ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನಪ್ರಿಯರಿಗೆ ಇಂದೂ ಕೂಡ ನಿರಾಸೆ ಸುದ್ದಿ ಎನ್ನಬಹುದು. ಯಾಕಂದ್ರೆ ನಿನ್ನೆ, ಮೊನ್ನೆ ಚಿನ್ನದ ಬೆಲೆ ಏರಿಕೆಯಾಗಿದ್ದ ಕಾರಣ, ಜುಲೈ 19ರಂದು ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಗೆ ನಿರಾಸೆಯ ಭಾರ ಹೊರಿಸಲಾಗಿದೆ. ಅಂದರೆ ಇಂದು ಚಿನ್ನದ ಬೆಲೆಯಲ್ಲಿ ನಿನ್ನೆ ಮೊನ್ನೆಗಿಂತ ಹೆಚ್ಚಾಗಿಯೇ ಏರಿಕೆಯಾಗಿದೆ.

ಇಂದು ಅಡ್ಡ ಅಳತೆ ಏರಿಕೆಯೊಂದಿಗೆ, ಜನಸಾಮಾನ್ಯರ ಕೈಗೆಟುಕದ ಬೆಲೆಗೆ ತಲುಪಿದೆ. ಹೀಗಾಗಿ ಆಭರಣ ಖರೀದಿಗೆ ಅಥವಾ ಹೂಡಿಕೆಗೆ ನಿರೀಕ್ಷೆಯಿಂದ ಕಾಯುತ್ತಿದ್ದ ಮಹಿಳೆಯರು, ಗ್ರಾಹಕರು ಹಾಗೂ ಚಿನ್ನದ ವ್ಯಾಪಾರಿಗಳಲ್ಲಿ ನಿರಾಶೆಯುಂಟಾಗಿದೆ. ಇನ್ನು ಏರಿಕೆಯಾಗಿರುವ ಬೆಲೆ ಭಾರತದೆಲ್ಲೆಡೆ ಒಂದೇ ರೀತಿಯಲ್ಲಿ ಇಲ್ಲ. ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್..ಹೀಗೆ ಒಂದೊಂದು ನಗರದಲ್ಲೂ ಒಂದೊಂದು ರೀತಿಯಲ್ಲಿ ಬೆಲೆ ಏರಿಕೆಯಾಗಿದೆ. ಹಾಗಾದ್ರೆ ಇಂದಿನ ಚಿನ್ನದ ಬೆಲೆ ಎಷ್ಟು, ಎಲ್ಲೆಲ್ಲಿ ಎಷ್ಟು ಏರಿಕೆಯಾಗಿದೆ ಎಂದು ಇಲ್ಲಿ ತಿಳಿಯಿರಿ.
24 ಕ್ಯಾರೆಟ್ ಚಿನ್ನದ ಇಂದಿನ ದರ:
24 ಕ್ಯಾರೆಟ್ ಚಿನ್ನವು ಶೇ. 99.9 ಶುದ್ಧತೆಯುಳ್ಳ ಪ್ಯೂರ್ ಗೋಲ್ಡ್ ಆಗಿದ್ದು, ಸಾಮಾನ್ಯವಾಗಿ ನಗದು ಹೂಡಿಕೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇಂದಿಗೆ 1 ಗ್ರಾಂ ದರ ದೇಶದಾದ್ಯಂತ ಸರಾಸರಿ ರೂ. 10,004ಕ್ಕೆ ಏರಿಕೆಯಾಗಿದ್ದು, ನಿನ್ನೆಹೋಲಿಸಿದರೆ ರೂ. 66ರಷ್ಟು ಹೆಚ್ಚಳವಾಗಿದೆ. 10 ಗ್ರಾಂ ದರ ರೂ. 1,00,040 ಆಗಿದ್ದರೆ, 100 ಗ್ರಾಂ ಚಿನ್ನದ ಮೌಲ್ಯವು ಈಗ ರೂ. 10,00,400 ಆಗಿದೆ. ರೂ. 6,600ರಷ್ಟು ಏರಿಕೆಯಾಗಿದೆ ಎಂಬುದು ಗಮನಿಸಬಹುದಾದ ಅಂಶವಾಗಿದೆ.
