ಚಿನ್ನದ ಬೆಲೆ ಗುರುವಾರ ಭಾರೀ ತೀಕ್ಷ್ಮಣವಾಗಿ ಇಳಿಕೆಯಾಗಿದ್ದು, ಯುಎಸ್ ಡಾಲರ್ ಸೂಚ್ಯಂಕವು 106ರ ಮಾರ್ಕ್‌ನಲ್ಲಿ ತಲುಪಿದ ಬಳಿಕ ಹಳದಿ ಲೋಹದ ಬೆಲೆ ತಗ್ಗಿದೆ. ಡಾಲರ್ ಸೂಚ್ಯಾಂಕವು ಆರು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಅದರ ಅತ್ಯಧಿಕ ಮಟ್ಟವನ್ನು ಮುಟ್ಟಿದ ನಂತರ, ಅಮೆರಿಕದ ಹಣ ದುಬ್ಬರ ಸ್ವಲ್ಪರ ಮಟ್ಟಿಗೆ ಚೇತರಿಸಿಕೊಂಡಿದೆ.
ಆದರೆ ಭಾರತದಲ್ಲಿ ಚಿನ್ನದ ಬೆಲೆ ಪಾತಾಳದತ್ತ ಮುಖ ಮಾಡಿದೆ. ಯುಎಸ್ ಪಿಪಿಐ (ಪ್ರಡ್ಯೂಸರ್ ಪ್ರೈಸ್ ಇಂಡೆಕ್ಷ್) ಬೇರೆ ಬೇರೆ ಕ್ಷೇತ್ರಗಳಲ್ಲಿ ಕೇಂದ್ರಿ ಕರಿತವಾಗಿದ್ದು, ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದುವರೆದಿದೆ. ಭಾರತದಲ್ಲಿ ಸದ್ಯ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 7565 ರೂ ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 6935 ಆಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್‌ಗಳಿಗೆ 1100 ರೂ ಕಡಿಮೆ ಆಗಿದ್ದು, 69,350ಕ್ಕೆ ಬಂದು ನಿಂತಿದೆ. ಇನ್ನು 22 ಕ್ಯಾರೆಟ್ ಚಿನ್ನದ 100 ಗ್ರಾಮ್ ಬೆಲೆಯಲ್ಲಿ 11000 ಇಳಿಮುಖವಾಗಿದೆ. ಈ ಬೆಲೆ ಬುಧವಾರ 7,04,500 ಇದ್ದು, ಗುರುವಾರ 6,93,500 ಆಗಿದೆ.
24 ಕ್ಯಾರೆಟ್ ಬಂಗಾರದ ಬೆಲೆ ಬುಧವಾರ 76,850 ಇತ್ತು. ಆದರೆ ಗುರುವಾರ 75,650 ಆಗಿದೆ. ಒಂದೇ ದಿನದಲ್ಲಿ 24 ಕ್ಯಾರೆಟ್ ಬಂಗಾರ 1200 ರೂಪಾಯಿ ಕುಸಿತ ಕಂಡಿದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಮ್‌ಗೆ ಒಂದೇ ದಿನದಲ್ಲಿ 12000 ರೂಪಾಯಿ ಇಳಿಕೆ ಆಗಿದೆ. ಬುಧವಾರ (ನ.14) ಚಿನ್ನದ ಬೆಲೆ 7,68,500 ಇತ್ತು. ಈ ದರ ಇಂದು 7,56,500 ಕ್ಕೆ ಕುಸಿದಿದೆ.
ಇನ್ನು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕುಸಿತವಾಗಿದೆ. ಭಾರತದಲ್ಲಿ 10 ಗ್ರಾಮ್ 18 ಕ್ಯಾರೆಟ್ ಚಿನ್ನದ ಬೆಲೆ 57,640 ರೂಪಾಯಿ ಇತ್ತು. ಗುರುವಾರ ಈ ಬೆಲೆ 56,740 ರೂಗಳಿಗೆ ಇಳಿದಿದ್ದು, 900 ರೂಪಾಯಿ ಕುಸಿತ ಕಂತಿಡಿದೆ. ಅದರಂತೆ 18 ಕ್ಯಾರೆಟ್ ಚಿನ್ನ 100 ಗ್ರಾಮ್‌ಗೆ 9000 ಸಾವಿರ ಕುಸಿತ ಕಂಡಿದೆ.
ಭಾರತದಲ್ಲಿ ಪ್ರತಿ ಗ್ರಾಮ್ ಬೆಳ್ಳಿಗೆ 89.50 ರೂಪಾಯಿ ಹಾಗೂ ಪ್ರತಿ ಕೇಜಿ ಬೆಳ್ಳಿಗೆ 89500 ಆಗಿದೆ. ಗುರುವಾರ 100 ಗ್ರಾಮ್ ಬೆಳ್ಳೆಯ ಬೆಲೆ 8950 ಇದ್ದು, ಬುಧವಾರ ಈ ದರ 9,100 ಆಗಿತ್ತು. ಬೆಳ್ಳಿ ಪ್ರತಿ ನೂರು ಗ್ರಾಮ್‌ಗೆ 150 ರೂ ಕಡಿತ ಗೊಂಡಿದ್ದು, ಪ್ರತಿ ಕೆಜಿ ಬೆಳ್ಳಿಯ ರದಲ್ಲಿ ಒಂದೇ ದಿನ 1500 ರೂಪಾಯಿ ಇಳಿಕೆ ಕಂಡಿದೆ.
More From GoodReturns

ಚಿನ್ನದ ಬೆಲೆ ಇಂದು ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಚಿನ್ನದ ಬೆಲೆ ಏರಿಕೆ: ಖರೀದಿಗೆ ಮುನ್ನ ಈ ವಿಷಯ ತಿಳಿಯಿರಿ

ಚಿನ್ನದ ದರ: ಇಂದಿನ ಮಾರುಕಟ್ಟೆ ಏರಿಳಿತದ ಅಸಲಿ ಸತ್ಯವೇನು?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?



Click it and Unblock the Notifications