ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುವ ಮೂಲಕ ಆಭರಣ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಖುಷಿ ಸುದ್ದಿ ಸಿಕ್ಕಿದೆ. ಕಳೆದ ವಾರ ಏರಿಳಿತ ಕಂಡಿದ್ದ ಚಿನ್ನ, ಶನಿವಾರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡು ವಾರದ ವಹಿವಾಟನ್ನು ಮುಗಿಸಿತ್ತು. ಸೋಮವಾರ ವಾರದ ಮೊದಲ ದಿನವೇ ಚಿನ್ನದ ಧಾರಣೆಯಲ್ಲಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಭರವಸೆ ಮೂಡಿಸಿದೆ.
ಯುಎಸ್ ಚುನಾವಣೆ, ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಸಂಘರ್ಷ, ರಷ್ಯಾ ಉಕ್ರೇನ್ ಸಂಘರ್ಷಗಳು ಬೆಲೆ ಏರಿಳಿತಕ್ಕೆ ಕಾರಣವಾಗಿದ್ದವು. ಅಮೆರಿಕ ಚುನಾವಣಾ ಫಲಿತಾಂಶ ಹೊರಬಿದ್ದು, ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಚಿನ್ನದ ಮಾರುಕಟ್ಟೆ ಮೇಲೆ ಕೂಡ ಪ್ರಭಾವ ಬೀರಿದೆ.

ಸೋಮವಾರ 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂಪಾಯಿ ಕಡಿಮೆಯಾಗಿದೆ. ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆ ಕೂಡ ಕುಸಿತ ಕಂಡಿದ್ದು ಚಿನ್ನಾಭರಣ ಪ್ರಿಯರಲ್ಲಿ ಸಂತಸ ತಂದಿದೆ.
ಚಿನ್ನದ ಬೆಲೆ ಎಷ್ಟಿದೆ?
ಸೋಮವಾರ ಒಂದೇ ದಿನ 24 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ 60 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 55 ರೂಪಾಯಿ ಕುಸಿದಿದೆ. ಭಾನುವಾರ 7,275 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಗುರುವಾರ 7,220 ರೂಪಾಯಿಗೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಕುಸಿದಿದೆ. ಭಾನುವಾರ 10 ಗ್ರಾಂಗೆ 72,750 ರೂಪಾಯಿ ಇದ್ದ ಬೆಲೆ 72,200 ರೂಪಾಯಿಗೆ ಕುಸಿದಿದೆ. 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 5,500 ರೂಪಾಯಿ ಕಡಿಮೆಯಾಗಿದೆ.
24 ಕ್ಯಾರಟ್ ಚಿನ್ನ ಬೆಲೆ 1 ಗ್ರಾಂಗೆ 60 ರೂಪಾಯಿ ಕಡಿಮೆಯಾಗಿದೆ. ಭಾನುವಾರ 7,936 ರೂಪಾಯಿ ಇದ್ದ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 7,876 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಭಾನುವಾರ 79,360 ರೂಪಾಯಿಗಳಿಂದ 78,760 ರೂಪಾಯಿಗೆ ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ ಕೂಡ ಭರ್ಜರಿ ಕುಸಿತ ಕಂಡಿದೆ. ಗ್ರಾಂ ಚಿನ್ನದ ಬೆಲೆ 45 ರೂಪಾಯಿ ಕಡಿಮೆಯಾಗಿದೆ. ಭಾನುವಾರ 5,952 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಸೋಮವಾರ 5,907 ರೂಪಾಯಿಗೆ ಕುಸಿತ ಕಂಡಿದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಚಿನ್ನದ ಬೆಲೆ ಬಳಿಕ ಬೆಳ್ಳಿ ಬೆಲೆ ಕೂಡ ಭರ್ಜರಿ ಕುಸಿತ ಕಂಡಿದೆ. ಒಂದೇ ದಿನ 1000 ರೂಪಾಯಿ ಕುಸಿದಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಭಾನುವಾರ 94,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಸೋಮವಾರ 93,000 ರೂಪಾಯಿಗೆ ಕುಸಿತ ಕಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications