ಭಾರತದಲ್ಲಿ ಚಿನ್ನದ ದರ ಏರಿಕೆ, ನವೆಂಬರ್-22: 24 ಕ್ಯಾರೆಟ್‌ ಚಿನ್ನದ ಬೆಲೆ 7,882 ರೂ.

ಕಳೆದೆರಡು ದಿನಗಳಿಂದ ಚಿನ್ನದ ದರ ಗಣನೀಯವಾಗಿ ಏರಿಕೆಯಾಗ್ತಾನೆ ಇದೆ. ಹಬ್ಬದ ಸೀಸನ್‌ ವೇಳೆ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಹಬ್ಬ ಮುಗಿಯುತ್ತಿದ್ದಂತೆ ಇಳಿಮಖವಾಗಿದ್ದವು. ಆದ್ರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಮಾತ್ರ ವೇಗವಾಗಿ ಏರಿಕೆಯಾಗ್ತಿದೆ. ಹಾಗೆ ಬೆಳ್ಳಿ ಬೆಲೆ ಮಾತ್ರ ಮತ್ತೆ ಸ್ಥಿರವಾಗಿದೆ.

ರಷ್ಯ ಮತ್ತು ಉಕ್ರೇನ್‌ ಯುದ್ಧಗಳಿಂದಾಗಿ ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಎರಿಳಿತಗಳಾಗಿದ್ದವು. ಅದಾದ ನಂತರ ಮಾರುಕಟ್ಟೆಯಲ್ಲಿ ಚಿನ್ನ ಮತ್ತೆ ಎದ್ದು ನಿಂತಿದೆ. ಇನ್ನು ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಚಿನ್ನ ಖರೀದಿಗಾಗಿ ಕಾಯುತ್ತಿರುವ ಜನರಿಗೆ ಮತ್ತೆ ನಿರಾಸೆಯಾಗಿದೆ. ಭರತದಲ್ಲಿ ಸತತ ಐದನೇ ದಿನ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ನವೆಂಬರ್‌18ರಿಂದ ನವೆಂಬರ್‌ 22ರವರೆಗೆ 24ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 31,700 ರೂಗಳಷ್ಟು ಏರಿಕೆಯಗಿದೆ.

ಭಾರತದಲ್ಲಿ ನಿರಂತರವಾಗಿ ಏರಿಕೆಯಾಗ್ತಿದೆ ಚಿನ್ನದ ದರ!

ಇಂದು ಭಾರತದಲ್ಲಿ ಚಿನ್ನದ ದರ

ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 7,225 ರೂಪಾಯಿ ಇದೆ, ಹಾಗೆ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7,885 ರೂ. ಆಗಿದೆ. ಭಾರತದಲ್ಲಿ ನಿನ್ನೆ 71,450ರೂ. ಇದ್ದ 22 ಕ್ಯಾರೆಟ್‌ನ 10 ಗ್ರಾಂ ಚಿನ್ನ ಬೆಲೆ 800 ರೂ. ಏರಿಕೆಯಾಗಿ ಇಂದು 72,250 ರೂ.ಗೆ ಏರಿಕೆಯಾಗಿದೆ. ಹಾಗೆ ಗುರುವಾರ 7,14,500 ರೂ ಇದ್ದ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8000 ರೂ. ಏರಿಕೆಯಾಗಿ 7,22,500 ರೂಪಾಯಿಯಾಗಿದೆ.

77,950 ರೂಪಾಯಿ ಇದ್ದ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 870 ಏರಿಕೆಯಾಗಿ 78,820 ರೂ. ಆಗಿದೆ. ಗುರುವಾರ 7,79,500 ಇದ್ದ 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8,700 ರೂಗಳಷ್ಟು ಏರಿಕೆಯಾಗಿ ಇಂದು 7,88,200 ರೂಪಾಯಿಗಳಿಗೆ ತಲುಪಿದೆ.

ನಿನ್ನೆ 58,460 ರೂ.ಗಳಿದ್ದ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಇಂದು 240 ರೂಗಳಷ್ಟು ಏರಿಕೆಯಾಗಿ 59,120 ರೂಪಾಯಿಗೆ ತಲುಪಿದೆ. ಹಾಗೆ ಗುರುವಾರ 5,84,600 ರೂ.ಗಳಷ್ಟಿದ್ದ 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ 2,400ರೂ. ಏರಿಕೆಯಾಗಿ 5,91,200 ರೂಪಾಯಿಯಾಗಿದೆ.

ಇಂದು ಭಾರತದಲ್ಲಿ ಬೆಳ್ಳಿ ದರ

ಭಾರತತದಲ್ಲಿ ಬೆಳ್ಳಿ ಅಲುಗಾಡದೇ ತನ್ನ ಬೆಲೆಯನ್ನ ಹಾಗೆ ಕಾಯ್ದುಕೊಂಡಿದೆ. ಇಂದೂ ಕೂಡ ಬೆಳ್ಳಿ ಬೆಲೆಯಲ್ಲಿ ಒಂದಿಷ್ಟು ವ್ಯತ್ಯಾಸಗಳಾಗದೇ ಮತ್ತೆ ಸ್ಥಿರವಾಗಿದೆ. ಭಾರತದಲ್ಲಿ ನವೆಂಬರ್‌ 22 ರಂದು ಬೆಳ್ಳಿ ಪ್ರತಿ ಗ್ರಾಂಗೆ 92 ರೂಪಾಯಿ, ಹಾಗು ಪ್ರತಿ ಕಿಲೋಗ್ರಾಂಗೆ 92,000 ರೂಪಾಯಿ ಇತ್ತು. ಅದೇ ರೀತಿ ಇಂದು ಕೂಡ ನಿನ್ನೆಯಂತೆಯೇ ಪ್ರತಿ 10 ಗ್ರಾಂಗೆ 920 ರೂಪಾಯಿ, ಹಾಗು ಪ್ರತಿ 1 ಕಿಲೋಗ್ರಾಂಗೆ 92,000 ರೂಪಾಯಿ ಇದೆ.

ಸ್ಪಾಟ್‌ ಚಿನ್ನದ ಬೆಲೆ

ಸ್ಪಾಟ್‌ ಚಿನ್ನವು 01:48 pm EST (1848 GMT)ಯಲ್ಲಿ, ಸ್ಪಾಟ್ ಚಿನ್ನವು ಪ್ರತಿ ಔನ್ಸ್ ಗೆ 0.8% ರಷ್ಟು ಏರಿಕೆಯಾಗಿ 2,670.49 ಡಾಲರ್‌ ಆಗಿದೆ. US ಚಿನ್ನದ ಭವಿಷ್ಯವು 0.9% ರಷ್ಟು ಏರಿಕೆಯಾಗಿ 2,674.90 ಡಾಲರ್‌ ಆಗಿದೆ ಎಂದು ರಾಯಿಟರ್ಸ್ ವರದಿಯಲ್ಲಿ ಹೇಳಲಾಗಿದೆ. ಇತರ ಲೋಹಗಳಲ್ಲಿ, ಪಲ್ಲಾಡಿಯಮ್ 1.5% ಏರಿಕೆಯಾಗಿ 1,036.13 ಡಾಲರ್‌ ಆಗಿದ್ದು, ಪ್ಲಾಟಿನಮ್ 0.5% ಏರಿಕೆಯಾಗಿ 965.75 ಡಾಲರ್‌ ಆಗಿದೆ. ಆದರೆ ಸ್ಪಾಟ್ ಬೆಳ್ಳಿ ಮಾತ್ರ 0.1% ಇಳಿಕೆಯಾಗಿ ಪ್ರತಿ ಔನ್ಸ್ 30.85 ಡಾಲರ್‌ ತಲುಪಿದೆ.

ಇಂದು ಚಿನ್ನದ ದರದ ಔಟ್‌ಲುಕ್‌

ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೆ ಏರಿದೆ. ಇನ್ನು ಚಿನ್ನವನ್ನ ಕೊಂಡುಕೊಳ್ಳಲು ಕಾಯತ್ತಿದ್ದ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಾಗಿದೆ.
ಅಲ್ಲದೆ ದಿನದಿಂದ ದಿನಕ್ಕೆ ಚಿನ್ನ ಬೆಲೆ ತನ್ನ ಸಂಖ್ಯೆಯನ್ನ ಹೆಚ್ಚಿಸಿಕೊಳ್ತಾ ಹೋಗ್ತಿದೆ. ಹಾಗೆ ಇಂದು, ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವಿನ ಯುದ್ಧದ ತೀವ್ರತೆಯಿಂದಾಗಿ ಚಿನ್ನ ಅತೀ ಹೆಚ್ಚು ವ್ಯಾಪಾರವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ಇಂದು ಚಿನ್ನ ಮತ್ತು ಬೆಳ್ಳಿಯ ಔಟ್‌ಲುಕ್

ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದು ಸ್ವಲ್ಪ ಹೆಚ್ಚಿನ ವಹಿವಾಟುಗಳನ್ನು ಕಾಣಬಹುದು. ಚಿನ್ನ ಮತ್ತು ಬೆಳ್ಳಿಯ ದರಗಳು ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟುಗಳನ್ನ ಮಾಡುತ್ತವೆ ಎಂದು ನಾವು ನಿರೀಕ್ಷಿಸಬಹುದು. ಹಾಗೆ ಆಗಸ್ಟ್‌ನಲ್ಲಿ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನದ ದರಗಳು ಮತ್ತೆ ಇಳಿಕೆಯಾಗಿದ್ದವು ಆದ್ರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗ್ತಿದೆ. ರಷ್ಯಾ ಉಕ್ರೇನ್‌ ಯುದ್ಧದ ಮಧ್ಯೆ ಜಾಗತಿಕವಾಗಿ ಕುಸಿದದ್ದ ಚಿನ್ನದ ದರ ಮತ್ತೆ ಎದ್ದುನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+