ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಜೋರಾಗಿದೆ. ಜಾಗತಿಕ ವ್ಯಾಪಾರ ವಲಯದಲ್ಲೂ ಈ ಯುದ್ಧದ ಪ್ರಭಾವ ಬೀರುವ ಲಕ್ಷಣ ಕಂಡುಬರುತ್ತಿದೆ. ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಯಿಂದ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಇದು ಚಿನ್ನದ ಬೆಲೆ ಮೇಲೆ ಯಾವಾಗ ಹೇಗೆ ಬೇಕಾದ್ರೂ ಪ್ರಭಾವ ಬೀರಬಹುದು. ಅದರಂತೆ ಯುದ್ಧದ ಸನ್ನಿವೇಶದಲ್ಲಿ ಚಿನ್ನದ ಬೆಲೆಯನ್ನು ಗಮನಿಸುವುದು ಅತಿ ಮುಖ್ಯ. ಏಕೆಂದರೆ ಜಾಗತಿ ವಲಯದಲ್ಲಿ ಸಂಚಲನ ಸೃಷ್ಟಿಯಾದಾಗ ಚಿನ್ನದ ಬೆಲೆಯು ಏರಿಳಿತಗಳನ್ನು ನೋಡುತ್ತದೆ. ಹಾಗಾದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಎಂದು ತಿಳಿಯಿರಿ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ. 17,308, 8 ಗ್ರಾಂಗೆ ರೂ. 1,38,464, 10 ಗ್ರಾಂಗೆ ರೂ. 1,73,080, ಮತ್ತು 100 ಗ್ರಾಂಗೆ ರೂ. 17,30,800 ಇದೆ. ನಿನ್ನೆ ಈ ಬೆಲೆಗಳು 1 ಗ್ರಾಂಗೆ ರೂ. 16,871, 8 ಗ್ರಾಂಗೆ ರೂ. 1,34,968, 10 ಗ್ರಾಂಗೆ ರೂ. 1,68,710, ಮತ್ತು 100 ಗ್ರಾಂಗೆ ರೂ. 16,87,100 ಇತ್ತು. ಹೀಗಾಗಿ, ಇಂದಿನ ಬೆಲೆಗಳು ನಿನ್ನೆಗಿಂತ 1 ಗ್ರಾಂಗೆ ರೂ. 437, 8 ಗ್ರಾಂಗೆ ರೂ. 3,496, 10 ಗ್ರಾಂಗೆ ರೂ. 4,370, ಮತ್ತು 100 ಗ್ರಾಂಗೆ ರೂ. 43,700 ಹೆಚ್ಚಾಗಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂಗೆ ರೂ. 15,865, 8 ಗ್ರಾಂಗೆ ರೂ. 1,26,920, 10 ಗ್ರಾಂಗೆ ರೂ. 1,58,650, ಮತ್ತು 100 ಗ್ರಾಂಗೆ ರೂ. 15,86,500 ಆಗಿದೆ. ನಿನ್ನೆ ಈ ಬೆಲೆಗಳು 1 ಗ್ರಾಂಗೆ ರೂ. 15,465, 8 ಗ್ರಾಂಗೆ ರೂ. 1,23,720, 10 ಗ್ರಾಂಗೆ ರೂ. 1,54,650, ಮತ್ತು 100 ಗ್ರಾಂಗೆ ರೂ. 15,46,500 ಇತ್ತು. ಹೀಗಾಗಿ ಇಂದಿನ ಬೆಲೆಗಳು 1 ಗ್ರಾಂಗೆ ರೂ. 400, 8 ಗ್ರಾಂಗೆ ರೂ. 3,200, 10 ಗ್ರಾಂಗೆ ರೂ. 4,000, ಮತ್ತು 100 ಗ್ರಾಂಗೆ ರೂ. 40,000 ಹೆಚ್ಚಾಗಿದೆ.
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಇಂದು 18 ಕ್ಯಾರೆಟ್ ಚಿನ್ನ 1 ಗ್ರಾಂಗೆ ರೂ. 12,981, 8 ಗ್ರಾಂಗೆ ರೂ. 1,03,848, 10 ಗ್ರಾಂಗೆ ರೂ. 1,29,810, ಮತ್ತು 100 ಗ್ರಾಂಗೆ ರೂ. 12,98,100 ಬೆಲೆಯಲ್ಲಿ ವ್ಯಾಪಾರವಾಗುತ್ತಿದೆ. ನಿನ್ನೆ 1 ಗ್ರಾಂಗೆ ರೂ. 12,653, 8 ಗ್ರಾಂಗೆ ರೂ. 1,01,224, 10 ಗ್ರಾಂಗೆ ರೂ. 1,26,530, ಮತ್ತು 100 ಗ್ರಾಂಗೆ ರೂ. 12,65,300 ಇತ್ತು. ಹೀಗಾಗಿ, ಇಂದಿನ ಬೆಲೆಗಳು 1 ಗ್ರಾಂಗೆ ರೂ. 328, 8 ಗ್ರಾಂಗೆ ರೂ. 2,624, 10 ಗ್ರಾಂಗೆ ರೂ. 3,280, ಮತ್ತು 100 ಗ್ರಾಂಗೆ ರೂ. 32,800 ಹೆಚ್ಚಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಹೇಗಿದೆ ಇಂದಿನ ಬೆಲೆ?