22 ಕ್ಯಾರೆಟ್ ಚಿನ್ನದ ದರ:
22 ಕ್ಯಾರೆಟ್ ಚಿನ್ನವು ಶೇ. 91.6 ಶುದ್ಧತೆಯುಳ್ಳ ಆಭರಣ ಚಿನ್ನವಾಗಿದ್ದು, ನಿತ್ಯ ಬಳಕೆಯಲ್ಲೂ ಹೆಚ್ಚು ಬಳಸಲಾಗುತ್ತದೆ. ಇಂದಿನ ದರದ ಪ್ರಕಾರ, 1 ಗ್ರಾಂ ಚಿನ್ನದ ಬೆಲೆ ರೂ. 9,170 ಆಗಿದ್ದು, ನಿನ್ನೆಗಿಂತ ರೂ. 60 ಹೆಚ್ಚಾಗಿದೆ. 10 ಗ್ರಾಂ ದರ ರೂ. 91,700 ಹಾಗೂ 100 ಗ್ರಾಂ ದರ ರೂ. 9,17,000 ಆಗಿದೆ. ಇದರಿಂದಾಗಿ ಚಿನ್ನದ ನಗ ಖರೀದಿಯ ಬಜೆಟ್ ಮೇಲೆ ಪರಿಣಾಮ ಉಂಟಾಗಲಿದೆ.
18 ಕ್ಯಾರೆಟ್ ಚಿನ್ನದ ದರ:
ಫ್ಯಾಷನ್ ಆಭರಣಗಳು, ಕಡಿಮೆ ತೂಕದ ವಿನ್ಯಾಸದ ಚಿನ್ನದ ನಗ ಹಾಗೂ ಯುವಜನರ ಬಳಕೆಗೆ ಸೂಕ್ತವಾದ 18 ಕ್ಯಾರೆಟ್ ಚಿನ್ನವೂ ಇಂದು ಏರಿಕೆಯನ್ನೇ ಕಂಡಿದೆ. ಶೇ. 75 ಶುದ್ಧತೆಯ ಚಿನ್ನವಾಗಿರುವ 18Kಗೆ 1 ಗ್ರಾಂ ದರ ರೂ. 7,503, 10 ಗ್ರಾಂ ದರ ರೂ. 75,030 ಮತ್ತು 100 ಗ್ರಾಂ ದರ ರೂ. 7,50,300 ಆಗಿದೆ. ನಿನ್ನೆಗೂ ಹೋಲಿಸಿದರೆ ರೂ. 4,900 ಏರಿಕೆಯಾಗಿದೆ.
ಭಾರತದ ಬೇರೆ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನದ ಬೆಲೆ:
ಚೆನ್ನೈ: 24K - ರೂ. 10,004, 22K - ರೂ. 9,170, 18K - ರೂ. 7,555
ಮುಂಬೈ: 24K - ರೂ. 10,004, 22K - ರೂ. 9,170, 18K - ರೂ. 7,503
ದೆಹಲಿ: 24K - ರೂ. 10,019, 22K - ರೂ. 9,185, 18K - ರೂ. 7,515
ಕೋಲ್ಕತ್ತಾ: 24K - ರೂ. 10,004, 22K - ರೂ. 9,170, 18K - ರೂ. 7,503
ಬೆಂಗಳೂರು: 24K - ರೂ. 10,004, 22K - ರೂ. 9,170, 18K - ರೂ. 7,503
ಹೈದರಾಬಾದ್: 24K - ರೂ. 10,004, 22K - ರೂ. 9,170, 18K - ರೂ. 7,503
ಕೇರಳ: 24K - ರೂ. 10,004, 22K - ರೂ. 9,170, 18K - ರೂ. 7,503
ಪುಣೆ: 24K - ರೂ. 10,004, 22K - ರೂ. 9,170, 18K - ರೂ. 7,503
ವಡೋದರಾ: 24K - ರೂ. 10,009, 22K - ರೂ. 9,175, 18K - ರೂ. 7,507
ಅಹಮದಾಬಾದ್: 24K - ರೂ. 10,009, 22K - ರೂ. 9,175, 18K - ರೂ. 7,507
ಭಾರತದಲ್ಲಿ ಬೆಳ್ಳಿ ಬೆಲೆ:
ಬೆಳ್ಳಿ ಬೆಲೆ ಇಂದಿಗೆ ದೇಶದಾದ್ಯಂತ 1 ಗ್ರಾಂಗೆ ರೂ. 116ಕ್ಕೆ ತಲುಪಿದೆ. ನಿನ್ನೆ ಬೆಲೆ ರೂ. 113.90 ಇತ್ತೆಂದು ಪರಿಗಣಿಸಿದರೆ, ಇದರಲ್ಲಿ ರೂ. 2.10ರಷ್ಟು ಏರಿಕೆಯಾಗಿದೆ. 10 ಗ್ರಾಂ ಬೆಲೆ ಈಗ ರೂ. 1,160 ಆಗಿದ್ದು, ನಿನ್ನೆಗಿಂತ ರೂ. 21 ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ಈಗ ರೂ. 11,600 ಆಗಿದ್ದು, ನಿನ್ನೆ ಅದು ರೂ. 11,390 ಇತ್ತು. 1 ಕಿಲೋಗ್ರ ಬೆಳ್ಳಿಯ ಮೌಲ್ಯ ಇಂದು ರೂ. 1,16,000 ತಲುಪಿದ್ದು, ಇದು ನಿನ್ನೆದಿನದ ರೂ. 1,13,900 ಹೋಲಿಸಿದರೆ ರೂ. 2,100 ಏರಿಕೆಯಾಗಿದೆ.
ಸ್ಪಾಟ್ ಚಿನ್ನದ ಬೆಲೆ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಜುಲೈ 18ರಂದು, ಸ್ಪಾಟ್ ಚಿನ್ನದ ದರದಲ್ಲಿ ವಿಶೇಷ ಬದಲಾವಣೆ ಕಂಡುಬಂದಿಲ್ಲ. ಚಿನ್ನವು ಪ್ರತಿಔನ್ಸ್‌ಗೆ ಸುಮಾರು ಡಾಲರ್ 3,337.60 ರಷ್ಟು ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ಹಂತಗಳೊಂದಿಗೆ ಹೋಲಿಸಿದರೆ ಇದರಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದು, ದರವು ಸ್ಥಿರವಾಗಿದೆ ಎಂಬುದನ್ನು ಸೂಚಿಸುತ್ತದೆ.
ಚಿನ್ನದ ದರ ಏರಿಕೆಯಿಂದಾಗಿ ನಿಕಟ ಭವಿಷ್ಯದಲ್ಲಿ ಮತ್ತಷ್ಟು ಏರಿಕೆ ಸಾಧ್ಯತೆ ಉಂಟು ಎಂದು ನಿಪುಣರು ಅಂದಾಜಿಸುತ್ತಿದ್ದಾರೆ. ಆದ್ದರಿಂದ, ಹೂಡಿಕೆ ಅಥವಾ ವಿವಾಹ, ಮುಹೂರ್ತದ ಉದ್ದೇಶದಿಂದ ಚಿನ್ನ ಖರೀದಿ ಮಾಡುವವರು ಇಂದೇ ಖರೀದಿಸುವುದರ ಮೂಲಕ ತಮ್ಮ ಖರ್ಚು ಉಳಿಸಿಕೊಳ್ಳಬಹುದು. ಆದರೆ ಖರೀದಿ ಮಾಡುವಾಗ ತಯಾರಿಕಾ ಶುಲ್ಕ, ಜಿಎಸ್‌ಟಿ ಹಾಗೂ ಹಾಲ್‌ಮಾರ್ಕ್ ಪ್ರಮಾಣಪತ್ರಗಳನ್ನೂ ಪರಿಗಣಿಸುವುದು ಮರೆತರೆ ಚುಕ್ಕಾಣಿ ತಪ್ಪುವ ಸಂಭವವಿದೆ.


Click it and Unblock the Notifications