ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ, ನವೆಂಬರ್‌ 29: 22k/100 ಚಿನ್ನದ ಬೆಲೆ 71,500

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ಕರಲವು ದಿಗಳ ಹಿಂದೆ ಇಳಿಮುಖವಾಗಿದ್ದ ಚಿನ್ನದ ಬೆಲೆ ನಿನ್ನೆ ಚೇತರಿಕೆಯನ್ನ ಕಂಡಿತ್ತು. ಆದ್ರೆ ಇಂದು ಮತ್ತೆ ಕುಸಿದಿದೆ.ಯುಎಸ್‌ ಡಾಲರ್‌ನ ದುರ್ಬಲತೆಯಿಂದ ಶುಕ್ರವಾರ ಚೇತರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಇಳಿಕೆಯಾಗಿ 71,500 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ ಏರಿಕೆಯಾಗಿ, ಈಗ 78,000, ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 80 ರೂ. ಏರಿಕೆಯಾಗಿ 58,500 ರೂ. ಆಗಿದೆ.

ಬೆಂಗಳೂರಿನಲ್ಲಿ ಕುಸಿದ ಚಿನ್ನದ ಬೆಲೆ!

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮಿಸುವುದಾದ್ರೆ, 24 ಕ್ಯಾರೆಟ್ ಚಿನ್ನದ ಬೆಲೆ 1,100 ರೂಪಾಯಿ ಇಳಿಕೆಯಾಗಿ ರೂ. 7,80,000 ರೂ. ಆಗಿದೆ. 100 ಗ್ರಾಂ 22-ಕ್ಯಾರೆಟ್ ಚಿನ್ನ 1,000. ರೂ ಇಳಿಕೆಯಾಗಿ 7,15,000 ರೂಪಾಯಿ ಆಗಿದೆ.

ಚಿನ್ನದ ಬೆಲೆ ಇಂದು ಮತ್ತೆ ಇಳಮುಖವಾಗಿದೆ. ಈ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ನಾವು ಸಾಕಷ್ಟು ಏರಿಳಿತಗಳನ್ನ ಕಾಣಬಹುದು. ಭಾರತದಲ್ಲಿ ಮದುವೆಗಳ ಸೀಸನ್‌ ವೇಳೆ ಚಿನ್ನದ ಬೇಡಿಕೆ ಕೂಡ ಹೆಚ್ಚಾಗಿತ್ತು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷ ಮತ್ತು ಡಾಲರ್‌ ಬಲವರ್ಧನೆಯಿಂದ ಚಿನ್ನ ಬೆಂಬಲವನ್ನು ಮತ್ತೆ ಇಳಿಕೆಯಾಗಿದೆ. ಚಿನ್ನದ ಬೆಲೆ ದೇಶದಲ್ಲಿ ಹಾವುಏಣಿ ಆಟವನ್ನ ಆಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ರೆ ಡೈಮಂಡ್‌ ಬೆಲೆಗಳಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಕಾಣದ ಹಿನ್ನೆಲೆ ಹಳದಿ ಲೋಹ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಾಯಿತು.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು24ಕ್ಯಾರೆಟ್‌ 22ಕ್ಯಾರೆಟ್‌
ದೆಹಲಿ78,15071,650
ಮುಂಬೈ78,00071,500
ಚೆನ್ನೈ78,00071,500
ಕೋಲ್ಕತ್ತಾ78,00071,500

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ನಿನ್ನೆ ದಿಢೀರ್‌ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಮತ್ತೆ ಸ್ಥಿರ ಸ್ತಾನವನ್ನ ಕಾಯ್ದುಕೊಂಡಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆ 91,500 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,150 ರೂಪಾಯಿ ಇದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್‌ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 76,400 ರೂ ಆಗಿದೆ. ಅಂದರೆ 0.89%ಏರಿಕೆಯಾಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ನಿನ್ನೆ ಬಾರಿ ಏರಿಕೆಯನ್ನ ಕಂಡಿತ್ತು ಮತ್ತು 0.06% ರಷ್ಟು ಮುಕ್ತಾಯದೊಂದಿಗೆ, ಸದ್ಯಕ್ಕೆ 89,930 ರೂಪಾಯಿ ವಹಿವಾಟು ನಡೆಸುತ್ತಿದೆ.

