ಭಾರತದಲ್ಲಿ ಇಂದು ಚಿನ್ನದ ಬೆಲೆ ಇಳಿಕೆ ಹಾದಿ ಹಿಡಿದಿದೆ. ಯುಗಾದಿಗೂ ಮುಂಚಿನ ದಿನದಂದು ಬೆಲೆ ಇಳಿಕೆಯಾಗಿರುವುದು, ಚಿನ್ನ ಪ್ರಿಯರಿಗೆ ಬಂದ ಸಂತಸದ ಸುದ್ದಿಯಾಗಿದೆ. ಅದರಲ್ಲೂ ಇತ್ತೀಚಿನ ಜಾಗತಿಕ ಬೆಳವಣಿಗೆಗಳು ಚಿನ್ನದ ಬೆಲೆ ಹಾವು ಏಣಿ ಆಟ ಆಡುವಂತೆ ಮಾಡಿವೆ. ತೈಲ ಬೆಲೆ ಏರಿಕೆ, ಮಾರುಕಟ್ಟೆ ಸಂಚಲನ ಸೇರಿ ಹಲವು ಕಾರಣಗಳಿಂದ ಚಿನ್ನದ ಬೆಲೆಯು ಕೂಡ ಭಾರಿ ಏರಿಕೆ, ಭಾರಿ ಇಳಿಕೆಯನ್ನು ಸಹ ಕಾಣುತ್ತಿವೆ. ಹಾಗೆಯೇ ಇಂದಿನ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು ಖರೀದಿದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಗಾದರೆ ಭಾರತದಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದಿನ ದಿನ ಸ್ವಲ್ಪ ಇಳಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ಇಂದಿನ ಬೆಲೆ 15,775 ರೂ. ಆಗಿದ್ದು, ನಿನ್ನೆ 15,808 ರೂ. ಇತ್ತು, ಅಂದರೆ 33 ರೂ. ಇಳಿಕೆ ನೋಡಿದೆ. 10 ಗ್ರಾಂ ಚಿನ್ನ ಇಂದು 1,57,750 ರೂ. ಆಗಿದ್ದು, ನಿನ್ನೆ 1,58,080 ರೂ. ಇದ್ದು 330 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 15,77,500 ರೂ. ಆಗಿದ್ದು, ನಿನ್ನೆ 15,80,800 ರೂ. ಇತ್ತು, ಇದರಿಂದ 3,300 ರೂ. ಇಳಿಕೆಯಾಗಿದೆ. ಒಟ್ಟಾರೆ, ಶುದ್ಧ ಚಿನ್ನದ ಬೆಲೆಯಲ್ಲಿ ಇಂದಿನ ದಿನ ಸ್ವಲ್ಪ ಕುಸಿತ ದಾಖಲಾಗಿದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಂದಿನ ದಿನ ಇಳಿಕೆ ಕಂಡುಬಂದಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 14,460 ರೂ. ಆಗಿದ್ದು, ನಿನ್ನೆ 14,490 ರೂ. ಇತ್ತು, 30 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಇಂದಿನ ಬೆಲೆ 1,44,600 ರೂ. ಆಗಿದ್ದು, ನಿನ್ನೆ 1,44,900 ರೂ. ಇತ್ತು, 300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 14,46,000 ರೂ. ಆಗಿದ್ದು, ನಿನ್ನೆ 14,49,000 ರೂ. ಇತ್ತು, 3,000 ರೂ. ಇಳಿಕೆಯಾಗಿದೆ. ಇದರಿಂದ 22 ಕ್ಯಾರೆಟ್ ಚಿನ್ನದಲ್ಲೂ ಸಮಾನವಾಗಿ ದರ ಕುಸಿತ ಕಂಡುಬರುತ್ತಿದೆ.
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ:
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ದರದಲ್ಲೂ ಇಳಿಕೆ ಮುಂದುವರೆದಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 11,831 ರೂ. ಆಗಿದ್ದು, ನಿನ್ನೆ 11,856 ರೂ. ಇತ್ತು, 25 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,18,310 ರೂ. ಆಗಿದ್ದು, ನಿನ್ನೆ 1,18,560 ರೂ. ಇತ್ತು, 250 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 11,83,100 ರೂ. ಆಗಿದ್ದು, ನಿನ್ನೆ 11,85,600 ರೂ. ಇತ್ತು, 2,500 ರೂ. ಇಳಿಕೆಯಾಗಿದೆ. ಈ ಮೂಲಕ ಕಡಿಮೆ ಶುದ್ಧತೆಯ ಚಿನ್ನದಲ್ಲೂ ಬೆಲೆ ಇಳಿಕೆ ಸ್ಪಷ್ಟವಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?
- ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,895 ರೂ., 22 ಕ್ಯಾರೆಟ್ 14,570 ರೂ. ಹಾಗೂ 18 ಕ್ಯಾರೆಟ್ 12,240 ರೂ. ಆಗಿದೆ.
- ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ದೆಹಲಿ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ 15,824 ರೂ., 22 ಕ್ಯಾರೆಟ್ 14,506 ರೂ. ಮತ್ತು 18 ಕ್ಯಾರೆಟ್ 11,872 ರೂ. ಆಗಿದೆ.
