ಜುಲೈ 17, 2025ರಂದು ಭಾರತದಲ್ಲಿ ಚಿನ್ನದ ದರಗಳಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ, ಅಮೆರಿಕನ್ ಡಾಲರ್‌ನ ಮೌಲ್ಯ ಹಾಗೂ ದೇಶೀಯ ಬೇಡಿಕೆಯ ಬೆಂಬಲದಿಂದಾಗಿ ಚಿನ್ನದ ದರಗಳು ಮಿತವಾಗಿ ಮೇಲೆತ್ತಿವೆ. ಹಬ್ಬದ ಹಂಗಾಮದ ಆರಂಭದ ಹೊತ್ತಿನಲ್ಲಿ, ಆಭರಣ ಖರೀದಿ ಮತ್ತು ಹೂಡಿಕೆಗೆ ಈ ಏರಿಕೆ ಮಹತ್ವ ಪಡೆದುಕೊಂಡಿದೆ. 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ನಿನ್ನೆಗಿಂತ ಸಣ್ಣ ಮಟ್ಟದ ಪರಿಷ್ಕರಣೆ ಕಂಡುಬಂದಿದ್ದು, ಗ್ರಾಹಕರ ಗಮನ ಸೆಳೆದಿದೆ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನ:
24 ಕ್ಯಾರೆಟ್ ಚಿನ್ನವನ್ನು ಶುದ್ಧತೆಯ ಪ್ರತಿಕೆಯಾಗಿಯೇ ಪರಿಗಣಿಸಲಾಗುತ್ತಿದ್ದು, ಹೂಡಿಕೆದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಂದು 1 ಗ್ರಾಂ ಚಿನ್ನದ ದರ ರೂ.9,933 ಆಗಿದ್ದು, ನಿನ್ನೆ ಇತ್ತು ರೂ.9,928. ಅಂದರೆ ರೂ.5ರ ಏರಿಕೆ. 10 ಗ್ರಾಂ ದರ ರೂ.99,330 ಆಗಿದ್ದು, ನಿನ್ನೆಗಿಂತ ರೂ.50 ಹೆಚ್ಚು. 100 ಗ್ರಾಂ ದರ ರೂ.9,93,300 ಆಗಿದ್ದು, ಕಳೆದ ದಿನದಿಗಿಂತ ರೂ.500 ಹೆಚ್ಚಾಗಿದೆ. ಈ ದರ ಏರಿಕೆ ಚಿನ್ನವನ್ನು ಹೂಡಿಕೆಯಾಗಿ ನೋಡುತ್ತಿರುವವರಲ್ಲಿ ಹರ್ಷ ಉಂಟುಮಾಡಿದೆ.
22 ಕ್ಯಾರೆಟ್ ಚಿನ್ನದಲ್ಲಿ ಎಷ್ಟು ಏರಿದೆ:
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದಲ್ಲಿಯೂ ಇಂದು ಎಳೆಯಷ್ಟು ದರ ಏರಿಕೆ ಕಂಡುಬಂದಿದೆ. 1 ಗ್ರಾಂ ದರ ರೂ.9,105 ಆಗಿದ್ದು, ನಿನ್ನೆ ಇತ್ತು ರೂ.9,100..ಅಂದರೆ ರೂ.5 ಹೆಚ್ಚಳ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.91,050 ಆಗಿದ್ದು, ನಿನ್ನೆಗಿಂತ ರೂ.50 ಏರಿಕೆ ಕಂಡಿದೆ. 100 ಗ್ರಾಂ ದರ ರೂ.9,10,500 ಆಗಿದ್ದು, ರೂ.500 ಹೆಚ್ಚಳವಾಗಿದೆ. ಮದುವೆ, ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಗೆ ಯೋಜನೆ ಮಾಡುತ್ತಿರುವ ಗ್ರಾಹಕರಿಗೆ ಇವು ಮುನ್ನೋಟದ ಸೂಚನೆಗಳಾಗಬಹುದು.