ನವೆಂಬರ್‌ನಲ್ಲಿ ಚಿನ್ನದ ಪ್ರದರ್ಶನ

ನವೆಂಬರ್ ಅಂತ್ಯಗೊಳ್ಳುತ್ತಿದ್ದಂತೆ, ಚಿನ್ನದ ಬೆಲೆಯಲ್ಲಿ ಗಮನಾರ್ಹವಾದ ಏರಿಳಿತವನ್ನ ನಾವು ಕಾಣಬಹುದು. ಹಳದಿ ಲೋಹವು ಈ ತಿಂಗಳು 3% ಕುಸಿತವನ್ನು ದಾಖಲಿಸಿದ್ದು, ಇದು 14 ತಿಂಗಳುಗಳಲ್ಲಿ ಅದರ ಅತಿದೊಡ್ಡ ಮಾಸಿಕ ಕುಸಿತವಾಗಿದೆ. US ಅಧ್ಯಕ್ಷೀಯ ಚುನಾವಣೆಗಳು, ಬೆಲೆಗಳಿಗೆ ಸಾಂದರ್ಭಿಕ ಬೆಂಬಲವನ್ನು ಒದಗಿಸುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳೇ ಈ ಏರಿಳಿತಕ್ಕೆ ಕಾರಣ ಎನ್ನಲಾಗ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆ ಮತ್ತು ಜಾಗತಿಕ ಮತ್ತು ರಾಕೀಯ ಉದ್ವಿಗ್ನತೆಗಳಿಂದಾಗಿ ಶುಕ್ರವಾರ ಚಿನ್ನದ ಬೆಲೆಗಳು ಏರಿಕೆಯಾಗಿವೆ. ಹೀಗೆಂದು ರಾಯಿಟರ್ಸ್‌ ವರದಿ ಹೇಳಿದೆ. ಸ್ಪಾಟ್ ಚಿನ್ನವು 1:40 pm ET (1840 GMT) ಯ ಹೊತ್ತಿಗೆ ಪ್ರತಿ 0.5% ಔನ್ಸ್‌ಗೆ 2,652.71 ಡಾಲರ್‌ ಇದ್ದು ಚಿನ್ನದ ದರ ಸ್ವಲ್ಪ ಚೇತರಿಸಿಕೊಂಡಿದೆ. ಈ ವಾರದ ತೀವ್ರ ಕುಸಿತದ ನಂತರ ಇದು ಮತ್ತೆ ಚೇತರಿಸಿಕೊಂಡಿದೆ. ಸ್ಪಾಟ್ ಬೆಳ್ಳಿ ಕೂಡ 0.9% ಏರಿಕೆಯಾಗಿ ಪ್ರತಿ ಔನ್ಸ್‌ಗೆ $30.54 ಆಗಿದೆ.

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಮುಖವಾಗಿದೆ.ಈ ತಿಂಗಳಲ್ಲಿ ಹಲವು ಏರಿಳತವನ್ನ ಅನುಭವಿಸಿದ ಚಿನ್ನವು ತಿಂಗಳ ಅಂತ್ಯದಲ್ಲಿ ಕುಸಿತವನ್ನ ಕಂಡಿದೆ. ವಾರದ ಆರಂಭದಲ್ಲಿ ಇಳಿಮುಖವಾಗಿದ್ದ ಚಿನ್ನ ನಿನ್ನೆ ಚೇತರಿಕೆಯನ್ನ ಕಂಡಿತ್ತು. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹೆಚ್ಚಿರುವುದರಿಂದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಆದ್ರೆ ಯುಸ್‌ ಡಾಲರ್‌ನ ದುರ್ಬಲತೆಯಿಂದಾಗಿ ಚಿನ್ನ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದ ಚಿನ್ನದ ದರ ಮತ್ತೆ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+