ಚಿನ್ನದ ಬೆಲೆಗಳು ಇತ್ತೀಚೆಗೆ ಹಾವು ಏಣಿ ಆಟವಾಡುತ್ತಿವೆ. ಕಳೆದ ತಿಂಗಳಿನಲ್ಲಿ ದಾಖಲೆ ಪ್ರಮಾಣದ ಏರಿಕೆ ನೋಡಿದ್ದ ಬೆಲೆಗಳು, ಬಜೆಟ್ ನಂತರ ಕೊಂಚ ಇಳಿಕೆ ಹಾದಿ ಹಿಡಿದವು. ಅಂದಿನಿಂದ ಈವರೆಗೂ ಏರಿಕೆ-ಇಳಿಕೆ ಸಾಮಾನ್ಯ ಚಲನೆ ಕಂಡಿದೆ. ಹಾಗೆಯೇ ಶಿವರಾತ್ರಿಗೂ ಮುನ್ನ ಕೊಂಚ ಏರಿಕೆಯನ್ನೇ ನೋಡಿದ್ದ ಬೆಲೆಗಳು, ಹಬ್ಬದ ನಂತರ ಇಳಿಕೆ ಹಾದಿ ಅನುಸರಿಸಿದ್ದವು. ಇದರಿಂದ ಹೂಡಿಕೆದಾರರಿಗೆ ನಿರಾಳವಾಗಿತ್ತು. ಅದರಂತೆಯೇ ಇಂದು ಕೂಡ ಚಿನ್ನದ ಬೆಲೆ ಹೇಗಿದೆ ಎಂಬುದನ್ನು ತಿಳಿಯೋದು ಬಹಳ ಮುಖ್ಯ. ಹಾಗಾದ್ರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆಯೋ, ಏರಿಕೆಯಾಗಿದೆಯೋ ಎಂದು ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಹೂಡಿಕೆಗೆ ಹೆಚ್ಚು ಅನುಸರಿಸುಬ 24 ಚಿನ್ನದ ಬೆಲೆಯು ಇಂದು ಬೆಂಗಳೂರಿನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಅಂದರೆ ಯಾವುದೇ ರೀತಿಯ ಇಳಿಕೆಯಾಗಲೀ ಏರಿಕೆಯಾಗಲಿ ಕಂಡಿಲ್ಲ. ಇಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ರೂ.15,420 ಆಗಿದ್ದು ನಿನ್ನೆಗಿಂತ, ಇಂದಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 10 ಗ್ರಾಂ ಚಿನ್ನದ ಇಂದಿನ ಬೆಲೆ ರೂ.1,54,200 ಆಗಿದ್ದು, 100 ಗ್ರಾಂ ಚಿನ್ನದ ಬೆಲೆ ಇಂದು ರೂ.15,42,000 ಆಗಿದೆ. ಅಂದರೆ ಇದರಲ್ಲಿ ಯಾವುದೆ ಚಲನೆ ಇಲ್ಲ.
22 ಕ್ಯಾರೆಟ್ ಬಂಗಾರ:
24 ಕ್ಯಾರೆಟ್ ಚಿನ್ನದಂತೆಯೇ ಇಂದು 22 ಕ್ಯಾರೆಟ್ ಚಿನ್ನವೂ ಕೂಡ ಸ್ಥಿರತೆ ನೋಡಿದೆ. 1 ಗ್ರಾಂ ಚಿನ್ನದ ದರ ರೂ.14,135, 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,41,350 ಹಾಗೂ 100 ಗ್ರಾಂ ಚಿನ್ನದ ಬೆಲೆ ರೂ.14,13,500 ಆಗಿದ್ದು ಈ ಬೆಲೆಗಳು ನಿನ್ನೆಯಂತೆಯೇ ಮುಂದುವರಿದಿವೆ.
