ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹಾವು-ಏಣಿ ಆಟ ಆಡುತ್ತಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಇಳಿಕೆ ನೋಡಿದ್ದ ಬಂಗಾರ ಇಂದು ನಗು ಕಸಿದಿದೆ. , ಭಾರತದ ಚಿಲ್ಲರೆ ಚಿನ್ನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ದೃಢ ಏರಿಕೆ ಕಂಡುಬಂದಿದೆ. ಒಂದು ಗ್ರಾಂ ಚಿನ್ನದ ಬೆಲೆ ₹10,037 ಇಂದಿನಿಂದ ₹10,091 ಕ್ಕೆ ಏರಿಕೆಗೊಂಡಿದ್ದು, ದೈನಂದಿನ ಮಟ್ಟದಲ್ಲಿ ₹54ರ ಬದಲಾವಣೆ ದಾಖಲಾಗಿದೆ.

ಈ ಬೆಲೆಯು ಬೇರೆ ಬೇರೆ ನಗರಗಳಲ್ಲಿ ಬೇರೆ ರೀತಿಯಲ್ಲಿ ವಹಿವಾಟು ನಡೆಯುತ್ತಿದೆ. ಭಾರತದಲ್ಲಿ ಪ್ರಮುಖ ನಗರಗಳಾದ ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ, ಬರೋಡಾ, ಬೆಂಗಳೂರು, ಅಹಮದಾಬಾದ್ ಸೇರಿದಂತೆ ಹಲವೆಡೆ ಬೆಲೆಯ ಬದಲಾವಣೆ ನೋಡಬಹುದಾಗಿದೆ. ಒಂದು ನಗರದಿಂದ ಮತ್ತೊಂದು ನಗರದಲ್ಲಿ ಚಿನ್ನದ ಬೆಲೆ ಬದಲಾಗಿದೆ.
ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆದಾರರ ನಂಬಿಕೆ ಮತ್ತೆ ಬಲವಾಗುತ್ತಿರುವ ಸೂಚನೆ ನೀಡಿದೆ. ಸಣ್ಣ ಮಟ್ಟದ ಹೆಚ್ಚಳವಾಗಿದ್ದರೂ, ಇದು ಚಿನ್ನದ ಸ್ಥಿರತೆಯ ಸಂಕೇತವಾಗಿ ಕಾಣಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ ಚಿನ್ನದ ಮೌಲ್ಯವು ಮತ್ತೆ ಮೆರೆಗುಟ್ಟುತ್ತಿದೆ. ಹಾಗಾದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ. ಎಷ್ಟಕ್ಕೆ ಬೆಲೆ ನಡೆಯುತ್ತಿದೆ ಎಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, 10,091 ರೂ. ಆಗಿದೆ. ನಿನ್ನೆ ಇದರ ಬೆಲೆ 10,037 ರೂ. ಆಗಿದ್ದು ನಿನ್ನೆಗಿಂತ ಇಂದು, 54 ರೂ. ಏರಿಕೆಯಾಗಿದೆ.
10 ಗ್ರಾಂ ಚಿನ್ನ: 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, 1,00,910 ರೂ. ಆಗಿದೆ. ನಿನ್ನೆ ಇದರ ಬೆಲೆ 1,00,370 ರೂ. ಆಗಿದ್ದು ನಿನ್ನೆಗಿಂತ ಇಂದು, 540 ರೂ. ಏರಿಕೆಯಾಗಿದೆ.
100 ಗ್ರಾಂ ಚಿನ್ನ: 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, 10,09,100 ರೂ. ಆಗಿದೆ. ನಿನ್ನೆ ಇದರ ಬೆಲೆ 10,03,700 ರೂ. ಆಗಿದ್ದು ನಿನ್ನೆಗಿಂತ ಇಂದು, 5,400 ರೂ. ಏರಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, 9,250 ರೂ. ಆಗಿದೆ. ನಿನ್ನೆ ಇದರ ಬೆಲೆ 9,200 ರೂ. ಆಗಿದ್ದು ನಿನ್ನೆಗಿಂತ ಇಂದು, 50 ರೂ. ಏರಿಕೆಯಾಗಿದೆ.
10 ಗ್ರಾಂ ಚಿನ್ನ: 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, 92,500 ರೂ. ಆಗಿದೆ. ನಿನ್ನೆ ಇದರ ಬೆಲೆ 92,000 ರೂ. ಆಗಿದ್ದು ನಿನ್ನೆಗಿಂತ ಇಂದು, 500 ರೂ. ಏರಿಕೆಯಾಗಿದೆ.
100 ಗ್ರಾಂ ಚಿನ್ನ: 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, 9,25,000 ರೂ. ಆಗಿದೆ. ನಿನ್ನೆ ಇದರ ಬೆಲೆ 9,20,000 ರೂ. ಆಗಿದ್ದು ನಿನ್ನೆಗಿಂತ ಇಂದು 5,000 ರೂ. ಏರಿಕೆಯಾಗಿದೆ.
ಭಾರತದಲ್ಲಿ 18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 7,569 ರೂ. ಆಗಿದೆ. ನಿನ್ನೆ ಇದರ ಬೆಲೆ 7,528 ರೂ. ಆಗಿದ್ದು ನಿನ್ನೆಗಿಂತ ಇಂದು, 41 ರೂ. ಏರಿಕೆಯಾಗಿದೆ.
10 ಗ್ರಾಂ ಚಿನ್ನ: 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, 75,690 ರೂ. ಆಗಿದೆ. ನಿನ್ನೆ ಇದರ ಬೆಲೆ 75,280 ರೂ. ಆಗಿದ್ದು ನಿನ್ನೆಗಿಂತ ಇಂದು, 410 ರೂ. ಏರಿಕೆಯಾಗಿದೆ.
100 ಗ್ರಾಂ ಚಿನ್ನ: 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, 7,56,900 ರೂ. ಆಗಿದೆ. ನಿನ್ನೆ ಇದರ ಬೆಲೆ 7,52,800 ರೂ. ಆಗಿದ್ದು ನಿನ್ನೆಗಿಂತ ಇಂದು, 4,100 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,615 ರೂ. ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,106 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,265 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,581 ರೂ. ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ 10,091 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ 9,250 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ 7,569 ರೂ. ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,096 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,255 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,573 ರೂ. ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,096 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,255 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,573 ರೂ. ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಏರಿಕೆಯನ್ನು ನೋಡಬಹುದಾಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆ ₹111 ಇದೆ. ನಿನ್ನೆ ಈ ಬೆಲೆ ₹110 ಆಗಿದ್ದು, ಇಂದು ₹1 ಏರಿಕೆಯಾಗಿದೆ. ಹತ್ತು ಗ್ರಾಂ ಬೆಳ್ಳಿ ಬೆಲೆ ಇಂದು ₹1,110 ಆಗಿದೆ. ಇದರ ಬೆಲೆ ನಿನ್ನೆ ₹1,100 ಆಗಿದ್ದು, ಇಂದು ₹10 ಏರಿಕೆಯಾಗಿದೆ. ನೂರು ಗ್ರಾಂ ಬೆಳ್ಳಿ ಬೆಲೆ ಇಂದು ₹11,100 ಆಗಿದ್ದು, ನಿನ್ನೆ ಈ ಬೆಲೆ ₹11,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹100 ಏರಿಕೆಯಾಗಿದೆ. ಹಾಗೆಯೇ ಇಂದು ಒಂದು ಕೆ.ಜಿ ಬೆಳ್ಳಿ ಬೆಲೆ ₹1,11,000 ಆಗಿದೆ, ನಿನ್ನೆ ಈ ಬೆಲೆ ₹1,10,000 ಆಗಿದ್ದು, ನಿನ್ನೆಗಿಂತ ಇಂದಿಗೆ ₹1,000 ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಜೂನ್ 18ರಂದು ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ $3,388.04 ರಷ್ಟಕ್ಕೆ ಸ್ಥಿರವಾಗಿದೆ. ಜೊತೆಗೆ ಅಮೆರಿಕಾದ ಫ್ಯೂಚರ್ ಪ್ರತಿ ಔನ್ಸ್‌ಗೆ ಸುಮಾರು $3,406.50 ದರದಲ್ಲಿ ವಹಿವಾಟು ನಡೆಸುತ್ತಿದೆ.. ಈ ಸ್ಥಿತಿಗತಿಯು ಚಿನ್ನದ ಮೌಲ್ಯದಲ್ಲಿ ಬೃಹತ್ ಏರಿಕೆ ಅಥವಾ ಇಳಿಕೆ ಆಗದ ರೀತಿಯಲ್ಲಿ, ಹೂಡಿಕೆದಾರರು ಇನ್ನೂ ನಿರೀಕ್ಷೆಯಲ್ಲಿರುವುದನ್ನು ಸೂಚಿಸುತ್ತದೆ.
ಹೂಡಿಕೆಯ ಸಾಧನವಾಗಿರುವ ಚಿನ್ನ:
ಹೂಡಿಕೆಯ ಸಾಧನವಾಗಿರುವ ಚಿನ್ನವು ಭಾರತದಲ್ಲಿ ಹಲವು ರೀತಿಯ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಒಡವೆ ರೂಪದಲ್ಲಿ ಇದು ಖುಷಿ ನೀಡುತ್ತದೆ. ಹಾಗೆಯೇ ಪ್ರತಿಷ್ಠೆಯ ಸಂಕೇತವಾಗಿ ಗೌರವ ತಂದುಕೊಡುತ್ತದೆ. ಇನ್ನು ಕಷ್ಟ ಅಂತ ಬಂದಾಗ ಆರ್ಥಿಕ ಸಹಾಯ ಮಾಡುವ ಮಿತ್ರನಾಗಿರುತ್ತದೆ. ಹೂಡಿಕೆಯ ರೂಪದಲ್ಲಿ ನೋಡುವುದಾದರೆ, ಚಿನ್ನವು ಭವಿಷ್ಯದ ದೊಡ್ಡ ಸಂಪತ್ತಾಗಿ ಪಾತ್ರ ನಿರ್ವಹಿಸುತ್ತದೆ. ಒಂದೇ ಲೋಹ ಹಲವು ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವದ ಸ್ಥಾನವಿದೆ. ಚಿನ್ನವನ್ನು ಪೂಜೆ-ಪುನಸ್ಕಾರ, ಮದುವೆ-ಸಮಾರಂಭಗಳಲ್ಲಿ ಇರಿಸದೇ ಏನೂ ನೆರವೇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಏನು ಕೊಟ್ಟರೂ ಮನಸೋಲದ ನಾರಿಯರಿಗೆ ಚಿನ್ನವೇ ದೊಡ್ಡ ಮಟ್ಟದ ಉಡುಗೊರೆ. ಅವರಿಗೆ ಚಿನ್ನವೇ ಭೂಷಣ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.


Click it and Unblock the Notifications