ಇನ್ನೇನು ಇಳಿಕೆಯಾಗೇ ಬಿಡ್ತು ಚಿನ್ನದ ಬೆಲೆ..ಮುಂದೆ ಇನ್ನಷ್ಟು ಇಳಿಕೆಯಾಗಬೋದು ಎಂದು ಕಾದಿದ್ದವರಿಗೆ, ಇಂದಿನ ಬೆಲೆ ಬರೆ ಹಾಕಿದೆ. ಅಂದರೆ ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ ಊಹೆಗೂ ಮೀರಿದಷ್ಟು ಏರಿಕೆ ನೋಡಿದೆ. ಬಜೆಟ್ ನಂತರ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನದ ಬೆಲೆ, ಮುಂದಿನ ದಿನಗಳ ಬಗ್ಗೆ ದೊಡ್ಡ ಭರವಸೆಯ್ನೇ ನೀಡಿತ್ತು. ಕಳೆದ ವಾರದಲ್ಲಿ ಅಗಾಧ ಪ್ರಮಾಣದ ಏರಿಕೆ ನೋಡಿದ್ದ ಬೆಲೆಯು, ಇಂದು ಹೂಡಿಕೆ ಮಾಡುವವರಿಗೆ ಜೇಬು ಕತ್ತರಿಸಿಕೊಳ್ಳುವಂತೆ ಮಾಡಿದೆ.

