣಗಳಲ್ಲೂ ಕ್ರಮವಾಗಿ ರೂ.100 ಮತ್ತು ರೂ.1,000 ಏರಿಕೆ ಕಂಡುಬಂದಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಆಗಸ್ಟ್ 14ರಂದು ಪ್ರತಿ ಔನ್ಸ್‌ಗೆ 3,359.81 ಅಮೆರಿಕನ್ ಡಾಲರ್ ಆಗಿದೆ. ಈ ದರವು ತಕ್ಷಣದ ಮಾರುಕಟ್ಟೆ ವ್ಯವಹಾರಗಳ ಆಧಾರದ ಮೇಲೆ ನಿರ್ಧಾರವಾಗಿದ್ದು, ಪ್ರಕಟವಾಗುವಾಗ ಸುಮಾರು 15 ನಿಮಿಷಗಳ ತಾಂತ್ರಿಕ ವಿಳಂಬದಿಂದ ಲಭ್ಯವಾಗುತ್ತದೆ.
ಭಾರತದಲ್ಲಿ ಚಿನ್ನದ ದರ ಇಂದು ಬಹುತೇಕ ಸ್ಥಿರವಾಗಿದೆ. 1 ಗ್ರಾಂ ಬೆಲೆಯಲ್ಲಿ ನಿನ್ನೆಗಿಂತ ಯಾವುದೇ ಗಮನಾರ್ಹ ಬದಲಾವಣೆ ಕಾಣದ ಕಾರಣ, ಮಾರುಕಟ್ಟೆಯಲ್ಲಿ ಖರೀದಿ ಅಥವಾ ಹೂಡಿಕೆ ಮಾಡಲು ಬಯಸುವವರಿಗೆ ಇದು ಸಮತೋಲನದ ಪರಿಸ್ಥಿತಿಯಾಗಿದೆ. ದರದಲ್ಲಿ ಏರಿಳಿತದ ಲಕ್ಷಣಗಳು ಇಲ್ಲದಿರುವುದರಿಂದ ತಾತ್ಕಾಲಿಕವಾಗಿ ಮಾರುಕಟ್ಟೆ ಶಾಂತವಾಗಿದೆ.
ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯದಲ್ಲಿ, ಚಿನ್ನದ ದರ ಸ್ಥಿರವಾಗಿರುವುದು ಹೂಡಿಕೆದಾರರು ಮುಂದಿನ ಆರ್ಥಿಕ ಮಾಹಿತಿಗಳನ್ನು ನಿರೀಕ್ಷಿಸುತ್ತಿರುವುದರಿಂದ ಆಗುತ್ತಿದೆ. ಬಡ್ಡಿದರ ಬದಲಾವಣೆ ಹಾಗೂ ಅಂತರರಾಷ್ಟ್ರೀಯ ಚಿನ್ನದ ಬೇಡಿಕೆಯಂತಹ ಅಂಶಗಳು ಮುಂದಿನ ದಿನಗಳಲ್ಲಿ ದರವನ್ನು ಪ್ರಭಾವಿಸಬಹುದೆಂಬ ನಿರೀಕ್ಷೆಯಿದೆ.
More From GoodReturns

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಭಾರತದಲ್ಲಿ ಇಂದು ಬೆಳ್ಳಿ ದರ ಭರ್ಜರಿ ಹೆಚ್ಚಳ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Price Today: ಇಂದು ಭಾರತದಲ್ಲಿ ಬೆಳ್ಳಿ ದರ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಬೆಲೆ ವಿವರ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ



Click it and Unblock the Notifications