For Quick Alerts
ALLOW NOTIFICATIONS  
For Daily Alerts

ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ

|

ಎಂಸಿಎಕ್ಸ್ ನಲ್ಲಿ (Multi Commodity Exchange ) ಚಿನ್ನದ ಬೆಲೆಗಳು ಬುಧವಾರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಜಾಗತಿಕ ಮಟ್ಟದಲ್ಲಿ ಹೆಚ್ಚಿನ ದರವನ್ನು ದಾಖಲಿಸಿವೆ. ಎಂಸಿಎಕ್ಸ್ ನಲ್ಲಿ, ಆಗಸ್ಟ್ ತಿಂಗಳ ಚಿನ್ನದ ದರ ಪ್ರತಿ ಗ್ರಾಂಗೆ 0.4% ಏರಿಕೆ ಕಂಡು 48,982 ರುಪಾಯಿಗೆ ತಲುಪಿದೆ.

 

ಬೆಳ್ಳಿ ಭವಿಷ್ಯವು ಪ್ರತಿ ಕೆ.ಜಿ.ಗೆ 0.8% ಏರಿಕೆ ಕಂಡು, 50,779 ರುಪಾಯಿಗೆ ತಲುಪಿದೆ. ಇದರಲ್ಲಿ ದೇಶೀಯ ಬೆಳ್ಳಿ, ಚಿನ್ನದ ಬೆಲೆಗಳು ಸೇರಿದಂತೆ 12.5% ​​ಆಮದು ಸುಂಕ ಮತ್ತು 3% ಜಿಎಸ್ಟಿ ಸೇರಿವೆ.

 

ಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHOಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHO

ಜಾಗತಿಕವಾಗಿ ಕೊರೊನಾವೈರಸ್ ಹಾವಳಿ ವಿಪರೀತವಾಗಿರುವುದರಿಂದ ಎಂಸಿಎಕ್ಸ್‌ನಲ್ಲಿ ಬುಧವಾರ ಚಿನ್ನದ ಬೆಲೆ ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೂಡಿಕೆ ಉದ್ದೇಶದಿಂದ ಎಂಸಿಎಕ್ಸ್ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಸುರಕ್ಷಿತ ತಾಣವೆಂದು ಪರಿಗಣಿಸಲಾಗಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ

ಕೇಂದ್ರ ಬ್ಯಾಂಕುಗಳಿಂದ ವ್ಯಾಪಕವಾದ ಬಡ್ಡಿದರಗಳು ಇಳಿದಿವೆ. ಇದು ಚಿನ್ನಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದನ್ನು ಹಣದುಬ್ಬರ ಮತ್ತು ಕರೆನ್ಸಿ ಅಪಮೌಲ್ಯೀಕರಣದ ವಿರುದ್ಧ 'ಹೆಡ್ಜ್' ಎಂಬ ಅರ್ಥದಲ್ಲಿ ನೋಡಲಾಗುತ್ತದೆ. ಎಂಸಿಎಕ್ಸ್ ಎಂಬುದು ಮಲ್ಟಿ ಕಮಾಂಡಟಿ ಎಕ್ಸಚೇಂಜ್ ಆಗಿದೆ. ಇದು ಬಿಎಸ್‌ಇ, ಎನ್‌ಎಸ್‌ಇ ರೀತಿ ಚಿನ್ನದ ಕೊಡು ಕೊಳ್ಳುವಿಕೆಯಲ್ಲಿ ವ್ಯವಹರಿಸುತ್ತದೆ

English summary

Gold Prices Reach Record high At MCX

Gold Prices Reach Record high At MCX
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X