18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
ವೈಶಿಷ್ಟ್ಯಮಯ ವಿನ್ಯಾಸದ ಆಭರಣಗಳಿಗಾಗಿ ಜನಪ್ರಿಯವಾಗಿರುವ 18 ಕ್ಯಾರೆಟ್ ಚಿನ್ನದ ದರಗಳೂ ಇಂದು ಹೆಚ್ಚಾಗಿವೆ. 1 ಗ್ರಾಂ ದರ ರೂ.7,450 ಆಗಿದ್ದು, ನಿನ್ನೆ ಇತ್ತು ರೂ.7,446.. ಅಂದರೆ ರೂ.4 ಹೆಚ್ಚಳ. 10 ಗ್ರಾಂ ದರ ಇಂದು ರೂ.74,500 ಆಗಿದ್ದು, ನಿನ್ನೆಗಿಂತ ರೂ.40 ಹೆಚ್ಚಾಗಿದೆ. 100 ಗ್ರಾಂ ಬೆಲೆ ರೂ.7,45,000 ಆಗಿದ್ದು, ನಿನ್ನೆಗಿಂತ ರೂ.400 ಹೆಚ್ಚು. ಕಡಿಮೆ ತೂಕದ ಚಿನ್ನದ ಆಭರಣಗಳಲ್ಲಿ ಆಸಕ್ತಿ ಹೊಂದಿರುವ ಗ್ರಾಹಕರು ಈ ದರ ಚಲನೆಗೆ ಗಮನ ಹರಿಸಬೇಕಾಗಿದೆ.
ಭಾರತದ ಬೇರೆ ಬೇರೆ ನಗರಗಳಲ್ಲಿ ಎಷ್ಟಿದೆ ಬಂಗಾರ?
ಚೆನ್ನೈ: 24 ಕ್ಯಾರೆಟ್ - ರೂ.9,933, 22 ಕ್ಯಾರೆಟ್ - ರೂ.9,105, 18 ಕ್ಯಾರೆಟ್ - ರೂ.7,500
ಮುಂಬೈ: 24 ಕ್ಯಾರೆಟ್ - ರೂ.9,933, 22 ಕ್ಯಾರೆಟ್ - ರೂ.9,105, 18 ಕ್ಯಾರೆಟ್ - ರೂ.7,450
ದೆಹಲಿ: 24 ಕ್ಯಾರೆಟ್ - ರೂ.9,948, 22 ಕ್ಯಾರೆಟ್ - ರೂ.9,115, 18 ಕ್ಯಾರೆಟ್ - ರೂ.7,458
ಕೋಲ್ಕತ್ತಾ: 24 ಕ್ಯಾರೆಟ್ - ರೂ.9,933, 22 ಕ್ಯಾರೆಟ್ - ರೂ.9,105, 18 ಕ್ಯಾರೆಟ್ - ರೂ.7,45
ಬೆಂಗಳೂರು: 24 ಕ್ಯಾರೆಟ್ - ರೂ.9,933, 22 ಕ್ಯಾರೆಟ್ - ರೂ.9,105, 18 ಕ್ಯಾರೆಟ್ - ರೂ.7,450
ಹೈದರಾಬಾದ್: 24 ಕ್ಯಾರೆಟ್ - ರೂ.9,933, 22 ಕ್ಯಾರೆಟ್ - ರೂ.9,105, 18 ಕ್ಯಾರೆಟ್ - ರೂ.7,450
ವಡೋದರಾ: 24 ಕ್ಯಾರೆಟ್ - ರೂ.9,938, 22 ಕ್ಯಾರೆಟ್ - ರೂ.9,110, 18 ಕ್ಯಾರೆಟ್ - ರೂ.7,454
ಅಹಮದಾಬಾದ್: 24 ಕ್ಯಾರೆಟ್ - ರೂ.9,938, 22 ಕ್ಯಾರೆಟ್ - ರೂ.9,110, 18 ಕ್ಯಾರೆಟ್ - ರೂ.7,454
ಭಾರತದಲ್ಲಿ ಇಂದಿನ ಬೆಳ್ಳಿಯ ದರ ಸ್ಥಿರ:
