ಚಿನ್ನ ಖರೀದಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಬಿಸಿ ಸುದ್ದಿ! ಜುಲೈ 2ರ ಇಂದಿನ ದರ ಪಟ್ಟಿ ಪ್ರಕಾರ, ಭಾರತದಲ್ಲಿ 24, 22 ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿದೆ. ಈ ಬೆಳವಣಿಗೆ ಹೂಡಿಕೆದಾರರಲ್ಲಿ ನವೀನ ಚಿಂತನೆ ಹುಟ್ಟಿಸಿದ್ದು, ಮಾರುಕಟ್ಟೆಯು ಮತ್ತಷ್ಟು ಚಲನೆ ಕಾಣುವ ನಿರೀಕ್ಷೆಯಿದೆ.

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲಿ ಸಾಗಿದೆ. ಹೂಡಿಕೆದಾರರು ಹಾಗೂ ಆಭರಣ ಖರೀದಿಗೆ ಉತ್ಸುಕರಾದ ಗ್ರಾಹಕರಿಗೆ ಇದು ಪ್ರಮುಖ ಸುದ್ದಿಯಾಗಿದೆ. ಜುಲೈ 2ರ ದಿನದಂದು ವಿವಿಧ ಕ್ಯಾರೆಟ್‌ಗಳ ಚಿನ್ನದ ದರದಲ್ಲಿ ಸ್ಪಷ್ಟವಾದ ಏರಿಕೆಯನ್ನು ಕಂಡುಬಂದಿದ್ದು, ಎಲ್ಲದಕ್ಕೂ ಮುಂಚಾಗಿ 24 ಕ್ಯಾರೆಟ್ ಚಿನ್ನದ ದರದಲ್ಲಿ 49 ರೂ. ಏರಿಕೆ ಕಂಡುಬಂದಿದೆ. 100 ಗ್ರಾಂ ಚಿನ್ನ 9,88,900ಕ್ಕೆ ತಲುಪಿದೆ.
ಇನ್ನು ಈ ಬೆಲೆ ಒಂದೊಂದು ನಗರದಲ್ಲೂ ಒಂದೊಂದು ರೀತಿಯಲ್ಲಿ ಇರುತ್ತದೆ. ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಪುಣೆ, ಕೋಲ್ಕತ್ತಾ, ಬೆಂಗಳೂರು, ಬರೋಡಾ, ಅಹಮದಾಬಾದ್ ಸೇರಿದಂತೆ ಒಂದೊಂದು ನಗರದಲ್ಲೂ ಒಂದೊಂದು ಬೆಲೆ ಇದೆ. ಹಾಗಾದ್ರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ. ಎಲ್ಲೆಲ್ಲಿ ಎಷ್ಟು ವಹಿವಾಟು ನಡೆಯುತ್ತಿದೆ ಎಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನಕ್ಕೆ ಎಷ್ಟಿದೆ ಬೆಲೆ?
ಈಗಿನ ದರದ ಪ್ರಕಾರ 24 ಕ್ಯಾರೆಟ್ ಚಿನ್ನದ 1 ಗ್ರಾಂಗೆ 9,889 ರೂ. ನಿಗದಿಯಾಗಿದ್ದು, ನಿನ್ನೆ 9,840 ಇದ್ದ ಬೆಲೆಯಲ್ಲಿ ಹೋಲಿಸಿದರೆ 49 ಏರಿಕೆಯಾಗಿದೆ. ಇದರ ಜೊತೆಗೆ 10 ಗ್ರಾಂಗೆ 98,890 ರೂ. ಮತ್ತು 100 ಗ್ರಾಂಗೆ 9,88,900 ರೂ. ಆಗಿದೆ. ಅಂದರೆ 100 ಗ್ರಾಂಗೆ 4,900 ರೂ. ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದಲ್ಲೂ ಏರಿಕೆ:
ಜನ ಸಾಮಾನ್ಯರು ಹೆಚ್ಚು ಖರೀದಿಸುವ 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆಯಾಗುವ ಬದಲು ಏರಿಕೆಯಾಗಿದ್ದು, 1 ಗ್ರಾಂಗೆ 9,065 ರೂ. ಆಗಿದ್ದು, ನಿನ್ನೆ 9,020 ಇದ್ದ ಬೆಲೆಯಲ್ಲಿ 45 ರೂ. ಏರಿಕೆ ಕಂಡುಬಂದಿದೆ. 10 ಗ್ರಾಂಗೆ 90,650 ರೂ. ಹಾಗೂ 100 ಗ್ರಾಂಗೆ 9,06,500 ರೂ. ನಿಗದಿಯಾಗಿದೆ. 4,500 ಏರಿಕೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆ?
18 ಕ್ಯಾರೆಟ್ ಚಿನ್ನದ ದರವೂ ಏರಿಕೆಯ ದಾರಿಯಲ್ಲೇ ಸಾಗಿದ್ದು, 1 ಗ್ರಾಂ ಚಿನ್ನಕ್ಕೆ 7,417 ರೂ. ಆಗಿದ್ದು, ನಿನ್ನೆ ಇದ್ದ 7,380 ಬೆಲೆಯಲ್ಲಿ ಹೋಲಿಸಿದರೆ 37 ರೂ. ಏರಿಕೆಯಾಗಿದೆ. ಹಾಗೆಯೇ 10 ಗ್ರಾಂಗೆ 74,170 ಮತ್ತು 100 ಗ್ರಾಂಗೆ 7,41,700 ರೂ. ಆಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,480 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,904 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,080 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,429 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,894 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,070 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,421 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,894 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,070 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,421 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಪ್ರತಿ ಗ್ರಾಂ ಬೆಳ್ಳಿ ಬೆಲೆ ₹110 ಇದೆ. ಹತ್ತು ಗ್ರಾಂ ಬೆಳ್ಳಿ ಬೆಲೆ ಇಂದು ₹1,100 ಆಗಿದೆ. ನೂರು ಗ್ರಾಂ ಬೆಳ್ಳಿ ಬೆಲೆ ಇಂದು ₹11,000 ಆಗಿದ್ದು, ಒಂದು ಕೆ.ಜಿ ಬೆಳ್ಳಿ ಬೆಲೆ ₹1,10,000 ಆಗಿದೆ, ನಿನ್ನೆ ಈ ಬೆಲೆ ₹1,07,700 ಆಗಿದ್ದು, ಈ ಬೆಲೆ ನಿನ್ನೆಯಂತೆಯೇ ಕಾಯ್ದುಕೊಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಜುಲೈ 2ರಂದು ಸ್ಪಾಟ್ ಗೋಲ್ಡ್ ದರವು ಪ್ರತಿ ಔನ್ಸ್‌ಗೆ ಸುಮಾರು $3,341.70 ರಲ್ಲಿ ಸ್ಥಿರವಾಗಿದೆ. ಅಮೆರಿಕ ಡಾಲರ್ ಮೌಲ್ಯ ಕುಸಿತಕ್ಕೆ ಕಾರಣವಾಗಿದ್ದು, ಇದು ಜಾಗತಿಕವಾಗಿ ಚಿನ್ನವನ್ನು ಹೆಚ್ಚು ಆಕರ್ಷಕ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲು ಕಾರಣವಾಗುತ್ತಿದೆ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ.


Click it and Unblock the Notifications