ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ: 22K ಚಿನ್ನಕ್ಕೆ 6,000 ರೂ

ಬೆಂಗಳೂರಿನಲ್ಲಿ ಇಳಿಮುಖವಾಗಿದ್ದ ಚಿನ್ನದ ಬೆಲೆ ಈಗ ಮತ್ತೆ ಏರಿಕೆಯಾಗಿದೆ. ಅದರಲ್ಲು ಇಂದು ಚಿನ್ನದ ಬೆಲೆಯು ಕಳೆದ ವಾರ 4.6%ಕ್ಕೂ ಹೆಚ್ಚು ಇಳಿಕೆಯಾಗಿದ್ದು, ಈಗ ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಮಾರುಕಟ್ಟೆಗೆ ಈ ವಾರ ಆರಂಭದಲ್ಲಿ ಸ್ವಲ್ಪ ಪುಷ್ಟಿ ಸಿಕ್ಕಂತಾಗಿದೆ. ಡಾಲರ್‌ನ ರ್ಯಾಲಿ ತಾತ್ಕಾಲಿಕ ಸ್ಥಗಿತಗೊಂಡಿರುದೇ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ, ಹೂಡಿಕೆದಾರರು ಮುಂದಿನ ಆರ್ಥಿಕ ನೀತಿ ಸಭೆಯಲ್ಲಿ ಫೆಡರಲ್ ರಿಸರ್ವ್ ಬಡ್ಡಿದರಗಳ ಮುಂಬರುವ ನಿರ್ಧಾರವನ್ನು ಎದುರು ನೋಡುತ್ತಿದ್ದಾರೆ.

ನವೆಂಬರ್ 18, 2024 ರಂದು, ಬೆಂಗಳೂರಿನಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಚಿನ್ನಕ್ಕೆ 660 ರೂಪಾಯಿಗಳಷ್ಟು ಏರಿಕೆಯಾಗಿ 76,310 ರೂ.ಗೆ ತಲುಪಿತು. ಅದೇ ರೀತಿ ಬೆಂಗಳೂರಿನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಚಿನ್ನಕ್ಕೆ ರೂ.600ರಷ್ಟು ಏರಿಕೆಯಾಗಿದ್ದು, ಈಗ ರೂ.69,950ರಷ್ಟಿದೆ.

ಬೆಂಗಳೂರಿನಲ್ಲಿ ಮತ್ತೆ ಏರಿಕೆಯಾದ ಚಿನ್ನದ ಬೆಲೆ

ಹಾಗೆ 22-ಕ್ಯಾರೆಟ್‌ನ 100 ಗ್ರಾಂ ಹಳದಿ ಲೋಹ 6,000 ರೂಗಳಷ್ಟು ಏರಿಕೆಯಾಗಿ 6,99,500 ರೂ. ಆಗಿದೆ. ಆದ್ರೆ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಈಗ ರೂ. 6,600 ಏರಿಕೆಯಾಗಿ 7,63,100 ರೂಪಾಯಿಯಾಗಿದೆ.

ಚಿನ್ನದ ಬೆಲೆ ಕುಸಿತಕ್ಕೆ ಕಾರಣವೇನು?

ಹಿಂದಿನ ವಾರ ಭಾರತದಲ್ಲಿ ಚಿನ್ನದ ಬೆಲೆಗಳು ಗಣನೀಯವಾಗಿ ಕುಸಿದಿದ್ದರಿಂದ ಚಿಲ್ಲರೆ ಚಿನ್ನದ ಖರೀದಿದಾರರಿಗೆ ಇದರಿಂದ ತುಲನಾತ್ಮಕವಾಗಿ ಅನುಕೂಲಕರವಾಗಿತ್ತು. ಆದ್ರೆ ಯುಎಇ, ಕತಾರ್ ಮತ್ತು ಸಿಂಗಾಪುರದಂತಹ ಮಧ್ಯಪ್ರಾಚ್ಯ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಚಿನ್ನದ ದರಗಳು ತುಲನಾತ್ಮಕವಾಗಿ ಕಡಿಮೆ ಇದೆ ಎಂದು ವರದಿಗಳು ಹೇಳಿವೆ. ಇನ್ನು ಭಾರತದಲ್ಲಿ ಹಬ್ಬ ಹರಿದಿನಗಳ ನಂತರ ಚಿನ್ನದ ಬೇಡಿಕೆ ಕುಸಿದಿದ್ದರಿಂದ ಚಿನ್ನದ ಬೆಲೆ ಕೂಡ ಈಗ ಇಳಿಕೆಯಾಗಿದೆ.

ಇದ ಮಧ್ಯೆ, ಯುಎಸ್ ಮಾರುಕಟ್ಟೆಯಲ್ಲಿ ಸ್ಪಾಟ್‌ ಚಿನ್ನದ ಬೆಲೆ ಪ್ರಮುಖವಾಗಿ ಕುಸಿತ ಕಂಡ ನಂತರ, ಇದು ವಾರವಿಡೀ ಡಾಲರ್‌ನ ಬಲವಾದ ರ್ಯಾಲಿಯಿಂದ ಬಂಗಾರದ ಮೇಲೆ ಹೆಚ್ಚಿನ ಒತ್ತಡ ಬಿದ್ದಿತು. ಸ್ಪಾಟ್ ಚಿನ್ನವು $2,600 ಮಟ್ಟದಿಂದ ಕಡಿಮೆಯಾಯಿತು. ಆದರೆ ಈ ವಾರದ ವಹಿವಾಟು ಪ್ರಾರಂಭವಾಗುತ್ತಿದ್ದಂತೆ ನಿಧಾನವಾಗಿ ಏಕೀಕರಣಗೊಳ್ಳುತ್ತಿದೆ. ಇನ್ನು ರಾಯಿಟರ್ಸ್ ಹೇಳುವ ಪ್ರಕಾರ, ಯುಎಸ್ ಡಾಲರ್ ಸೂಚ್ಯಂಕವು ಪ್ರಸ್ತುತ 106.67ನಲ್ಲಿದೆ, ಕಳೆದ ವಾರ 1.6% ಏರಿಕೆಯಾದ ನಂತರ 0.02% ರಷ್ಟು ಸ್ವಲ್ಪ ಕುಸಿತವನ್ನ ಕಂಡಿದೆ ಎನ್ನಲಾಗ್ತಿದೆ.