ಜುಲೈ 17, 2025ರಂದು ಭಾರತದಲ್ಲಿ ಬೆಳ್ಳಿಯ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದೆ. 1 ಗ್ರಾಂ ಬೆಳ್ಳಿಗೆ ಇಂದೂ ನಿನ್ನೆಗೂ ರೂ.114ರಷ್ಟೇ ದರ ನಿಗದಿಯಾಗಿದೆ. 10 ಗ್ರಾಂಗೆ ರೂ.1,140, 100 ಗ್ರಾಂಗೆ ರೂ.11,400 ಮತ್ತು 1 ಕೆಜಿಗೆ ರೂ.1,14,000 ಎಂಬ ದರದಲ್ಲಿ ವ್ಯವಹಾರ ನಡೆಯುತ್ತಿದೆ. ಹೀಗಾಗಿ ಬೆಳ್ಳಿಯಲ್ಲಿ ಹೂಡಿಕೆ ಮಾಡುವವರಿಗಾಗಿ ಹೊಸ ಬೆಳವಣಿಗೆಗಳ ನಿರೀಕ್ಷೆ ಮುಂದೂಡುವಂತಾಗಿದೆ, ಏಕೆಂದರೆ ಮಾರುಕಟ್ಟೆ ಯಾವುದೇ ಏರುಪೇರು ಪ್ರದರ್ಶಿಸಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಜುಲೈ 17, 2025 ರಂದು ಚಿನ್ನದ ಸ್ಪಾಟ್ ದರ ಒಂದು ಔನ್ಸ್‌ಗೆ $3,341.35 ಆಗಿದೆ. ಕಳೆದ 24 ಗಂಟೆಗಳ ವ್ಯವಹಾರದಲ್ಲಿ ಚಿನ್ನದ ಬೆಲೆ $3,336.83 ರಿಂದ $3,352.19 ರ ನಡುವೆ ಚಲನೆ ಕಂಡಿದೆ.
ಚಿನ್ನದ ದರಗಳು ಈಗ ತಾತ್ಕಾಲಿಕವಾಗಿ ಮಿತ ಚಲನೆ ತೋರಿಸುತ್ತಿದ್ದರೂ, ಅಂತರರಾಷ್ಟ್ರೀಯ ಸ್ಪಾಟ್ ಮೌಲ್ಯ, ಡಾಲರ್ ಬಲ, ಮಾರುಕಟ್ಟೆಯ ನಿರೀಕ್ಷೆಗಳು ಮತ್ತು ದೇಶೀಯ ಬೇಡಿಕೆಯಲ್ಲಿ ಬರುವ ಬದಲಾವಣೆಗಳಿಗೆ ಅನುಗುಣವಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳಲ್ಲಿ ಅಲೆಯಂತೆ ಚಲನೆ ಕಾಣಿಸುತ್ತಿದೆ. ಹಬ್ಬದ ಸೀಸನ್ ಹಾಗೂ ಮದುವೆ ಕಾಲ ಹತ್ತಿರವಾಗುತ್ತಿರುವುದರಿಂದ ಚಿನ್ನದ ಖರೀದಿ ಗತಿಯು ಬದಲಾಗುವ ಸಾಧ್ಯತೆ ಇದೆ.
More From GoodReturns

ಚಿನ್ನದ ಬೆಲೆ ಇಂದು ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಏರಿಕೆ: ಖರೀದಿಗೆ ಮುನ್ನ ಈ ವಿಷಯ ತಿಳಿಯಿರಿ

ಚಿನ್ನದ ದರ: ಇಂದಿನ ಮಾರುಕಟ್ಟೆ ಏರಿಳಿತದ ಅಸಲಿ ಸತ್ಯವೇನು?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?



Click it and Unblock the Notifications