ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಗನನಕ್ಕೇರಿದೆ. ಜುಲೈ ತಿಂಗಳ ಆರಂಭದಿಂದಲೂ ಚಿನ್ನದ ಮೌಲ್ಯ ಇಳಿಕೆ ನೋಡಿದ್ದಕ್ಕಿಂತ, ಏರಿಕೆಯಾಗಿದ್ದೇ ಹೆಚ್ಚು ಎನ್ನಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಡೆಯುತ್ತಿರುವ ಏರಿಕೆ, ಡಾಲರ್‌ನ ದುರ್ಬಲತೆ ಹಾಗೂ ದೇಶೀಯ ಹೂಡಿಕೆದಾರರಲ್ಲಿ ಭದ್ರ ಹೂಡಿಕೆಗಳತ್ತ ಹರಿವಿರುವ ಪ್ರವೃತ್ತಿಯ ಪರಿಣಾಮವಾಗಿ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ದರಗಳು ನಿನ್ನೆಗೆ ಹೋಲಿಸಿದರೆ, 100 ಗ್ರಾಂನಲ್ಲಿ 4,500 ರೂ. ರಿಂದ 6,000 ರೂ. ವರೆಗೆ ಹೆಚ್ಚಳ ದಾಖಲಾಗಿದ್ದು, ಇದು ಚಿನ್ನದಲ್ಲಿ ಹೂಡಿಕೆಗೆ ಉತ್ಸಾಹಿತ ಗೊಳಿಸುವತ್ತ ಸೂಚಿಸುತ್ತಿದೆ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನದ ಬೆಲೆ:
ಇಂದು 24 ಕ್ಯಾರೆಟ್ ಚಿನ್ನದ ದರಗಳಲ್ಲಿ ಸ್ಪಷ್ಟವಾದ ಏರಿಕೆ ದಾಖಲಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 9,900 ರೂ. 10 ಗ್ರಾಂಗೆ 99,000 ರೂ. ಹಾಗೆಯೇ 100 ಗ್ರಾಂಗೆ 9,90,000 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 9,840 ರೂ. ಆಗಿದ್ದು, ಇಂದಿಗೆ 60 ರೂ. ಹೆಚ್ಚಾಗಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಇಂದು 6,000 ರೂ. ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ದರ:
ಇನ್ನು ಆಭರಣಕ್ಕಾಗಿ ಹೆಚ್ಚಾಗಿ ಬಳಸುವಂತಹ 22 ಕ್ಯಾರೆಟ್ ಚಿನ್ನವು ಸಹ ಏರಿಕೆಯ ಹಾದಿ ಹಿಡಿದಿದೆ. ಇಂದು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 9,075 ರೂ. ಆದರೆ, 10 ಗ್ರಾಂಗೆ 90,750 ರೂ. 100 ಗ್ರಾಂ 9,07,500 ರೂ. ಆಗಿದೆ. ನಿನ್ನೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ, 9,010 ರಷ್ಟಾಗಿದ್ದು, ಇಂದಿಗೆ 55 ರೂ. ಹೆಚ್ಚಳ ನೋಡಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಲೆಕ್ಕ ಹಾಕಿ ನೋಡಿದರೆ ನಿನ್ನೆಗಿಂತ ಇಂದು 5,500 ಹೆಚ್ಚಳವಾಗಿದೆ.
18K ಚಿನ್ನದ ಬೆಲೆಯಲ್ಲೂ ಏರಿಕೆ:
24K, 22K ಚಿನ್ನದ ಬೆಲೆಯಂತೆಯೇ 18K ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 7,425 ರೂ, 10 ಗ್ರಾಂ ಚಿನ್ನದ ಬೆಲೆ ₹74,250 , 100 ಗ್ರಾಂ ಚಿನ್ನದ ಬೆಲೆ ₹7,42,500 ಆಗಿದೆ. ಒಂದು ಗ್ರಾಂ ಚಿನ್ನ ನಿನ್ನೆ ದಿನ ₹7,372 ಆಗಿದ್ದು, ಇಂದು ₹45 ಹೆಚ್ಚಾಗಿದೆ. ಅಂದರೆ ನೂರು ಗ್ರಾಂ ಚಿನ್ನದಲ್ಲಿ ₹4,500 ರಷ್ಟು ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,480 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9915 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,090 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,438 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,900 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,905 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,080 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,429 ಆಗಿದೆ.
ಭಾರತದಲ್ಲಿ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿ 111 ರೂ., ಹತ್ತು ಗ್ರಾಂ ಬೆಳ್ಳಿ 1,110 ರೂ. ನೂರು ಗ್ರಾಂ ಬೆಳ್ಳಿ ₹11,100 ಮತ್ತು ಒಂದು ಕೆ.ಜಿ ಬೆಳ್ಳಿ ಬೆಲೆ ₹1,10,000 ಯಾಗಿದೆ. ಪ್ರತಿ ಗ್ರಾಂ ಬೆಳ್ಳಿಯಲ್ಲೂ 1 ರೂ.ನಂತೆ ಹೆಚ್ಚಾಗಿದ್ದು, ಸಾವಿರ ಗ್ರಾಂ ಬೆಳ್ಳಿಯಲ್ಲಿ 1000 ರೂ. ಹೆಚ್ಚಾಗಿದೆ.
ಸ್ಪಾಟ್ ಚಿನ್ನದ ಬೆಲೆ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಇಂದು ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಸುಮಾರು $3,331.09ಕ್ಕೆ ತಲುಪಿದ್ದು, ಇದರಲ್ಲಿ ಶೇ. 0.25ರಷ್ಟು ಏರಿಕೆ ಕಂಡುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹೊಸ ಸುಂಕಗಳು ಮತ್ತು ಜಾಗತಿಕ ವ್ಯಾಪಾರ ಉದ್ವಿಗ್ನತೆ ಹೂಡಿಕೆದಾರರಲ್ಲಿ ಭಯ ಹುಟ್ಟಿಸಿದೆ.
ಒಟ್ಟಿನಲ್ಲಿ ನಿನ್ನೆ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಇಂದು, ಏರಿಕೆಯತ್ತ ಮುಖ ಮಾಡಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ಮತ್ತು ಖರೀದಿದಾರರಿಗೆ ಗೊಂದಲ ಉಂಟಾಗಿದೆ.


Click it and Unblock the Notifications