ಇನ್ನು ಬೆಂಗಳೂರು ಮತ್ತು ಭಾರತದಲ್ಲಿ ಮದುವೆ ತಿಂಗಳಾದ್ದರಿಂದ ಚಿನ್ನದ ಬೆಲೆಗಳಲ್ಲಿ ಸಾಕಷ್ಟು ಏರಿತಗಳನ್ನ ಕಾಣುವಂತಾಗಿದೆ. ಇದರಿಂದಾಗಿ ಚಿಲ್ಲರೆ ಚಿನ್ನದ ಬೇಡಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ನೋಡಬಹುದು. ಇದಿಂದಾಗಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌ 22ಕ್ಯಾರೆಟ್‌

ನಗರಗಳು24ಕ್ಯಾರೆಟ್‌ 22ಕ್ಯಾರೆಟ್‌
ದೆಹಲಿ76,46070,100
ಮುಂಬೈ76,31069,950
ಚೆನ್ನೈ76,31069,950
ಕೋಲ್ಕತ್ತಾ76,31069,950

ನವೆಂಬರ್ 18 ರಂದು ಬೆಂಗಳೂರಿನಲ್ಲಿ ಬೆಳ್ಳಿ ದರ:

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ದರಗಳು ಸತತ 4ನೇ ದಿನದಂದು ಯಾವುದೇ ಏರಿಳಿತವನ್ನ ಗಮನಿಸಿಲ್ಲ ಮತ್ತು 1 ಕಿಲೋಗ್ರಾಂ ಬೆಳ್ಳಿ ಪ್ರಸ್ತುತ 89,500 ರೂಪಾಯಿಗೆ ಮಾರಾಟವಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 8,950

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್ 5 ರ ವಿತರಣೆಯ ಚಿನ್ನದ ಭವಿಷ್ಯವು 0.86% ರಷ್ಟು ಹೆಚ್ಚಾಗಿದೆ, ಪ್ರಸ್ತುತ 10 ಗ್ರಾಂಗೆ 74,581 ರೂ. ಅದೇ ರೀತಿ, ಡಿಸೆಂಬರ್ 5 ರ ಬೆಳ್ಳಿ ಭವಿಷ್ಯದ ವಹಿವಾಟು ಹಸಿರು ಬಣ್ಣದಲ್ಲಿದ್ದು, 0.90% ರಷ್ಟು ಏರಿಕೆಯಾಗಿ, 89,220 ರೂಪಾಯಿಯಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು:

ರಾಯಿಟರ್ಸ್, ತನ್ನ ಇತ್ತೀಚಿನ ವರದಿಲ್ಲಿ ತಿಿಸಿರುವ ಪ್ರಕಾರ ಸ್ಪಾಟ್ ಚಿನ್ನವು 01:50 GMT ಯ ಹೊತ್ತಿಗೆ ಪ್ರತಿ ಔನ್ಸ್‌ಗೆ 2,587.49 ಡಾಲರ್‌ಗೆ 1% ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ, ಇದು ಮೂರು ವರ್ಷಗಳಲ್ಲಿ ಮತ್ತೆ ಚೇತರಿಸಿಕೊಂಡಿದೆ ಎನ್ನಲಾಗ್ತಿದೆ. US ಚಿನ್ನದ ಭವಿಷ್ಯವು 0.9% ಗಳಿಸಿ 2,592.00 ಡಾಲರ್‌ ತಲುಪಿತು. ಸ್ಪಾಟ್ ಬೆಳ್ಳಿ ಕೂಡ 1.1% ಏರಿಕಯಾಗಿ ಪ್ರತಿ ಔನ್ಸ್‌ಗೆ $ 30.53 ರಂತೆ ವ್ಯಾಪಾರ ಮಾಡಿತು. ಡಾಲರ್‌ನ ರ್ಯಾಲಿಯನ್ನು ವಿರಾಮಗೊಳಿಸಿದ್ದರಿಂದ ಕಳೆದ ವಾರ ಕುಸಿತ ಕಂಡಿದ್ದ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯಾಗಿದೆ. ಹಾಗೆ US ಬಡ್ಡಿ ದರದ ಮೇಲ್ನೋಟದ ಕುರಿತು ಹೆಚ್ಚಿನ ಒಳನೋಟಗಳಿಗಾಗಿ ಈ ವಾರ ಫೆಡರಲ್ ರಿಸರ್ವ್ ಅಧಿಕಾರಿಗಳಿಂದ ಬರುವ ಕಾಮೆಂಟ್‌ಗಳಿಗಾಗಿ ಮಾರುಕಟ್ಟೆ ಭಾಗವಹಿಸುವವರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+