- ಕೋಲ್ಕತ್ತಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ಹೈದರಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ಕೇರಳದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ಪುಣೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 15,775 ರೂ., 22 ಕ್ಯಾರೆಟ್ 14,460 ರೂ. ಹಾಗೂ 18 ಕ್ಯಾರೆಟ್ 11,831 ರೂ. ಆಗಿದೆ.
- ವಡೋದರದಲ್ಲಿ 24 ಕ್ಯಾರೆಟ್ ಚಿನ್ನದ ದರ 15,814 ರೂ., 22 ಕ್ಯಾರೆಟ್ 14,496 ರೂ. ಮತ್ತು 18 ಕ್ಯಾರೆಟ್ 11,862 ರೂ. ಆಗಿದೆ.
- ಅಹಮದಾಬಾದ್‌ನಲ್ಲಿ 24 ಕ್ಯಾರೆಟ್ ಚಿನ್ನದ ದರ 15,814 ರೂ., 22 ಕ್ಯಾರೆಟ್ 14,496 ರೂ. ಮತ್ತು 18 ಕ್ಯಾರೆಟ್ 11,862 ರೂ. ಆಗಿದೆ.
ಸ್ಪಾಟ್ ಚಿನ್ನದ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಸ್ಪಾಟ್ ಗೋಲ್ಡ್ ಬೆಲೆ 0.1% ಇಳಿಕೆಯಾಗಿದ್ದು, ಪ್ರತಿ ಔನ್ಸ್‌ಗೆ 5,000.77 ಡಾಲರ್ ಮಟ್ಟದಲ್ಲಿ ವ್ಯವಹಾರವಾಗಿದೆ. ಇದೇ ವೇಳೆ, ಏಪ್ರಿಲ್ ವಿತರಣೆಗೆ ಸಂಬಂಧಿಸಿದ ಯುಎಸ್ ಗೋಲ್ಡ್ ಫ್ಯೂಚರ್ಸ್ ದರವೂ 0.1% ಕುಸಿದು 5,004.60 ಡಾಲರ್ ಮಟ್ಟಕ್ಕೆ ತಲುಪಿದೆ.
ಭಾರತದಲ್ಲಿ ಬೆಳ್ಳಿ ಬೆಲೆ:
ಭಾರತದಲ್ಲಿ ಬೆಳ್ಳಿಯ ದರದಲ್ಲಿ ಇಂದಿನ ದಿನ ಗಮನಾರ್ಹ ಇಳಿಕೆ ಕಂಡುಬಂದಿದೆ. 1 ಗ್ರಾಂ ಬೆಳ್ಳಿಯ ಇಂದಿನ ಬೆಲೆ 265 ರೂ. ಆಗಿದ್ದು, ನಿನ್ನೆ 275 ರೂ. ಇತ್ತು, ಅಂದರೆ 10 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಇಂದು 2,650 ರೂ. ಆಗಿದ್ದು, ನಿನ್ನೆ 2,750 ರೂ. ಇತ್ತು, 100 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ಇಂದು 26,500 ರೂ. ಆಗಿದ್ದು, ನಿನ್ನೆ 27,500 ರೂ. ಇತ್ತು, ಇದರಿಂದ 1,000 ರೂ. ಇಳಿಕೆಯಾಗಿದೆ. ಹಾಗೆಯೇ 1 ಕೆಜಿ (1000 ಗ್ರಾಂ) ಬೆಳ್ಳಿಯ ಬೆಲೆ ಇಂದು 2,65,000 ರೂ. ಆಗಿದ್ದು, ನಿನ್ನೆ 2,75,000 ರೂ. ಇತ್ತು, 10,000 ರೂ. ಇಳಿಕೆಯಾಗಿದೆ. ಒಟ್ಟಾರೆ, ಬೆಳ್ಳಿಯ ದರದಲ್ಲಿ ಇಂದಿನ ದಿನ ಸ್ಪಷ್ಟವಾದ ಕುಸಿತ ಕಂಡುಬರುತ್ತಿದೆ.
ಒಟ್ಟಿನಲ್ಲಿ, ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಇಳಿಕೆ ದಾಖಲಾಗಿದ್ದು, ಖರೀದಿದಾರರಿಗೆ ಇದು ಅನುಕೂಲಕರ ಸಮಯವಾಗಬಹುದು. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆ, ಡಾಲರ್ ಮೌಲ್ಯ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ದರಗಳು ಮತ್ತೆ ಏರಿಕೆ ಅಥವಾ ಇಳಿಕೆಯನ್ನು ಕಾಣುವ ಸಾಧ್ಯತೆ ಇದೆ. ಆದ್ದರಿಂದ ಖರೀದಿ ಅಥವಾ ಹೂಡಿಕೆ ಮಾಡುವ ಮೊದಲು ಪ್ರಸ್ತುತ ಟ್ರೆಂಡ್‌ಗಳನ್ನು ಗಮನಿಸುವುದು ಅತ್ಯಂತ ಮುಖ್ಯವಾಗಿದೆ.


Click it and Unblock the Notifications