ಭಾರತದಲ್ಲಿ ಚಿನ್ನದ ಬೆಲೆ ಏರಿಕೆ...ಹೌದು, ಇಂದು ಕೂಡ ಚಿನ್ನದ ಬೆಲೆ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಏರಿಕೆಯ ಹಾದಿ ಹಿಡಿದಿರುವ ಬಂಗಾರ, ಹತ್ತು ಲಕ್ಷ ಸಮೀಪದಲ್ಲಿದೆ. ಅಂದರೆ 24 ಕ್ಯಾರೆಟ್ ಚಿನ್ನ 9,93,800 ರೂಪಾಯಿಗೆ ಏರಿಕೆಯಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಯಥಾಸ್ಥಿತಿಯಲ್ಲಿರುವುದು ಮತ್ತು ಮೌಲ್ಯಪತ್ರಗಳ ಮೇಲೆ ಹೂಡಿಕೆದಾರರಿಗೆ ಆತಂಕ ಇದೆ. ಹೀಗಾಗಿ ಚಿನ್ನವು ಸೇಫ್ ಹೆವನ್ ಬೇಡಿಕೆಯಾಗಿ ಮರುಕಳಿಸಿದೆ. ಆದ್ದರಿಂದ ಚಿನ್ನದ ಬೆಲೆ ಏರಿಕೆಯ ಹಾದಿ ಹಿಡಿದಿದೆ ಎನ್ನಬಹುದು.

ಇನ್ನು ಈ ಚಿನ್ನದ ಬೆಲೆ ಏರಿಕೆಯು ಭಾರತದೆಲ್ಲೆಡೆ ಒಂದೇ ರೀತಿಯ ಬೆಲೆಯಲ್ಲಿಲ್ಲ. ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೇರಳ, ಪುಣೆ ಸೇರಿ ಒಂದೊಂದು ಕಡೆಯೂ ಒಂದೊಂದು ಬೆಲೆ ಇದೆ. ಹಾಗಾದ್ರೆ ಇಂದು ಚಿನ್ನದ ಬೆಲೆ ಎಷ್ಟೆಷ್ಟು ಇದೆ ಎಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ:
ಇಂದು ಭಾರತದಲ್ಲಿ ಚಿನ್ನದ ಬೆಲೆ ಎಲ್ಲಾ ಕ್ಯಾರೆಟ್‌ಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ 1 ಗ್ರಾಂಗೆ ರೂ. 9,938 ಆಗಿದ್ದು, ನಿನ್ನೆಗಿಂತ ರೂ. 5 ಹೆಚ್ಚಾಗಿದೆ. ಇದೇ ಬೆಲೆ 10 ಗ್ರಾಂಗೆ ರೂ. 99,380 ಹಾಗೂ 100 ಗ್ರಾಂಗೆ ರೂ. 9,93,800 ಕ್ಕೆ ಏರಿಕೆಯಾಗಿದೆ. ಶುದ್ಧ ಹೂಡಿಕೆ ಮತ್ತು ಬುದ್ಧಿವಂತ ಹಣಕಾಸು ನಿರ್ವಹಣೆಗೆ 24k ಚಿನ್ನದ ಬೇಡಿಕೆ ಹೆಚ್ಚಾಗಿರುವುದರಿಂದ ಈ ಮಿತವಾದ ಏರಿಕೆ ಕಂಡುಬಂದಿದೆ.
22 ಕ್ಯಾರೆಟ್ ಚಿನ್ನದ ದರ ಎಷ್ಟು?
22 ಕ್ಯಾರೆಟ್ ಚಿನ್ನದ ದರ ಕೂಡ ಇಳಿಮುಖವಿಲ್ಲದೆ ಏರಿಕೆಯಾಗಿದೆ. 1 ಗ್ರಾಂಗೆ ರೂ. 9,110, 10 ಗ್ರಾಂಗೆ ರೂ. 91,100 ಹಾಗೂ 100 ಗ್ರಾಂಗೆ ರೂ. 9,11,000 ಆಗಿದೆ. ಇದರಲ್ಲಿ ನಿನ್ನೆಗಿಂತ ಪ್ರತಿ ಶ್ರೇಣಿಯಲ್ಲಿಯೂ ರೂ. 5, ರೂ. 50 ಹಾಗೂ ರೂ. 500ರಷ್ಟು ಏರಿಕೆಯಾಗಿದೆ. ಭಾರತದ ಮದುವೆ ಸೀಸನ್ ಹಾಗೂ ಆಭರಣ ಉತ್ಸವದ ಹಿನ್ನಲೆಯಲ್ಲಿ 22k ಚಿನ್ನದ ಚಲನೆ ಸದಾ ಹೆಚ್ಚಿನದ್ದೇ ಇರುತ್ತದೆ.
18 ಕ್ಯಾರೆಟ್ ಚಿನ್ನದ ಬೆಲೆ:
ಅಂತಿಮವಾಗಿ, 18 ಕ್ಯಾರೆಟ್ ಚಿನ್ನವೂ ಇಂದಿಗೆ ಬೆಲೆ ಏರಿಕೆಯಲ್ಲಿದೆ. 1 ಗ್ರಾಂ ಬೆಲೆ ರೂ. 7,454 ಆಗಿದ್ದು, 10 ಗ್ರಾಂಗೆ ರೂ. 74,540 ಮತ್ತು 100 ಗ್ರಾಂಗೆ ರೂ. 7,45,400 ದಾಖಲಾಗಿದೆ. ಈ ಬೆಲೆಯು ಕ್ರಮವಾಗಿ ರೂ. 4, ರೂ. 40 ಮತ್ತು ರೂ. 400ರಷ್ಟು ನಿನ್ನೆಗಿಂತ ಹೆಚ್ಚಾಗಿದೆ. ಕಡಿಮೆ ದರದಲ್ಲಿ ಷೈಲಿ ಹಾಗೂ ವಿನ್ಯಾಸ ಮೌಲ್ಯ ಹೆಚ್ಚಿರುವ ಆಭರಣಗಳನ್ನು ಇಚ್ಛಿಸುವವರಿಗೆ 18k ಚಿನ್ನ ಪ್ರಿಯವಾಗಿದೆ.
