ಚಿನ್ನದ ಮೇಲಿನ ಹೂಡಿಕೆ (Gold Investment) ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. 4 ವರ್ಷದ ಹಿಂದಷ್ಟೇ ಕೈಗೆಟಕುವ ಬೆಲೆಯಲ್ಲಿದ್ದ ಭಾರತದಲ್ಲಿ ಚಿನ್ನದ ಬೆಲೆ ಇದೀಗ ದಿಢೀರ್ ಏರಿಕೆಯ ಹಾದಿ ಹಿಡಿದಿದೆ. ಜನಸಾಮಾನ್ಯರಂತೂ, ಏನಪ್ಪಾ ಮಾಡೋದು ಎಂಬ ಚಿಂತೆಯಲ್ಲಿದ್ದಾರೆ. ಇದೀಗ ಚಿನ್ನದ ಬೆಲೆ (Gold Rate) ಇಂದೂ ಕೂಡಾ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಕೂಡಾ ಇಂದು 13,893 ರೂ. ಆಗಿದ್ದು, ನಿನ್ನೆ 13,855 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹38 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,11,144 ರೂ. ಆಗಿದ್ದು, ನಿನ್ನೆ 1,10,840 ರೂ. ಇತ್ತು. ಒಟ್ಟು ₹304 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,38,930 ರೂ. ಆಗಿದ್ದು, ನಿನ್ನೆ 1,38,550 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹380 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,89,300 ರೂ. ಆಗಿದ್ದು, ನಿನ್ನೆ 13,85,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,800 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 12,735 ರೂ. ಆಗಿದ್ದು, ನಿನ್ನೆ 12,700 ರೂ. ಇತ್ತು. ನಿನ್ನೆಗಿಂತ ಇಂದು ₹35 ರೂ. ಹೆಚ್ಚಳವಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,01,880 ರೂ. ಆಗಿದ್ದು, ನಿನ್ನೆ 1,01,600 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹280 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,350 ರೂ. ಆಗಿದ್ದು, ನಿನ್ನೆ 1,27,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹350 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ದರ ಇಂದು 12,73,500 ರೂ. ಆಗಿದ್ದು, ನಿನ್ನೆ 12,70,000 ರೂ. ಇತ್ತು. ಒಟ್ಟು ಇಂದು 3,500 ರೂ. ಬದಲಾವಣೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ ಬೆಲೆ ಇಂದು 1 ಗ್ರಾಂ ಚಿನ್ನದ ಬೆಲೆ ಇಂದು 10,420 ರೂ. ಆಗಿದ್ದು, ನಿನ್ನೆ 10,391 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹29 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹83,360 ರೂ. ಆಗಿದ್ದು, ನಿನ್ನೆ 83,128 ರೂ. ಇತ್ತು. ನಿನ್ನೆಗಿಂತ ಇಂದು ₹232 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,04,200 ರೂ. ಆಗಿದ್ದು, ನಿನ್ನೆ 1,03,910 ರೂ. ಇತ್ತು. ನಿನ್ನೆಗಿಂತ ಇಂದು ₹290 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ₹10,42,000 ರೂ. ಆಗಿದ್ದು, ನಿನ್ನೆ ₹10,39,100 ರೂ. ಇತ್ತು. ಒಟ್ಟು 2,900 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 13,964, 22K ರೂ. 12,800, 18K ರೂ. 10,675
ಮುಂಬೈ: 24K ರೂ. 13,893, 22K ರೂ. 12,735, 18K ರೂ. 10,420
ದೆಹಲಿ: 24K ರೂ. 13,908, 22K ರೂ. 12,750, 18K ರೂ. 10,435
ಕೋಲ್ಕತ್ತಾ: 24K ರೂ. 13,893, 22K ರೂ. 12,735, 18K ರೂ. 10,420
ಬೆಂಗಳೂರು: 24K ರೂ. 13,893, 22K ರೂ. 12,735, 18K ರೂ. 10,420
ಹೈದರಾಬಾದ್: 24K ರೂ. 13,893, 22K ರೂ. 12,735, 18K ರೂ. 10,420
ಕೇರಳ: 24K ರೂ. 13,893, 22K ರೂ. 12,735, 18K ರೂ. 10,420
ಪುಣೆ: 24K ರೂ. 13,893, 22K ರೂ. 12,735, 18K ರೂ. 10,420
ವಡೋದರಾ: 24K ರೂ. 13,898, 22K ರೂ. 12,740, 18K ರೂ. 10,425
ಅಹಮದಾಬಾದ್: 24K ರೂ. 13,898, 22K ರೂ. 12,740, 18K ರೂ. 10,425
ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನಕ್ಕೆ ಹೋಲಿಸಿದ್ರೆ . ಇಂದು 1 ಗ್ರಾಂ ಬೆಳ್ಳಿ ದರ ₹233 ರೂ. ಆಗಿದ್ದು, ನಿನ್ನೆ ₹223 ರೂ. ಇತ್ತು. ನಿನ್ನೆಗಿಂತ ಇಂದು ₹10 ರೂ. ಹೆಚ್ಚಳವಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,864 ರೂ. ಆಗಿದ್ದು, ನಿನ್ನೆ ₹1,784 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ₹2,330 ರೂ., 100 ಗ್ರಾಂ ಬೆಳ್ಳಿ ದರ ₹23,300 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,33,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 24ರ ರಾಯಿಟರ್ಸ್ ವರದಿ ಪ್ರಕಾರ, ಮೊದಲ ಬಾರಿಗೆ, ಬುಧವಾರ ಪ್ರತೀ ಔನ್ಸ್ ಚಿನ್ನದ ಬೆಲೆ $4,500 ಗಡಿ ದಾಟಿದೆ. ಅದರ ಜೊತೆಗೆ ಬೆಳ್ಳಿ ಮತ್ತು ಪ್ಲಾಟಿನಂ ಬೆಲೆ ಕೂಡಾ ಭಾರೀ ಏರಿಕೆ ಕಂಡಿದೆ. ಇನ್ನು ಹೂಡಿಕೆದಾರರ ಚಿನ್ನದ ಮೇಲಿನ ಬೇಡಿಕೆ, ಯುಎಸ್ ಬಡ್ಡಿದರಗಳು ಕುಸಿತ ಕಾಣುವ ನಿರೀಕ್ಷೆಯಿಂದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಕಂಡಿದೆ ಎನ್ನಲಾಗಿದೆ.
ಇನ್ನು 0259 GMT ವೇಳೆಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 0.1% ಏರಿಕೆ ಕಂಡು, $4,492.51 ಕ್ಕೆ ತಲುಪಿದೆ.


Click it and Unblock the Notifications