ಮಧ್ಯಪ್ರಾಚ್ಯದಲ್ಲಿ ಶುರುವಾದ ಸಂಘರ್ಷ (Middle East War), ಇದೀಗ ಅಮೂಲ್ಯ ಲೋಹಗಳ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ವಾರವಿಡೀ ಇಳಿಕೆ ಕಂಡಿದ್ದ, ಭಾರತದಲ್ಲಿ ಚಿನ್ನದ ಬೆಲೆ ಇದೀಗ ದಿಢೀರ್ ಏರಿಕೆ ಕಂಡಿದೆ. ಅತ್ತ ಬೆಳ್ಳಿ ಬೆಲೆ ಕೂಡಾ ಭಾರೀ ಹೆಚ್ಚಳವಾಗಿದ್ದು, ಹಾಗಿದ್ರೆ ಎಷ್ಟು ಏರಿಕೆಯಾಗಿದೆ? ಒಟ್ಟು ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ ಇಂದು 15,862 ರೂ. ಆಗಿದ್ದು, ನಿನ್ನೆ 15,742 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹120 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,26,896 ರೂ. ಆಗಿದ್ದು, ನಿನ್ನೆ 1,25,936 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹960 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,58,620 ರೂ. ಆಗಿದ್ದು, ನಿನ್ನೆ 1,57,420 ರೂ. ಇತ್ತು. ನಿನ್ನೆಗಿಂತ ಇಂದು 1,200 ರೂ. ಭಾರೀ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹15,86,200 ರೂ. ಆಗಿದ್ದು, ನಿನ್ನೆ 15,74,200 ರೂ. ಇತ್ತು. ನಿನ್ನೆಗಿಂತ ಇಂದು 12,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,540 ರೂ. ಆಗಿದ್ದು, ನಿನ್ನೆ 14,430 ರೂ. ಇತ್ತು. ನಿನ್ನೆಗಿಂತ ಇಂದು ಬರೀ ₹110 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,16,320 ರೂ. ಆಗಿದ್ದು, ನಿನ್ನೆ 1,15,440 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹880 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,45,400 ರೂ. ಆಗಿದ್ದು, ನಿನ್ನೆ 1,44,300 ರೂ. ಇತ್ತು. ನಿನ್ನೆಗಿಂತ ಇಂದು 1,100 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,54,000 ರೂ. ಆಗಿದ್ದು, ನಿನ್ನೆ 14,43,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 11,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 11,897 ರೂ. ಆಗಿದ್ದು, ನಿನ್ನೆ 11,807 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹90 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 95,176 ರೂ. ಆಗಿದ್ದು, ನಿನ್ನೆ 94,456 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹720 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,18,970 ರೂ. ಆಗಿದ್ದು, ನಿನ್ನೆ 1,18,070 ರೂ. ಇತ್ತು. ನಿನ್ನೆಗಿಂತ ಇಂದು ₹900 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹11,89,700 ರೂ. ಆಗಿದ್ದು, ನಿನ್ನೆ ₹11,80,700 ರೂ. ಇತ್ತು. ಒಂದೇ ದಿನದಲ್ಲಿ 9,000 ರೂ. ಹೆಚ್ಚಳವಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,982, 22K ರೂ. 14,650, 18K ರೂ. 12,330
ಮುಂಬೈ: 24K ರೂ. 15,862, 22K ರೂ. 14,540, 18K ರೂ. 11,897
ದೆಹಲಿ: 24K ರೂ. 15,877, 22K ರೂ. 14,555, 18K ರೂ. 11,912
ಕೋಲ್ಕತ್ತಾ: 24K ರೂ. 15,862, 22K ರೂ. 14,540, 18K ರೂ. 11,897
ಬೆಂಗಳೂರು: 24K ರೂ. 15,862, 22K ರೂ. 14,540, 18K ರೂ. 11,897
ಹೈದರಾಬಾದ್: 24K ರೂ. 15,862, 22K ರೂ. 14,540, 18K ರೂ. 11,897
ಕೇರಳ: 24K ರೂ. 15,862, 22K ರೂ. 14,540, 18K ರೂ. 11,897
ಪುಣೆ: 24K ರೂ. 15,862, 22K ರೂ. 14,540, 18K ರೂ. 11,897
ವಡೋದರಾ: 24K ರೂ. 15,867, 22K ರೂ. 14,545, 18K ರೂ. 11,902
ಅಹಮದಾಬಾದ್: 24K ರೂ. 15,867, 22K ರೂ. 14,545, 18K ರೂ. 11,902
ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ದರವೂ ಭಾರೀ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ₹275 ರೂ. ಆಗಿದ್ದು, ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ 5 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,200 ರೂ., 10 ಗ್ರಾಂ ಬೆಳ್ಳಿ ಬೆಲೆ ₹2,750 ರೂ., 100 ಗ್ರಾಂ ಬೆಳ್ಳಿ ದರ ₹27,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,75,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 17ರ mint ವರದಿ ಪ್ರಕಾರ, ಯುಎಸ್ ಡಾಲರ್ ದುರ್ಬಲಗೊಂಡ ನಂತರ, ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಚಿನ್ನದ ಬೆಲೆ ಹಾಗೇ ಉಳಿದಿದೆ.
ಇಂದು ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ $5,008 ಕ್ಕೆ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.


Click it and Unblock the Notifications