ಎಂಸಿಎಕ್ಸ್‌ನಲ್ಲಿ ಭಾರತದ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ

ಎಂಸಿಎಕ್ಸ್ ನಲ್ಲಿ (Multi Commodity Exchange ) ಭಾರತದ ಚಿನ್ನದ ಬೆಲೆಗಳು ಬುಧವಾರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಆಗಸ್ಟ್ ಚಿನ್ನದ ಭವಿಷ್ಯವು 0.8% ರಷ್ಟು ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ, ರು 49,925 ರಷ್ಟಿದೆ. ಎಂಸಿಎಕ್ಸ್ನಲ್ಲಿ ಸೆಪ್ಟೆಂಬರ್ ಬೆಳ್ಳಿ ಭವಿಷ್ಯವು ಪ್ರತಿ ಕೇಜಿಗೆ 4% ಜಿಗಿದು ರು 59,635 ಕ್ಕೆ ತಲುಪಿದೆ.

ಹಿಂದಿನ ಸೆಶನ್‌ನಲ್ಲಿ ಚಿನ್ನದ ಬೆಲೆಗಳು 1% ಅಥವಾ ಸುಮಾರು ರು 500 ರಷ್ಟು ಏರಿವೆ. ಮತ್ತೊಂದೆಡೆ, ಹಿಂದಿನ ಸೆಶನ್‌ನಲ್ಲಿ ಬೆಳ್ಳಿ ಪ್ರತಿ ಕೆಜಿಗೆ 6% ಅಥವಾ ಸುಮಾರು, ರು 3,400 ಜಿಗಿದಿದ್ದು, ಸೋಮವಾರದ ರು 1,150 ಲಾಭವನ್ನು ವಿಸ್ತರಿಸಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ, ಸ್ಪಾಟ್ ಚಿನ್ನದ ಬೆಲೆ 1.3% ಏರಿಕೆಯಾಗಿ ಔನ್ಸ್‌ಗೆ 1,865.81 ಕ್ಕೆ ತಲುಪಿದೆ. ಇದು ಸುಮಾರು ಒಂಬತ್ತು ವರ್ಷಗಳಲ್ಲಿ ಗರಿಷ್ಠವಾಗಿದೆ. ಕಡಿಮೆಯಾದ ಯುಎಸ್ ಡಾಲರ್, ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳು ಮತ್ತು ಹೆಚ್ಚಿನ ಪ್ರಚೋದಕ ಕ್ರಮಗಳ ನಿರೀಕ್ಷೆಯು ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಅಮೂಲ್ಯ ಲೋಹಗಳ ಬೆಲೆಯನ್ನು ಹೆಚ್ಚಿಸಿತು. ಸ್ಪಾಟ್ ಬೆಳ್ಳಿಯ ಬೆಲೆ ಔನ್ಸ್‌ಗೆ 7.2% ನಷ್ಟು ಏರಿ 22.8366 ಡಾಲರ್‌ಗೆ ತಲುಪಿದೆ.

ಎಂಸಿಎಕ್ಸ್‌ನಲ್ಲಿ ಭಾರತದ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ

ಎಂಸಿಎಕ್ಸ್ ಎಂಬುದು ಮಲ್ಟಿ ಕಮಾಂಡಟಿ ಎಕ್ಸಚೇಂಜ್ ಆಗಿದೆ. ಇದು ಬಿಎಸ್‌ಇ, ಎನ್‌ಎಸ್‌ಇ ರೀತಿ ಚಿನ್ನದ ಕೊಡು ಕೊಳ್ಳುವಿಕೆಯಲ್ಲಿ ವ್ಯವಹರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+