ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು (ನ.21) ದಿಢೀರ್ ಏರಿಕೆಯಾಗಿದೆ. ಅದೆಷ್ಟೋ ಜನ ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಭಾವಿಸುತ್ತಾರೆ. ಹೆಚ್ಚಿನ ಯುವಕರು ಇಂದು ಚಿನ್ನದ ಹೂಡಿಕೆಯತ್ತನೇ ಗಮನಹರಿಸುತ್ತಿದ್ದಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆಯಾಗಿರುವುದರಿಂದ, ಹೂಡಿಕೆದಾರರು, ಖರೀದಿದಾರರು ಹಿಂದೇಟು ಹಾಕಿದ್ದಾರೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate Bengaluru) ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು 12,448 ರೂ. ಆಗಿದೆ. ನಿನ್ನೆ 12,426 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹22 ರೂ. ಏರಿಕೆಯಾಗಿದೆ. ಹಿಂದಿನ ಏರಿಕೆ ಪ್ರಮಾಣಗಳಿಗೆ ಹೋಲಿಸಿದ್ರೆ, ಇಂದಿನ ಏರಿಕೆ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 99,584 ರೂ. ಆಗಿದ್ದು, ನಿನ್ನೆ 99,408 ರೂ. ಇತ್ತು. ಒಂದೇ ದಿನದಲ್ಲಿ ₹176 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,24,480 ರೂ. ಆಗಿದ್ದು, ನಿನ್ನೆ 1,24,260 ರೂ. ಇತ್ತು. ನಿನ್ನೆಗಿಂತ ಇಂದು ಹತ್ತು ಗ್ರಾಂ ಚಿನ್ನದ ಬೆಲೆ ₹220 ರೂ. ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 12,44,800 ರೂ. ಆಗಿದ್ದು, ಒಟ್ಟು 2,200 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,410 ರೂ. ಆಗಿದ್ದು, ನಿನ್ನೆ 11,390 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹20 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 91,280 ರೂ. ಆಗಿದ್ದು, ನಿನ್ನೆ 91,120 ರೂ. ಇತ್ತು. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,14,100 ನಷ್ಟು ಆಗಿದ್ದು, ನಿನ್ನೆ 1,13,900 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,41,000 ರೂಪಾಯಿ ಆಗಿದ್ದು, ನಿನ್ನೆ 11,39,000 ರೂ. ಇತ್ತು. ನಿನ್ನೆಗಿಂತ ಇಂದು ಜಸ್ಟ್ 2,000 ಏರಿಕೆಯಾಗಿದೆ.
18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,336 ರೂಪಾಯಿಯಾಗಿದೆ. ಅದೇ ನಿನ್ನೆ 9,319 ರೂ. ಇತ್ತು. ಆದರೆ ಇಂದು ಬೆಲೆ ಏರಿಕೆಯಾಗಿದ್ದು, ಒಟ್ಟು ₹17 ರೂ. ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 74,688 ರೂ. ಆಗಿದ್ದು, ನಿನ್ನೆ 74,552 ರೂ. ಇತ್ತು. 10 ಗ್ರಾಂ ಚಿನ್ನದ ಬೆಲೆ ಇಂದು 93,360 ರೂ. ಆಗಿದ್ದು, ನಿನ್ನೆ 93,190 ರೂ. ಇತ್ತು. ಒಟ್ಟು ₹170 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 9,33,600 ರೂ. ಆಗಿದ್ದು, ನಿನ್ನೆಗಿಂತ 1,700 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹161 ರೂ. ಆಗಿದ್ದು, ನಿನ್ನೆ ₹165 ರೂ. ಇತ್ತು. ಆದರೆ ನಿನ್ನೆಗಿಂತಲೂ ಇಂದು ₹4 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಮ ಬೆಳ್ಳಿ ದರ ಇಂದು ₹1,288 ರೂ. ಆಗಿದ್ದು, ನಿನ್ನೆ ₹1,320 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹32 ರೂ. ಇಳಿಕೆ ಕಂಡಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ಇಂದು ₹1,610 ರೂ., 100 ಗ್ರಾಂ ಬೆಳ್ಳಿ ದರ ₹16,100 ರೂ. ಆಗಿದೆ. 1 ಕಿಲೋ ಬೆಳ್ಳಿ ಬೆಲೆ ₹1,61,000 ರೂ. ಆಗಿದ್ದು, ಒಟ್ಟು ₹4 ಸಾವಿರ ಬೆಲೆ ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 21ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ಬೆಲೆ ಕುಸಿದಿದೆ. ಇನ್ನು GMT 0436 ರ ಹೊತ್ತಿಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ .6% ರಷ್ಟು ಕುಸಿದು $4,052.58 ಕ್ಕೆ ತಲುಪಿದೆ.


Click it and Unblock the Notifications