ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಶುಕ್ರವಾರದ ಶುಭ ತಂದಿದೆ. ಈ ವಾರದಲ್ಲಿ ಸತತ ಐದನೇ ದಿನವೂ ಬಂಗಾರದ ದರ ಇಳಿಕೆಯಾಗಿದ್ದು, ಚಿನ್ನಪ್ರಿಯರ ಖುಷಿಗೆ ಮಿತಿಯೇ ಇಲ್ಲದಂತಾಗಿದೆ. ಇತ್ತ ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಯುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲೂ ಬೆಂಗಳೂರಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಆಶ್ಚರ್ಯ. ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ನೋಡುತ್ತಿದೆ. ಈ ಪರಿಣಾಮ ಚಿನ್ನದ ಬೆಲೆಯು ದಿನೇ ದಿನೇ ಒಂದೊಂದೇ ಮೆಟ್ಟಿಲು ಕೆಳಗೆ ಬರುತ್ತಿದೆ.

ಹಾಗಾದ್ರೆ ಇಂದು 24 ಕ್ಯಾರೆಟ್, 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಈ ಲೇಖನದಲ್ಲಿ ಪೂರ್ತಿ ಓದಿ ತಿಳಿಯಿರಿ.
24 ಕ್ಯಾರೆಟ್ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 1 ಗ್ರಾಂಗೆ 16,211 ಆಗಿದೆ. ನಿನ್ನೆ ಈ ಬೆಲೆ16,288 ರೂಪಾಯಿ ಆಗಿದ್ದು, ಇಂದು 77 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,62,110 ರೂಪಾಯಿ ಆಗಿದ್ದು, ನಿನ್ನೆ ಇದರ ಬೆಲೆ ರೂ. 1,62,880 ಇತ್ತು.ಇಂದು 770 ಇಳಿಕೆ ಕಂಡುಬಂದಿದೆ. ಮತ್ತೊಂದೆಡೆ 100 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ರೂ. 16,21,100 ಆಗಿದ್ದು, ನಿನ್ನೆ ಅದು ರೂ. 16,28,800 ಇತ್ತು. ಇದರಿಂದ 100 ಗ್ರಾಂಗೆ ರೂ. 7,700 ಇಳಿಕೆ ದಾಖಲಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ:
ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 14,860 ಆಗಿದ್ದು, ನಿನ್ನೆ ಅದು ರೂ. 14,930 ಇತ್ತು. ಇದರಿಂದ ಪ್ರತಿ ಗ್ರಾಂಗೆ ರೂ. 70 ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,48,600 ಆಗಿದ್ದು, ನಿನ್ನೆ ರೂ. 1,49,300 ಇತ್ತು. ಹೀಗಾಗಿ 10 ಗ್ರಾಂಗೆ ರೂ. 700 ಇಳಿಕೆ ಕಂಡುಬಂದಿದೆ. ಇದೇ ರೀತಿ 100 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ರೂ. 14,86,000 ಆಗಿದ್ದು, ನಿನ್ನೆ ಅದು ರೂ. 14,93,000 ಇತ್ತು. ಇದರಿಂದ 100 ಗ್ರಾಂಗೆ ರೂ. 7,000 ಇಳಿಕೆ ದಾಖಲಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ:
18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ದಾಖಲಾಗಿದೆ. 1 ಗ್ರಾಂ 18 ಕ್ಯಾರೆಟ್ ಚಿನ್ನದ ದರ ರೂ. 12,158 ಆಗಿದ್ದು, ನಿನ್ನೆ ಅದು ರೂ. 12,216 ಇತ್ತು. ಅಂದರೆ ಇಂದು ಒಂದು ಗ್ರಾಂಗೆ 58 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,21,580 ಆಗಿದ್ದು, ನಿನ್ನೆ ರೂ. 1,22,160 ಇತ್ತು. ಇದರಿಂದ 10 ಗ್ರಾಂಗೆ ರೂ. 580 ಇಳಿಕೆ ದಾಖಲಾಗಿದೆ. ಮತ್ತೊಂದೆಡೆ 100 ಗ್ರಾಂ 18 ಕ್ಯಾರೆಟ್ ಚಿನ್ನದ ದರ ಇಂದು ರೂ. 12,15,800 ಆಗಿದ್ದು, ನಿನ್ನೆ ಈ ಬೆಲೆ ರೂ. 12,21,600 ಇತ್ತು. ಹೀಗಾಗಿ 100 ಗ್ರಾಂಗೆ ರೂ. 5,800 ಇಳಿಕೆ ಕಂಡುಬಂದಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ತಿಳಿಯಿರಿ:
ಇಂದು ಬೆಂಗಳೂರಿನಲ್ಲಿ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಂಡಿಲ್ಲ. ಇಂದು 1 ಗ್ರಾಂ ಬೆಳ್ಳಿಯ ಬೆಲೆ ರೂ. 285 ಆಗಿದ್ದು, 10 ಗ್ರಾಂ ಬೆಳ್ಳಿಯ ದರ ಇಂದು ರೂ. 2,850 ಆಗಿದ್ದು, ನಿನ್ನೆ ಕೂಡ ರೂ. 2,850 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ಇಂದು ರೂ. 28,500 ಆಗಿದ್ದು, ನಿನ್ನೆ ಕೂಡ ಅದೇ ದರ ಮುಂದುವರಿದಿದೆ. ಇನ್ನೂ 1 ಕಿಲೋಗ್ರಾಂ (1000 ಗ್ರಾಂ) ಬೆಳ್ಳಿಯ ಬೆಲೆ ಇಂದು ರೂ. 2,85,000 ಆಗಿದೆ.
ಇಂದಿನ ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಸ್ಪಾಟ್ ಚಿನ್ನದ ಬೆಲೆ 0506 GMT ವೇಳೆಗೆ ಒಂದು ಔನ್ಸ್ಗೆ ಸುಮಾರು $5,128.39 ಆಗಿದ್ದು, ಸುಮಾರು 1% ಏರಿಕೆ ಕಂಡಿದೆ. ಅದೇ ಸಮಯದಲ್ಲಿ, ಏಪ್ರಿಲ್ ವಿತರಣೆಗೆ ಸಂಬಂಧಿಸಿದ ಅಮೆರಿಕದ ಗೋಲ್ಡ್ ಫ್ಯೂಚರ್ಸ್ ದರವು ಸುಮಾರು 1.2% ಏರಿಕೆಯೊಂದಿಗೆ $5,137.50 ತಲುಪಿದೆ.
ಒಟ್ಟಾರೆ ಇಂದು ಎಲ್ಲಾ ಕ್ಯಾರೆಟ್‌ನ ಚಿನ್ನದ ಬೆಲೆಯು ಕೂಡ ಇಳಿಕೆಯನ್ನು ನೋಡಿದೆ. ಮದುವೆ, ಹಬ್ಬಗಳ ಸೀಸನ್‌ನಲ್ಲಿ ಈ ಬೆಲೆ ಇಳಿಕೆಯು ಸಕಾರಾತ್ಮಕ ಬೆಳವಣಿಗೆ ತೋರಿಸಿದೆ. ಇದರಿಂದ ಚಿನ್ನಪ್ರಿಯರು ನಿರಾಳವಾಗಬಹುದು.


Click it and Unblock the Notifications