ಚಿನ್ನದ ಬೆಲೆ ಏರಿಕೆ ಓಟ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆ ಅನಿಶ್ಚಿತತೆಗಳು, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳ ನಡುವೆ ಸತತ ಐದನೇ ದಿನ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ. ಸೋಮವಾರ ಕೂಡ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಇದೇ ರೀತಿ ಬೆಲೆ ಏರಿಕೆ ಮುಂದುವರೆದರೆ ಇನ್ನೆರಡು ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 80,000 ರೂಪಾಯಿ ದಾಟುವ ಸಾಧ್ಯತೆ ಹೆಚ್ಚಾಗಿದೆ.
ಒಂದು ಕಡೆ ಚಿನ್ನದ ಬೆಲೆ ಏರಿಕೆಯ ಬೆನ್ನಲ್ಲೇ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಚಿನ್ನದ ಬೆಲೆ 80,000 ರೂಪಾಯಿ ಮುಟ್ಟುವ ಸನಿಹದಲ್ಲಿದ್ದರೆ ಬೆಳ್ಳಿ ಬೆಲೆ ಕೆಜಿಗೆ 1 ಲಕ್ಷ ರೂಪಾಯಿ ದಾಟಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಬೆಳ್ಳಿ ಬೆಲೆ ಕೂಡ ನಿರಂತರ ಏರಿಕೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ.

ಸೋಮವಾರ 22 ಕ್ಯಾರಟ್ (ಆಭರಣ) ಚಿನ್ನದ ಬೆಲೆ 10 ಗ್ರಾಂಗೆ 200 ರೂಪಾಯಿ ಏರಿಕೆಯಾಗಿದೆ. ಭಾನುವಾರ 7,280 ರೂಪಾಯಿ ಇದ್ದ ಪ್ರತಿ ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 7,300 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಗ್ರಾಮ ಚಿನ್ನ ಬೆಲೆ 2,000 ರೂಪಾಯಿ ಹೆಚ್ಚಾಗಿದೆ. ಸೊಮವಾರ 7,28,000 ರೂಪಾಯಿ ಇದ್ದ 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 7,30,000 ರೂಪಾಯಿಗೆ ಏರಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಭರ್ಜರಿ ಏರಿಕೆಯಾಗಿದ್ದು 80,000 ರೂಪಾಯಿ ಸನಿಹಕ್ಕೆ ಬಂದಿದೆ. ಪ್ರತಿ ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 22 ರೂಪಾಯಿ ಏರಿಕೆಯಾಗಿದೆ. ಭಾನುವಾರ 7,942 ರೂಪಾಯಿ ಇದ್ದ ಪ್ರತಿ ಗ್ರಾಂ ಶುದ್ಧ ಚಿನ್ನದ ಬೆಲೆ ಸೋಮವಾರ 7,964 ರೂಪಾಯಿಗೆ ಏರಿಕೆಯಾಗಿದೆ. 8000 ರೂಪಾಯಿ ಗಡಿ ದಾಟಲು ಇನ್ನು 36 ರೂಪಾಯಿಗಳು ಮಾತ್ರ ಬಾಕಿ ಇದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 79,640 ರೂಪಾಯಿ ತಲುಪಿದ್ದು, ಇಡೀ ರೀತಿ ಬೆಲೆ ಏರಿಕೆ ಮುಂದುವರೆದರೆ ಇನ್ನೆರಡು ದಿನಗಳಲ್ಲೇ 80,000 ದಾಟುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.
1 ಲಕ್ಷ ರೂಪಾಯಿ ದಾಟಿದ ಬೆಳ್ಳಿ ಬೆಲೆ
ಒಂದು ಕಡೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ಹೊಸ ದಾಖಲೆ ಬರೆದಿದೆ. ಸೋಮವಾರ ಒಂದು ಕೆಜಿ ಬೆಳ್ಳಿ ಬೆಲೆ 1 ಲಕ್ಷ ರೂಪಾಯಿ ದಾಟಿದೆ. ಚೆನ್ನೈನಲ್ಲಿ ಇಂದು 1 ಕೆಜಿ ಬೆಳ್ಳಿ ಬೆಲೆ 1,06,900 ರೂಪಾಯಿಗೆ ಮಾರಾಟವಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 99,400 ರೂಪಾಯಿಗಳಂತೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 97,000 ರೂಪಾಯಿ ಆಗಿದೆ.


Click it and Unblock the Notifications