ಹೌದು, ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಗಳು ನಿನ್ನೆಯ ಹೋಲಿಕೆಯಲ್ಲಿ ಹೆಚ್ಚಳವಾಗಿವೆ. ಹೂಡಿಕೆದಾರರು ಮತ್ತು ಗ್ರಾಹಕರ ಗಮನ ಸೆಳೆಯುವಂತೆ ಇಂದು ಪ್ರತಿ ಗ್ರಾಂದಿಂದ 100 ಗ್ರಾಂವರೆಗೆ ಚಿನ್ನದ ದರದಲ್ಲಿ ಬದಲಾವಣೆ ದಾಖಲಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ - ಬೆಂಗಳೂರು:
ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ. 15,884 ಆಗಿದೆ. ನಿನ್ನೆ ಇದೇ 1 ಗ್ರಾಂ ಚಿನ್ನದ ಬೆಲೆ ರೂ. 15,660 ಇತ್ತು. ಇದರಿಂದ ಇಂದು ಪ್ರತಿ ಗ್ರಾಂಗೆ ರೂ. 224 ಏರಿಕೆ ಕಂಡುಬಂದಿದೆ. 10 ಗ್ರಾಂ ಇಂದಿನ ಬೆಲೆ ರೂ. 1,58,840 ಆಗಿದ್ದು, ನಿನ್ನೆ ರೂ. 1,56,600 ಇತ್ತು. ಅಂದರೆ 10 ಗ್ರಾಂ ಮೇಲೆ ರೂ. 2,240 ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 15,88,400 ಆಗಿದ್ದು, ನಿನ್ನೆ ರೂ. 15,66,000 ಇತ್ತು. ಇದರಿಂದ 100 ಗ್ರಾಂ ಮೇಲೆ ರೂ. 22,400 ಬೆಲೆ ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ - ಬೆಂಗಳೂರು:
ಇಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ. 14,560 ಆಗಿದೆ. ನಿನ್ನೆ 1 ಗ್ರಾಂ ಚಿನ್ನದ ಬೆಲೆ ರೂ. 14,355 ಇತ್ತು. ಇದರಿಂದ ಪ್ರತಿ ಗ್ರಾಂಗೆ ರೂ. 205 ಏರಿಕೆಯಾಗಿದೆ. 10 ಗ್ರಾಂ ಇಂದಿನ ಬೆಲೆ ರೂ. 1,45,600 ಆಗಿದ್ದು, ನಿನ್ನೆ ರೂ. 1,43,550 ಇತ್ತು. ಹೀಗಾಗಿ 10 ಗ್ರಾಂಗೆ ರೂ. 2,050 ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 14,56,000 ಆಗಿದ್ದು, ನಿನ್ನೆ ರೂ. 14,35,500 ಇತ್ತು. ಇದರೊಂದಿಗೆ 100 ಗ್ರಾಂ ಮೇಲೆ ರೂ. 20,500 ಏರಿಕೆ ದಾಖಲಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ - ಬೆಂಗಳೂರು:
ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ. 11,913 ಆಗಿದೆ. ನಿನ್ನೆ ಇದೇ ಚಿನ್ನದ ಬೆಲೆ ರೂ. 11,745 ಇತ್ತು. ಇದರಿಂದ ಪ್ರತಿ ಗ್ರಾಂಗೆ ರೂ. 168 ಏರಿಕೆಯಾಗಿದೆ. 10 ಗ್ರಾಂ ಇಂದಿನ ಬೆಲೆ ರೂ. 1,19,130 ಆಗಿದ್ದು, ನಿನ್ನೆ ರೂ. 1,17,450 ಇತ್ತು. ಅಂದರೆ 10 ಗ್ರಾಂ ಮೇಲೆ ರೂ. 1,680 ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಇಂದಿನ ಬೆಲೆ ರೂ. 11,91,300 ಆಗಿದ್ದು, ನಿನ್ನೆ ರೂ. 11,74,500 ಇತ್ತು. ಇದರಿಂದ 100 ಗ್ರಾಂಗೆ ರೂ. 16,800 ಏರಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದಿನ ಬೆಳ್ಳಿ ದರದಲ್ಲಿ ಸ್ಪಷ್ಟವಾದ ಏರಿಕೆ ಕಂಡುಬಂದಿದೆ. ಇಂದಿನ ದರದಂತೆ 1 ಗ್ರಾಂ ಬೆಳ್ಳಿ ರೂ.300 ಆಗಿದ್ದು, ನಿನ್ನೆಗಿಂತ ರೂ.15 ಹೆಚ್ಚಾಗಿದೆ. 8 ಗ್ರಾಂ ಬೆಳ್ಳಿ ರೂ.2,400 ಆಗಿದ್ದು, ಇದರಲ್ಲಿ ರೂ.120 ಏರಿಕೆ ಕಂಡುಬರುತ್ತದೆ. ಅದೇ ರೀತಿ 10 ಗ್ರಾಂ ಬೆಳ್ಳಿ ರೂ.3,000 ಆಗಿದ್ದು, ನಿನ್ನೆಗಿನ ದರಕ್ಕಿಂತ ರೂ.150 ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೋಡಿದರೆ, 100 ಗ್ರಾಂ ಬೆಳ್ಳಿ ರೂ.30,000 ಆಗಿದ್ದು, ರೂ.1,500 ಏರಿಕೆಯಾಗಿದೆ. ಇನ್ನು 1000 ಗ್ರಾಂ (1 ಕೆಜಿ) ಬೆಳ್ಳಿ ರೂ.3,00,000 ಆಗಿದ್ದು, ನಿನ್ನೆಗಿಂತ ರೂ.15,000 ಹೆಚ್ಚಾಗಿದೆ. ಈ ದರ ಏರಿಕೆ ಮಾರುಕಟ್ಟೆಯಲ್ಲಿ ಬೆಳ್ಳಿಗೆ ಇರುವ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.
ಸ್ಪಾಟ್ ಚಿನ್ನದ ಬೆಲೆ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಶುಕ್ರವಾರ 4% ಏರಿಕೆಯ ನಂತರ, ಜಿಎಂಟಿ ಸಮಯ 03:33ಕ್ಕೆ ಸ್ಪಾಟ್ ಚಿನ್ನದ ಬೆಲೆ 1.3% ಹೆಚ್ಚಾಗಿ ಪ್ರತಿ ಔನ್ಸ್ಗೆ 5,026.04 ಡಾಲರ್ಗಳಿಗೆ ತಲುಪಿತು. ಇನ್ನು ಏಪ್ರಿಲ್ ವಿತರಣೆಗೆ ಇರುವ ಅಮೆರಿಕದ ಚಿನ್ನದ ಫ್ಯೂಚರ್ಸ್ ದರವು 1.4% ಏರಿಕೆ ಕಂಡಿದೆ. ಹಾಗೆಯೇ ಪ್ರತಿ ಔನ್ಸ್ಗೆ 5,046.10 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿತು.
ಒಟ್ಟಾರೆ ಇಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಸ್ಪಷ್ಟವಾದ ಏರಿಕೆ ದಾಖಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಬಲವಾಗಿರುವುದು, ಡಾಲರ್ ಮೌಲ್ಯದ ಚಲನೆ ಹಾಗೂ ಜಿಯೋಪಾಲಿಟಿಕಲ್ ಬೆಳವಣಿಗೆಗಳು ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿರುವುದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲೂ ಹಬ್ಬ-ಹರಿದಿನಗಳು ಮತ್ತು ವಿವಾಹ ಋತುವಿನ ನಿರೀಕ್ಷೆಯಿಂದ ಚಿನ್ನದ ಮೇಲೆ ಬೇಡಿಕೆ ಹೆಚ್ಚಾಗುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ, ಬಡ್ಡಿದರ ನೀತಿ ಹಾಗೂ ಹೂಡಿಕೆದಾರರ ಆಸಕ್ತಿಯ ಮೇಲೆ ಚಿನ್ನದ ಬೆಲೆ ಅವಲಂಬಿತವಾಗಿರಲಿದೆ.
More From GoodReturns

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ



Click it and Unblock the Notifications