ಭಾರತದ ಬೇರೆ ನಗರಗಳಲ್ಲಿ ಎಷ್ಟಿದೆ ಬೆಲೆ?
ಚೆನ್ನೈ: 24k - ರೂ. 9,938 | 22k - ರೂ. 9,110 | 18k - ರೂ. 7,505
ಮುಂಬೈ: 24k - ರೂ. 9,938 | 22k - ರೂ. 9,110 | 18k - ರೂ. 7,454
ದೆಹಲಿ: 24k - ರೂ. 9,952 | 22k - ರೂ. 9,125 | 18k - ರೂ. 7,466
ಕೋಲ್ಕತ್ತಾ: 24k - ರೂ. 9,938 | 22k - ರೂ. 9,110 | 18k - ರೂ. 7,454
ಬೆಂಗಳೂರು: 24k - ರೂ. 9,938 | 22k - ರೂ. 9,110 | 18k - ರೂ. 7,454
ಹೈದರಾಬಾದ್: 24k - ರೂ. 9,938 | 22k - ರೂ. 9,110 | 18k - ರೂ. 7,454
ಕೇರಳ: 24k - ರೂ. 9,938 | 22k - ರೂ. 9,110 | 18k - ರೂ. 7,454
ಪುಣೆ: 24k - ರೂ. 9,938 | 22k - ರೂ. 9,110 | 18k - ರೂ. 7,454
ವಡೋದರಾ: 24k - ರೂ. 9,942 | 22k - ರೂ. 9,115 | 18k - ರೂ. 7,458
ಅಹಮದಾಬಾದ್: 24k - ರೂ. 9,942 | 22k - ರೂ. 9,115 | 18k - ರೂ. 7,458
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇಂದು ಭಾರತದಲ್ಲಿ ಬೆಳ್ಳಿಯ ದರ ಸ್ವಲ್ಪ ಇಳಿಕೆಯನ್ನು ದಾಖಲಿಸಿದೆ. 1 ಗ್ರಾಂ ಬೆಳ್ಳಿ ಇಂದು ರೂ. 113.90 ಕ್ಕೆ ಲಭ್ಯವಿದ್ದು, ಇದು ನಿನ್ನೆ ರೂ. 114 ದರದೊಂದಿಗೆ ಹೋಲಿಸಿದರೆ ರೂ. 0.10 ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ರೂ. 1,139 ಆಗಿದ್ದು, ನಿನ್ನೆಗಿಂತ ರೂ. 1 ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿ ದರವೂ ರೂ. 11,390 ಆಗಿದ್ದು, ರೂ. 10 ಇಳಿಕೆ ಕಂಡಿದೆ. 1 ಕೆ.ಜಿ ಬೆಳ್ಳಿ ದರ ಇಂದು ರೂ. 1,13,900 ಆಗಿದ್ದು, ನಿನ್ನೆಗಿಂತ ರೂ. 100 ಇಳಿಕೆಯಾಗಿದೆ. ಬೆಳ್ಳಿ ಹೂಡಿಕೆಗೆ ಆಸಕ್ತಿ ಇರುವವರಿಗೆ ಇದು ಗಮನಿಸಬೇಕಾದ ಬೆಳವಣಿಗೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಜುಲೈ 18ರಂದು, ಸ್ಪಾಟ್ ಚಿನ್ನದ ದರದಲ್ಲಿ ವಿಶೇಷ ಬದಲಾವಣೆ ಕಂಡುಬಂದಿಲ್ಲ. ಚಿನ್ನವು ಪ್ರತಿಔನ್ಸ್‌ಗೆ ಸುಮಾರು ಡಾಲರ್ 3,337.60 ರಷ್ಟು ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ಹಂತಗಳೊಂದಿಗೆ ಹೋಲಿಸಿದರೆ ಇದರಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದು, ದರವು ಸ್ಥಿರವಾಗಿದೆ ಎಂಬುದನ್ನು ಸೂಚಿಸುತ್ತದೆ.
ಈ ಸ್ಥಿತಿಗೆ ಪ್ರಮುಖ ಕಾರಣವೆಂದರೆ ಡಾಲರ್‌ನ ಬಲಿಷ್ಠತೆ ಮತ್ತು ಅಮೆರಿಕದ ಆರ್ಥಿಕ ಮಾಹಿತಿಯು ಮಾರುಕಟ್ಟೆಯ ಮೇಲ್ಭಾಗದ ಒತ್ತಡವನ್ನುಂಟುಮಾಡಿದೆ. ಆದರೂ ಚಿನ್ನದ ದರದಲ್ಲಿ ಬಹುತೆಕ ಸ್ಥಿರತೆ ಉಳಿದಿದೆ, ಇದು ಹೂಡಿಕೆದಾರರ ವಿಶ್ವಾಸಕ್ಕೆ ಸಂಕೇತವಾಗಿದೆ.


Click it and Unblock the Notifications