Gold Price Today: ಭಾರತದಲ್ಲಿ ಟ್ರಂಪ್ ಸುಂಕದ ಬಿಸಿ ಹೆಚ್ಚಾದ ಬೆನ್ನಲ್ಲೇ ಚಿನ್ನದ ಬೆಲೆಗಳು ದಾಖಲೆ ಮಟ್ಟಕ್ಕೆ ತಲುಪುತ್ತಿವೆ. ಇಂದಿನ ಬೆಲೆ ಏರಿಕೆ ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯು 11 ಸಾವಿರ ರೂ. ದಾಟಿದೆ. ಚಿನ್ನ ಖರೀದಿ ಮಾಡುವ ಮೊದಲು ಹಾಗೂ ಹೂಡಿಕೆ ಮಾಡುವ ಮೊದಲು ಬೆಲೆ ಬಗ್ಗೆ ಗಮನ ಹರಿಸಲೇಬೇಕಾದ ಸಂಗತಿ ಎದುರಾಗಿದೆ. ಏಕೆಂದರೆ ಸೆಪ್ಟೆಂಬರ್ ತಿಂಗಳ ಆರಂಭದಿಂದ ಇಂದಿನವರೆಗೂ ಹೋಲಿಸಿದರೆ, ಈ ದಿನವೇ ಅತಿಹೆಚ್ಚು ಬೆಲೆಯ ಏರಿಕೆ ನೋಡಬಹುದಾಗಿದೆ. ಹಾಗಾದ್ರೆ ಇಂದು 24K, 22K, 18K ಚಿನ್ನದ ಬೆಲೆಯಲ್ಲಿ ಯಾವ ರೀತಿ ಏರಿಕೆ ಕಂಡುಬಂದಿದೆ. ಇಂದಿನ ಬೆಲೆ ಎಷ್ಟು ಎಂದು ತಿಳಿಯಿರಿ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನ:
ಭಾರತದಲ್ಲಿ ಶುದ್ಧ 24 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂಕ್ಕೆ ರೂ.11,029 ಆಗಿದ್ದು, ನಿನ್ನೆ ಇದು ರೂ.10,893 ಆಗಿತ್ತು. ಇದರಿಂದ ಚಿನ್ನದ ಬೆಲೆಗೆ ರೂ.136 ರಷ್ಟು ಏರಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,10,290 ಆಗಿದ್ದು, ನಿನ್ನೆ ರೂ.1,08,930 ಇದ್ದುದರಿಂದ ರೂ.1,360 ರಷ್ಟು ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ.11,02,900 ಆಗಿದ್ದು, ನಿನ್ನೆ ರೂ.10,89,300 ಆಗಿತ್ತು, ಇದು ರೂ.13,600 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನ:
ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.10,110 ಆಗಿದ್ದು, ನಿನ್ನೆ ರೂ.9,985 ಆಗಿತ್ತು. ದಿನಕ್ಕೊಂದು ಚಿನ್ನದ ಬೆಲೆ ರೂ.125 ರಷ್ಟು ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.1,01,100 ಆಗಿದ್ದು, ನಿನ್ನೆ ರೂ.99,850 ಇದ್ದುದರಿಂದ ರೂ.1,250 ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ.10,11,000 ಆಗಿದ್ದು, ನಿನ್ನೆ ರೂ.9,98,500 ಇದ್ದುದರಿಂದ ರೂ.12,500 ರಷ್ಟು ಏರಿಕೆ ಕಂಡು ಬಂದಿದೆ.
ಭಾರತದಲ್ಲಿ 18 ಕ್ಯಾರೆಟ್ ಚಿನ್ನ:
ಭಾರತದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ಇಂದು ರೂ.8,272 ಆಗಿದ್ದು, ನಿನ್ನೆ ರೂ.8,170 ಆಗಿತ್ತು. ಹೀಗಾಗಿ 1 ಗ್ರಾಂ ಬೆಲೆಗೆ ರೂ.102 ರಷ್ಟು ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ.82,720 ಆಗಿದ್ದು, ನಿನ್ನೆ ರೂ.81,700 ಇದ್ದುದರಿಂದ ರೂ.1,020 ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ರೂ.8,27,200 ಆಗಿದ್ದು, ನಿನ್ನೆ ರೂ.8,17,000 ಇದ್ದುದರಿಂದ ರೂ.10,200 ರಷ್ಟು ಏರಿಕೆ ಕಂಡು ಬಂದಿದೆ.
ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಚಿನ್ನದ ಬೆಲೆ?
ಚೆನ್ನೈ: 1 ಗ್ರಾಂ ಚಿನ್ನದ ಬೆಲೆ ಇಂದು 24 ಕ್ಯಾರೆಟ್ ರೂ.11,073, 22 ಕ್ಯಾರೆಟ್ ರೂ.10,150, 18 ಕ್ಯಾರೆಟ್ ರೂ.8,405 ಆಗಿದೆ.
ಮುಂಬೈ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ದೆಹಲಿ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,044, 22 ಕ್ಯಾರೆಟ್ ರೂ.10,125, 18 ಕ್ಯಾರೆಟ್ ರೂ.8,287 ಆಗಿದೆ.
ಕೋಲ್ಕತ್ತಾ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ಬೆಂಗಳೂರು: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ಹೈದರಾಬಾದ್: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ಕೇರಳ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ಪುಣೆ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,029, 22 ಕ್ಯಾರೆಟ್ ರೂ.10,110, 18 ಕ್ಯಾರೆಟ್ ರೂ.8,272 ಆಗಿದೆ.
ವಡೋದರಾ: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,034, 22 ಕ್ಯಾರೆಟ್ ರೂ.10,115, 18 ಕ್ಯಾರೆಟ್ ರೂ.8,277 ಆಗಿದೆ.
ಅಹಮದಾಬಾದ್: 1 ಗ್ರಾಂ ಚಿನ್ನ 24 ಕ್ಯಾರೆಟ್ ರೂ.11,034, 22 ಕ್ಯಾರೆಟ್ ರೂ.10,115, 18 ಕ್ಯಾರೆಟ್ ರೂ.8,277 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತದಲ್ಲಿ ಇಂದಿನ ಬೆಳ್ಳಿಯ ದರವು ನಿನ್ನೆ ಹೋಲಿಸಿದರೆ ಗಮನಾರ್ಹವಾಗಿ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ರೂ.130 ಆಗಿದ್ದು, ನಿನ್ನೆ ರೂ.127 ಆಗಿತ್ತು, 8 ಗ್ರಾಂ ರೂ.1,040, 10 ಗ್ರಾಂ ರೂ.1,300, 100 ಗ್ರಾಂ ರೂ.13,000, 1000 ಗ್ರಾಂ (1 ಕಿಲೋಗ್ರಾಂ) ಬೆಳ್ಳಿ ರೂ.1,30,000 ಆಗಿದ್ದು, ಪ್ರತಿಯೊಂದು ಪ್ರಮಾಣದಲ್ಲಿ ಹೋಲಿಸಿದರೆ ಕ್ರಮವಾಗಿ ರೂ.3, 24, 30, 300 ಮತ್ತು 3,000 ರಷ್ಟು ಹೆಚ್ಚಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಸೆಪ್ಟೆಂಬರ್ 9, 2025 ರ ವೇಳೆಗೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ತಲುಪಿದೆ. ರಾಯಿಟರ್ಸ್ ವರದಿಯ ಪ್ರಕಾರ, ಪ್ರತಿ ಔನ್ಸ್ ಚಿನ್ನದ ಬೆಲೆ $3,654.19 ಆಗಿದ್ದು, ಹಿಂದಿನ ಸೆಷನ್‌ನ ಹೋಲಿಕೆಯಲ್ಲಿ 0.52% ಹೆಚ್ಚಾಗಿದೆ.
ಇಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ ಎಲ್ಲೆಡೆ ಏರಿಕೆಯಾಗಿದೆ. 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನ ಪ್ರತಿಯೊಂದು ನಗರದಲ್ಲಿಯೂ ಗಮನಾರ್ಹ ಏರಿಕೆಯನ್ನು ತೋರಿಸುತ್ತಿದೆ. ಹೀಗಾಗಿ, ಹೂಡಿಕೆದಾರರು, ಗ್ರಾಹಕರು ಮತ್ತು ಉಡುಗೊರೆ ಖರೀದಿ ಯೋಚಿಸುವವರು ಈ ಬೆಳವಣಿಗೆಯನ್ನು ಗಮನವಿಟ್ಟು ತೀರ್ಮಾನ ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
More From GoodReturns

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Rate Today: ಆಭರಣ ಪ್ರಿಯರಿಗೆ ಶಾಕ್; ಚಿನ್ನದ ಬೆಲೆ ದಿಢೀರ್ 8,500 ರೂ. ಏರಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications