Gold Price Today: ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟು? 24K, 22K, 18K ಬಂಗಾರದ ಭಾನುವಾರದ ರೇಟ್‌ ತಿಳಿಯಿರಿ!

ಇಂದಿನ ಚಿನ್ನದ ಬೆಲೆ ಸುದ್ದಿ ಭಾರತೀಯರೋ ಪಾಲಿಗೆ ಸಿಹಿ-ಕಹಿ ಮಿಶ್ರಣ ನೀಡಿದೆ. ಅಂದರೆ ಇಂದಿನ ಬೆಲೆಯಲ್ಲಿ ಯಾವುದೇ ಏರಿಕೆ-ಇಳಿಕೆಯಾಗಿಲ್ಲ. ಹೀಗಾಗಿ ಚಿನ್ನಪ್ರಿಯರು ಬೆಲೆ ಏರಿಕೆಯಾಗಿಲ್ಲ ಎಂದು ಸಂತಸಪಡುವುದು ಹೌದು..ಅದರಂತೆ ಇಳಿಕೆಯಾಗಿಲ್ಲ ಎಂಬ ಬೇಸರ ಕಾಣುವುದೂ ಉಂಟು. ಭಾರತದಲ್ಲಿ ಚಿನ್ನದ ಬೆಲೆ ಹಾವು-ಏಣಿಯಾಟ ಆಡುತ್ತಿದೆ. ಈ ವಾರದಲ್ಲಿ ಚಿನ್ನದ ಬೆಲೆ ಏರಿಕೆ-ಇಳಿಕೆ ಎರಡನ್ನೂ ನೋಡಿದೆ. ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸ್ಥಿರವಾಗಿದೆ.

ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟು? ತಿಳಿಯಿರಿ

ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವವಾದ ಸ್ಥಾನವಿದೆ. ಚಿನ್ನವನ್ನು ಪ್ರತಿಷ್ಠೆಯ ಸಂಕೇತ ಎಂತಲೂ ಭಾರತದಲ್ಲಿ ಪ್ರತಿನಿಧಿಸಲಾಗುತ್ತದೆ. ಸಭೆ ಸಮಾರಂಭಗಳಲ್ಲಿ ಒಡವೆಯೇ ಆಕರ್ಷಣೆ. ಹೀಗಾಗಿ ಮಹಿಳೆಯರಿಗೆ ಅತಿ ಪ್ರಿಯಾವಾದುದ್ದು ಈ ಚಿನ್ನ. ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಇದು ಬೆಲೆ ಜಾಸ್ತಿಯಾಗುತ್ತಿದ್ದು, ಚಿನ್ನವನ್ನೇ ಉಡುಗೊರೆಯಾಗಿ ಕೊಟ್ಟರೆ ಮಹಿಳೆಯರ ಸಂತೋಷ ಆಕಾಶಕ್ಕೆ ಹಾರಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಒಂದು ಮಹತ್ವ ನೀಡಲಾಗಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

24 ಕ್ಯಾರೆಟ್ ಚಿನ್ನದ ಬೆಲೆ (24K Gold Rate):

ಭಾರತದಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿದೆ. ಶುದ್ಧತೆಯಲ್ಲಿ ಅಗ್ರಸ್ಥಾನದಲ್ಲಿರುವ 24K ಚಿನ್ನವನ್ನು ಹೂಡಿಕೆ ಮತ್ತು ಸಂಗ್ರಹ ಉದ್ದೇಶಗಳಿಗೆ ಹೆಚ್ಚು ಬಳಸಲಾಗುತ್ತದೆ. ಇಂದಿನ ದರದ ಪ್ರಕಾರ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ.14,378, 10 ಗ್ರಾಂಗೆ ರೂ.1,43,780 ಹಾಗೂ 100 ಗ್ರಾಂಗೆ ರೂ.14,37,800 ಆಗಿದೆ. ನಿನ್ನೆಗೂ ಹೋಲಿಸಿದರೆ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ.

22 ಕ್ಯಾರೆಟ್ ಚಿನ್ನದ ಬೆಲೆ (22K Gold Rate):

ಆಭರಣ ತಯಾರಿಕೆಗೆ ಹೆಚ್ಚು ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಇಂದು ಸ್ಥಿರವಾಗಿದೆ. ಶುದ್ಧತೆ ಮತ್ತು ಬಲದ ಸಮತೋಲನ ಹೊಂದಿರುವುದರಿಂದ ಇದು ಜನಪ್ರಿಯವಾಗಿದೆ. ಇಂದಿನ ದರದಂತೆ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.13,180, 10 ಗ್ರಾಂಗೆ ರೂ.1,31,800 ಮತ್ತು 100 ಗ್ರಾಂಗೆ ರೂ.13,18,000 ಇದೆ. ನಿನ್ನೆಗಿನ ದರದೊಂದಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಇಲ್ಲ.

