ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು (Bengaluru Gold Rate). ಆದ್ರೆ ಇಂದು ಚಿನ್ನದ ಬೆಲೆ ನಿಂತ ನೀರಾಗಿಬಿಟ್ಟಿದೆ. ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ ಎಂಬಂತಾಗಿದೆ. ಆದರೆ ಯಾರೇ ಆಗಲಿ ಇತ್ತೀಚೆಗೆ ಚಿನ್ನದ ಮೇಲೆ ಹೂಡಿಕೆ (Gold Invest) ಮಾಡುವವರು, ತಜ್ಞರ ಸಲಹೆ ಪಡೆದುಕೊಂಡರೆ ಉತ್ತಮ. ಹಾಗಿದ್ರೆ ಇಂದಿನ ಚಿನ್ನ, ಬೆಳ್ಳಿ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ 12,584 ರೂ. ಆಗಿದ್ದು, ನಿನ್ನೆಯೂ 12,584 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆಯಲ್ಲೂ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆಯಷ್ಟೇ ಬೆಲೆಯನ್ನು ಕಾಯ್ದುಕೊಂಡಿದ್ದು, ಒಟ್ಟು 1,00,672 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,25,840 ರೂ. ಆಗಿದ್ದು ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು 12,58,400 ರೂ. ಆಗಿದ್ದು, ನಿನ್ನೆಗೂ ಇವತ್ತಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ.
ಬೆಂಗಳೂರಿನಲ್ಲಿ 22K ಚಿನ್ನದ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,535 ರೂ. ಇದೆ, ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 92,280 ರೂ. ಆಗಿದ್ದು, ನಿನ್ನೆಯ ಬೆಲೆಗೂ ಇಂದಿಗೂ ಯಾವುದೇ ವ್ಯತ್ಯಾಸಗಳಾಗಿಲ್ಲ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,15,350 ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,53,500 ರೂಪಾಯಿ ಇದ್ದು, ನಿನ್ನೆಯಷ್ಟೇ ಬೆಲೆ ಹೊಂದಿದೆ.
18K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,438 ರೂಪಾಯಿಯಾಗಿದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,504 ರೂ. ಆಗಿದ್ದು, ನಿನ್ನೆಗೂ ಇಂದಿನ ಬೆಲೆಗೂ ಶೂನ್ಯ ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 94,380 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. 100 ಗ್ರಾಂ ಚಿನ್ನದ ಬೆಲೆ 9,43,800 ರೂ. ಆಗಿದ್ದು, ಇಂದು ಯಾವುದೇ ಏರಿಳಿತಗಳಾಗಿಲ್ಲ...
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ನಿನ್ನೆ ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಭಾರೀ ಏರಿಕೆ, ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹164 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,312 ರೂ. ಆಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ಇಂದು ₹1,640 ರೂ. ಆಗಿದೆ. 1 ಕಿಲೋ ಬೆಳ್ಳಿ ಬೆಲೆ ₹1,64,000 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 21ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ಬೆಲೆ ಕುಸಿದಿದೆ. ಇನ್ನು GMT 0436 ರ ಹೊತ್ತಿಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ .6% ರಷ್ಟು ಕುಸಿದು $4,052.58 ಕ್ಕೆ ತಲುಪಿದೆ.


Click it and Unblock the Notifications