18 ಕ್ಯಾರೆಟ್ ಚಿನ್ನದ ಬೆಲೆ ಬೆಂಗಳೂರು:
ಇಂದು 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ರೂ.11,565 ಆಗಿದ್ದು, ನಿನ್ನೆಯೂ ರೂ.11,565 ಇತ್ತು. ಯಾವುದೇ ಬದಲಾವಣೆ ಕಂಡುಬಂದಿಲ್ಲ. 10 ಗ್ರಾಂ ಚಿನ್ನದ ದರ ಇಂದು ರೂ.1,15,650 ಆಗಿದ್ದು, ನಿನ್ನೆಯೂ ಇದೇ ರೂ.1,15,650 ಇತ್ತು. 100 ಗ್ರಾಂ ಚಿನ್ನದ ಬೆಲೆ ರೂ.11,56,500 ಆಗಿದ್ದು, ನಿನ್ನೆಯೂ ಅದೇ ದರದಲ್ಲಿ ಇತ್ತು. ಹೀಗಾಗಿ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಯಾವುದೇ ಏರಿಕೆ ಅಥವಾ ಇಳಿಕೆ ದಾಖಲಾಗಿಲ್ಲ.
ಬೆಂಗಳೂರು ಇಂದಿನ ಬೆಳ್ಳಿ ಬೆಲೆ:
ಇಂದು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ದರ ರೂ.255 ಆಗಿದ್ದು, ನಿನ್ನೆಯ ರೂ.260ರಿಗಿಂತ ರೂ.5 ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿಯ ಬೆಲೆ ಇಂದು ರೂ.2,040 ಆಗಿದ್ದು, ನಿನ್ನೆ ರೂ.2,080 ಇತ್ತು - ಅಂದರೆ ರೂ.40 ಕಡಿಮೆಯಾಗಿದೆ. 10 ಗ್ರಾಂ ಬೆಳ್ಳಿಯ ದರ ರೂ.2,550 ಆಗಿದ್ದು, ನಿನ್ನೆಯ ರೂ.2,600ರಿಗಿಂತ ರೂ.50 ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಇಂದು ರೂ.25,500ಕ್ಕೆ ಲಭ್ಯವಿದ್ದು, ನಿನ್ನೆಯ ರೂ.26,000ರಿಗಿಂತ ರೂ.500 ಕಡಿಮೆಯಾಗಿದೆ. ಹಾಗೆಯೇ 1000 ಗ್ರಾಂ (1 ಕಿಲೋ) ಬೆಳ್ಳಿಯ ದರ ರೂ.2,55,000 ಆಗಿದ್ದು, ನಿನ್ನೆಯ ರೂ.2,60,000ರಿಗಿಂತ ರೂ.5,000 ಇಳಿಕೆ ಕಂಡಿದೆ.
ಸ್ಪಾಟ್ ಚಿನ್ನದ ವಿವರ:
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ದರವು ಗಮನಾರ್ಹ ಏರಿಕೆಯನ್ನು ದಾಖಲಿಸಿದೆ. ಮಂಗಳವಾರ ಎರಡು ಶೇಕಡಕ್ಕಿಂತ ಹೆಚ್ಚು ಇಳಿಕೆಯಾದ ಬಳಿಕ, ಇಂದು 0414 GMT ವೇಳೆಗೆ ಸ್ಪಾಟ್ ಗೋಲ್ಡ್ ದರವು 1.1% ಏರಿಕೆ ಕಂಡು ಪ್ರತಿ ಔನ್ಸ್ಗೆ $4,929.69 ಮಟ್ಟ ತಲುಪಿದೆ. ಅದೇ ಸಮಯದಲ್ಲಿ, ಏಪ್ರಿಲ್ ವಿತರಣೆಗೆ ಸಂಬಂಧಿಸಿದ ಅಮೆರಿಕದ ಗೋಲ್ಡ್ ಫ್ಯೂಚರ್ಸ್ ದರವು 0.9% ಏರಿಕೆ ಹೊಂದಿ $4,949.20 ಮಟ್ಟಕ್ಕೆ ಬಲವಾಗಿದೆ.
ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಮೂರು ಕ್ಯಾರೆಟ್ಗಳಲ್ಲೂ ದರದಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ. ಮಾರುಕಟ್ಟೆ ಸ್ಥಿರವಾಗಿದ್ದು, ಖರೀದಿದಾರರು ಮತ್ತು ಹೂಡಿಕೆದಾರರಿಗೆ ಇದು ಸಮತೋಲನದ ಪರಿಸ್ಥಿತಿಯನ್ನು ಸೂಚಿಸುತ್ತದೆ.


Click it and Unblock the Notifications