18 ಕ್ಯಾರೆಟ್ ಚಿನ್ನದ ಬೆಲೆ (18K Gold Rate):

ಡಿಸೈನರ್ ಹಾಗೂ ದೈನಂದಿನ ಬಳಕೆಯ ಆಭರಣಗಳಿಗೆ 18 ಕ್ಯಾರೆಟ್ ಚಿನ್ನವನ್ನು ಹೆಚ್ಚು ಬಳಸಲಾಗುತ್ತದೆ. ಇಂದಿನ ದಿನವೂ ಇದರ ಬೆಲೆ ಸ್ಥಿರವಾಗಿಯೇ ಮುಂದುವರಿದಿದೆ. ಪ್ರಸ್ತುತ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ರೂ.10,784, 10 ಗ್ರಾಂಗೆ ರೂ.1,07,840 ಮತ್ತು 100 ಗ್ರಾಂಗೆ ರೂ.10,78,400 ಆಗಿದೆ. ನಿನ್ನೆಗೂ ಹೋಲಿಸಿದರೆ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?

ಚೆನ್ನೈ: 24K ರೂ. 14,487, 22K ರೂ. 13,280, 18K ರೂ. 11,090
ಮುಂಬೈ: 24K ರೂ. 14,378, 22K ರೂ. 13,180, 18K ರೂ. 10,784
ದೆಹಲಿ: 24K ರೂ. 14,393, 22K ರೂ. 13,195, 18K ರೂ. 10,799
ಕೋಲ್ಕತ್ತಾ: 24K ರೂ. 14,378, 22K ರೂ. 13,180, 18K ರೂ. 10,784
ಬೆಂಗಳೂರು: 24K ರೂ. 14,378, 22K ರೂ. 13,180, 18K ರೂ. 10,784
ಹೈದರಾಬಾದ್: 24K ರೂ. 14,378, 22K ರೂ. 13,180, 18K ರೂ. 10,784
ಕೇರಳ: 24K ರೂ. 14,378, 22K ರೂ. 13,180, 18K ರೂ. 10,784
ಪುಣೆ: 24K ರೂ. 14,378, 22K ರೂ. 13,180, 18K ರೂ. 10,784
ವಡೋದರಾ: 24K ರೂ. 14,383, 22K ರೂ. 13,185, 18K ರೂ. 10,789
ಅಹಮದಾಬಾದ್: 24K ರೂ. 14,383, 22K ರೂ. 13,185, 18K ರೂ. 10,789

ಭಾರತದಲ್ಲಿ ಬೆಳ್ಳಿ ಬೆಲೆ:

ಭಾರತದಲ್ಲಿ ಇಂದಿನ ಬೆಳ್ಳಿಯ ದರ ಸ್ಥಿರವಾಗಿಯೇ ಮುಂದುವರಿದಿದೆ. ಸಾಮಾನ್ಯ ಜನರಿಂದ ಹಿಡಿದು ಹೂಡಿಕೆದಾರರ ತನಕ ಬೆಳ್ಳಿಗೆ ಸದಾ ಉತ್ತಮ ಬೇಡಿಕೆ ಇರುವುದರಿಂದ ದಿನನಿತ್ಯದ ದರಗಳ ಮೇಲೆ ಹೆಚ್ಚಿನ ಗಮನವಿರುತ್ತದೆ. ಇಂದಿನ ಬೆಲೆಯ ಪ್ರಕಾರ 1 ಗ್ರಾಂ ಬೆಳ್ಳಿಯ ದರ ರೂ.295, 10 ಗ್ರಾಂಗೆ ರೂ.2,950, 100 ಗ್ರಾಂಗೆ ರೂ.29,500 ಹಾಗೂ 1 ಕೆಜಿಗೆ ರೂ.2,95,000 ಆಗಿದೆ. ನಿನ್ನೆಗಿನ ದರದೊಂದಿಗೆ ಹೋಲಿಸಿದರೆ ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ. ಹೂಡಿಕೆ ಅಥವಾ ಆಭರಣ ಖರೀದಿಗೆ ಮುಂದಾಗುವವರು ಮುಂದಿನ ದಿನಗಳ ದರಗಳ ಚಲನವಲನವನ್ನು ಗಮನಿಸುವುದು ಉತ್ತಮ.

ಸ್ಪಾಟ್ ಚಿನ್ನದ ಬೆಲೆ:

ಶುಕ್ರವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಸ್ವಲ್ಪ ಇಳಿಕೆಯನ್ನು ದಾಖಲಿಸಿದೆ. ನ್ಯೂಯಾರ್ಕ್ ಸಮಯ ಮಧ್ಯಾಹ್ನ 1:30ಕ್ಕೆ (ಭಾರತೀಯ ಸಮಯ 1830 GMT) ಸ್ಪಾಟ್ ಗೋಲ್ಡ್ ಬೆಲೆ ಶೇಕಡಾ 0.1ರಷ್ಟು ಕುಸಿದು ಪ್ರತಿ ಔನ್ಸ್‌ಗೆ ಸುಮಾರು 4,614.93 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಯಿತು. ಇದರ ಹಿಂದಿನ ದಿನ ಬುಧವಾರ ಚಿನ್ನದ ಬೆಲೆ ಇತಿಹಾಸದಲ್ಲೇ ಗರಿಷ್ಠ ಮಟ್ಟವಾದ ಪ್ರತಿ ಔನ್ಸ್‌ಗೆ 4,642.72 ಡಾಲರ್ ತಲುಪಿತ್ತು.

ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.

ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+