ಭಾರತದಲ್ಲಿ ಚಿನ್ನದ ಬೆಲೆ ದಿನೇ ದಿನೇ ಏರಿಳಿತಗಳು ಆಗುತ್ತಿರುತ್ತದೆ. ಆದರೆ ಇಂದು ಚಿನ್ನ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನದ ಬೆಲೆ ಇಂದೂ ಏರಿಕೆಯಾಗಬಹುದು ಎಂದು ಅಂದುಕೊಂಡಿದ್ದವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಾಗಿದ್ರೆ ಇಂದು (ನ.04) ಚಿನ್ನದ ಬೆಲೆ (Gold Rate Today) ಎಷ್ಟು ಇಳಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಇಂದು ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆ ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆದ್ರೆ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಅದೇನೆಂದರೆ 24K ಚಿನ್ನದ ಪ್ರತೀ ಗ್ರಾಂನಲ್ಲಿ ₹71 ರೂ. ಇಳಿಕೆಯಾಗಿದೆ. ಅಂದರೆ ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹12,246 ರೂ. ಆಗಿದೆ. ನಿನ್ನೆ ₹12,317 ರೂ ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು ₹97,968 ರೂ. ಆಗಿದ್ದು, ನಿನ್ನೆ ₹98,536 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ₹568 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,460 ರೂ. ಆಗಿದೆ. ನಿನ್ನೆ 1,23,170 ರೂ. ಇತ್ತು. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,24,600 ರೂ. ಆಗಿದ್ದು, ಒಟ್ಟಿ 7,100 ರೂ.ನಷ್ಟು ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಇಂದು ಎಷ್ಟಿದೆ?
24K ಚಿನ್ನದ ಬೆಲೆಯಲ್ಲೂ ಇಂದು ಭಾರೀ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ 11,225 ರೂ. ಆಗಿದ್ದು, ನಿನ್ನೆ ₹11,290 ರೂ. ಇತ್ತು. ಈ ಮೂಲಕ ಒಂದೇ ದಿನ ₹65 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 89,800 ರೂ. ಆಗಿದ್ದು, ಈ ಮೂಲಕ ₹520 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,250 ರೂ ಆಗಿದ್ದು, ನಿನ್ನೆ ₹1,12,900 ರೂ ಇತ್ತು. ನಿನ್ನೆಗಿಂತ ಇಂದು ₹650 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,22,500 ರೂ. ಆಗಿದ್ದು, ನಿನ್ನೆ ₹11,29,000 ರೂ. ಇತ್ತು. ಈ ಮೂಲಕ ಒಟ್ಟು 6,500 ರೂ. ಇಳಿಕೆ ಕಂಡುಬಂದಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಇಂದು ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,184 ರೂ. ಆಗಿದ್ದು, ನಿನ್ನೆ 9,238 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 54 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹73,472 ರೂ. ಆಗಿದ್ದು, ನಿನ್ನೆ 73,904 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 432 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 91,840 ರೂ. ಆಗಿದ್ದು, ನಿನ್ನೆ 92,380 ರೂ. ಇತ್ತು. ಇಂದು ಇಟ್ಟು 540 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 9,18,400 ರೂ. ಆಗಿದ್ದು, ನಿನ್ನೆ 9,23,800 ರೂ. ಇತ್ತು. ಈ ಮೂಲಕ ಒಂದೇ ದಿನ 5,400 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,273, 22K ರೂ. 11,250, 18K ರೂ. 9,390
ಮುಂಬೈ: 24K ರೂ. 12,246, 22K ರೂ. 11,225, 18K ರೂ. 9,184
ದೆಹಲಿ: 24K ರೂ. 12,251, 22K ರೂ. 11,240, 18K ರೂ. 9,199
ಕೋಲ್ಕತ್ತಾ: 24K ರೂ. 12,246, 22K ರೂ. 11,225, 18K ರೂ. 9,184
ಬೆಂಗಳೂರು: 24K ರೂ. 12,246, 22K ರೂ. 11,225, 18K ರೂ. 9,184
ಹೈದರಾಬಾದ್: 24K ರೂ. 12,246, 22K ರೂ. 11,225, 18K ರೂ. 9,184
ಕೇರಳ: 24K ರೂ. 12,246, 22K ರೂ. 11,225, 18K ರೂ. 9,184
ಪುಣೆ: 24K ರೂ. 12,246, 22K ರೂ. 11,225, 18K ರೂ. 9,184
ವಡೋದರಾ: 24K ರೂ. 12,251, 22K ರೂ. 11,230, 18K ರೂ. 9,189
ಅಹಮದಾಬಾದ್: 24K ರೂ. 12,251, 22K ರೂ. 11,230, 18K ರೂ. 9,189
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, ನವೆಂಬರ್ 4ರಂದು ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ ಮತ್ತೆ 4 ಸಾವಿರ ಡಾಲರ್‌ಗಿಂದ ಕಡಿಮೆ ವಹಿವಾಟು ನಡೆಸಿದೆ. ಇದಕ್ಕೆ ಪ್ರಮುಖ ಕಾರಣ ಕಳೆದ ಮೂರು ತಿಂಗಳಿಂದ ಡಾಲರ್ ಮೌಲ್ಯ ಸ್ಥಿರವಾಗಿರುವುದು ಹಾಗೂ ಡಿಸೆಂಬರ್ ತಿಂಗಳಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆಯಾಗಿದ್ದರಿಂದ ಎನ್ನಲಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಿಎಂಟಿ 03:43 ಕ್ಕೆ ಸ್ಪಾಟರ್ ಗೋಲ್ಡ್ ದರ 0.2% ರಷ್ಟು ಇಳಿದು, ಪ್ರತೀ ಔನ್ಸ್‌ಗೆ 3,992.23 ಡಾಲರ್ ಕಾಯ್ದುಕೊಂಡಿದೆ.
ಬೆಳ್ಳಿ ಬೆಲೆ ಹೇಗಿದೆ?
ಇನ್ನು ಬೆಳ್ಳಿ ಪ್ರಿಯರಿಗೂ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಒಂದೇ ದಿನ ಪ್ರತೀ ಗ್ರಾಂ ಬೆಳ್ಳಿ ದರ 3 ರೂ.ನಷ್ಟು ಇಳಿಕೆಯಾಗಿದೆ. ಅಂದರೆ ನಿನ್ನೆ ಒಂದು ಗ್ರಾಂ ಬೆಳ್ಳಿ ಬೆಲೆ 151 ರೂ. ಆಗಿದೆ. ನಿನ್ನೆ 154 ರೂ. ಇತ್ತು. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,208 ರೂ. ಆಗಿದ್ದು, ನಿನ್ನೆ ₹1,232 ರೂ. ಇತ್ತು. ಅಂದರೆ ನಿನ್ನೆಗಿಂತ ಇಂದು ₹24 ರೂ ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿದರ ಇಂದು 15,100 ರೂ. ಆಗಿದ್ದು, ನಿನ್ನೆ 15,400 ರೂ. ಇತ್ತು. ಹಾಗೆಯೇ 1 ಕಿಲೋ ಬೆಳ್ಳಿಯ ಬೆಲೆ ಇಂದು 1,51,000 ರೂ. ಆಗಿದೆ. ಒಟ್ಟು 3000 ರೂ. ಇಳಿಕೆಯಾಗಿದೆ.
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಆದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಳನ್ನು ಗಮನಿಸಿದರೆ ಉತ್ತಮ.
More From GoodReturns

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?



Click it and Unblock the Notifications