- ಚೆನ್ನೈ - 24 ಕ್ಯಾರೆಟ್: ರೂ. 17,209 | 22 ಕ್ಯಾರೆಟ್: ರೂ. 15,775 | 18 ಕ್ಯಾರೆಟ್: ರೂ. 13,500
- ಮುಂಬೈ - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ದೆಹಲಿ - 24 ಕ್ಯಾರೆಟ್: ರೂ. 17,323 | 22 ಕ್ಯಾರೆಟ್: ರೂ. 15,880 | 18 ಕ್ಯಾರೆಟ್: ರೂ. 12,996
- ಕೋಲ್ಕತ್ತಾ - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ಬೆಂಗಳೂರು - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ಹೈದರಾಬಾದ್ - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ಕೇರಳ - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ಪುಣೆ - 24 ಕ್ಯಾರೆಟ್: ರೂ. 17,308 | 22 ಕ್ಯಾರೆಟ್: ರೂ. 15,865 | 18 ಕ್ಯಾರೆಟ್: ರೂ. 12,981
- ವಡೋದರಾ - 24 ಕ್ಯಾರೆಟ್: ರೂ. 17,313 | 22 ಕ್ಯಾರೆಟ್: ರೂ. 15,870 | 18 ಕ್ಯಾರೆಟ್: ರೂ. 12,986
- ಅಹಮದಾಬಾದ್ - 24 ಕ್ಯಾರೆಟ್: ರೂ. 17,313 | 22 ಕ್ಯಾರೆಟ್: ರೂ. 15,870 | 18 ಕ್ಯಾರೆಟ್: ರೂ. 12,986
ಭಾರತದಲ್ಲಿ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದಿನ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. 1 ಗ್ರಾಂ ಬೆಳ್ಳಿ ₹295 ದರದಲ್ಲೇ ಲಭ್ಯವಿದ್ದು, ಇದು ನಿನ್ನೆದಿನದ ಬೆಲೆಯಷ್ಟೇ ಇದೆ. 8 ಗ್ರಾಂಗೆ ₹2,360 ಮತ್ತು 10 ಗ್ರಾಂಗೆ ₹2,950 ದರ ನಿಗದಿಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ₹29,500 ಕ್ಕೆ ಮಾರಾಟವಾಗುತ್ತಿದ್ದು, 1000 ಗ್ರಾಂ (1 ಕೆಜಿ) ಬೆಳ್ಳಿ ₹2,95,000 ದರದಲ್ಲೇ ಸ್ಥಿರವಾಗಿದೆ. ಒಟ್ಟಾರೆ ಇಂದು ಬೆಳ್ಳಿಯ ಮಾರುಕಟ್ಟೆ ದರದಲ್ಲಿ ಏರಿಕೆ ಅಥವಾ ಇಳಿಕೆ ಯಾವುದೂ ಸಂಭವಿಸಿಲ್ಲ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಫೆಬ್ರವರಿ 27 ಶುಕ್ರವಾರದಂದು, 0301 ಜಿಎಂಟಿ ವೇಳೆಗೆ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 5,184.69 ಡಾಲರ್ ಮಟ್ಟದಲ್ಲಿ ಸ್ಥಿರವಾಗಿತ್ತು. ಅಮೆರಿಕದ ಸುಂಕ ನೀತಿಗಳ ಅನಿಶ್ಚಿತತೆ ಮತ್ತು ಅಮೆರಿಕಾ-ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಚಿನ್ನವನ್ನು ಆರಿಸಿಕೊಂಡ ಹಿನ್ನೆಲೆಯಲ್ಲಿ, ಫೆಬ್ರವರಿಯಲ್ಲಿ ಚಿನ್ನದ ಬೆಲೆ 6% ಕ್ಕಿಂತ ಹೆಚ್ಚು ಏರಿಕೆಯಾಯಿತು.
ಚಿನ್ನ ಮತ್ತು ಬೆಳ್ಳಿಯ ಇಂದಿನ ದರಗಳು ಜಾಗತಿಕ ರಾಜಕೀಯ ಬೆಳವಣಿಗೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿರುತ್ತವೆ. ವಿಶೇಷವಾಗಿ ಇರಾನ್ ಸಂಬಂಧಿತ ಯುದ್ಧ ಅಥವಾ ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚಾದಾಗ, ಹೂಡಿಕೆದಾರರು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಚಿನ್ನ ಮತ್ತು ಬೆಳ್ಳಿಯನ್ನು ಆರಿಸುವ ಪ್ರವೃತ್ತಿ ಕಾಣಿಸುತ್ತದೆ. ಇಂತಹ ಅಸ್ಥಿರ ಪರಿಸ್ಥಿತಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿ, ಅದರ ಪರಿಣಾಮವಾಗಿ ಭಾರತದಲ್ಲಿಯೂ ದರಗಳಲ್ಲಿ ಏರಿಳಿತ ಸಂಭವಿಸಬಹುದು. ಆದ್ದರಿಂದ ಮುಂದಿನ ದಿನಗಳಲ್ಲಿ ಜಾಗತಿಕ ರಾಜಕೀಯ ಪರಿಸ್ಥಿತಿ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದರ ಮೇಲೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಚಲನೆ ಬಹುಮಟ್ಟಿಗೆ ಅವಲಂಬಿತವಾಗಿರಲಿದೆ.


Click it and Unblock the Notifications