ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಇನ್ನು ಕನಸೇ ಎನ್ನಬಹುದು. ಈ ಪರಿಯ ಬೆಲೆ ಹೆಚ್ಚಳದಿಂದ ಚಿನ್ನದ ಮೇಲೆ ಹೂಡಿಕೆ ಮಾಡಬೇಕು ಎಂದಿರುವವರಿಗೆ, ನಿಜಕ್ಕೂ ಆಘಾತ ಸಂಭವಿಸಿದೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೆ ಬೆವರಿಳಿಯುವ ಸಂದರ್ಭ ಬಂದೊದಗಿದೆ. ಅತಿ ಚುರುಕಾಗಿ ಏರುತ್ತಿರುವ ಚಿನ್ನದ ಬೆಲೆ, ಕೆಲವೇ ದಿನಗಳಲ್ಲಿ ಪ್ರತಿ ಗ್ರಾಂಗೆ 10 ಸಾವಿರ ತಲುಪುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಗಡಿಗೆ ಬಂದು ನಿಂತಿರುವ ಚಿನ್ನ, ಹೂಡಿಕೆದಾರರ ಎದೆ ಮೇಲೆ ತಾಂಡವವಾಡುತ್ತಿದೆ.

ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು.ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ,ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ,ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,945ಇದೆ.ಅಂದರೆ ನಿನ್ನೆ ₹8,920ಆಗಿದ್ದು ಇಂದು ₹105 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದಬೆಲೆ 10 ಗ್ರಾಂಗೆ 89ಸಾವಿರದ450ರೂ. ಇದೆ. ಅಂದರೆ ನಿನ್ನೆ 89ಸಾವಿರದ 200 ರೂ. ಆಗಿದ್ದು ಇಂದು ₹250 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 94 ಸಾವಿರದ 500 ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 92ಸಾವಿರ ರೂ. ಆಗಿದ್ದು ಇಂದು ₹2,500ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,758ಇದೆ. ಅಂದರೆ ನಿನ್ನೆ ₹9,731ಆಗಿದ್ದು ಇಂದು ₹27ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 97 ಸಾವಿರದ580 ರೂ. ಇದೆ. ಅಂದರೆ ನಿನ್ನೆ 97ಸಾವಿರದ310ರೂ. ಆಗಿದ್ದು ಇಂದು ₹270ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ75 ಸಾವಿರದ 800ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 73ಸಾವಿರದ 100 ರೂ. ಆಗಿದ್ದು ಇಂದು ₹2,700ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,319 ಇದೆ. ಅಂದರೆ ನಿನ್ನೆಯ ಬೆಲೆ ₹7,298 ಆಗಿದ್ದು ಇಂದು ಪ್ರತಿ ಗ್ರಾಂಗೆ ₹21 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 73ಸಾವಿರದ 190 ರೂ. ಇದೆ. ಅಂದರೆ ನಿನ್ನೆಯ ಬೆಲೆ 72 ಸಾವಿರದ 980 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹210 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 31 ಸಾವಿರದ 900 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 29 ಸಾವಿರದ 800 ರೂ. ಆಗಿದ್ದು ಇಂದು ₹2,100 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,960 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,773 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,331ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,945ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,758 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,950ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,763 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,323 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,950ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,763 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,323 ಆಗಿದೆ.
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಗೆ ಇದ್ದು ₹99.90 ನಿನ್ನೆ ಈ ಬೆಲೆ ₹100 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹0.10ರಷ್ಟು ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ₹999ಇದ್ದು ನಿನ್ನೆ ಈ ಬೆಲೆ ₹1,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹1 ರಷ್ಟು ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಗೆ ₹9,990 ಇದ್ದು ನಿನ್ನೆ ಈ ಬೆಲೆ ₹10,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹10 ರಷ್ಟು ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಗೆ ₹99,900 ಇದ್ದು ನಿನ್ನೆ ಈ ಬೆಲೆ ₹1,00,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹100 ರಷ್ಟು ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ ಇಂದು ( ಏಪ್ರಿಲ್ 17) ಸ್ಪಾಟ್ ಚಿನ್ನದ ಬೆಲೆಯು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,270.12ರಷ್ಟು ವಹಿವಾಟು ನಡೆಸುತ್ತಿದೆ. ಅಮೆರಿಕದ ಫ್ಯೂಚರ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ $3,286.30ರಷ್ಟು ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಈ ಪರಿಯ ಏರಿಕೆ ನೋಡುತ್ತಿರುವುದು ಆತಂಕ ಎದುರಾಗಿಸುವ ಸಂಗತಿಯಾಗಿದೆ. ಟ್ರಂಪ್ ಅವರ ಈ ತೀರ್ಮಾನದಿಂದ ತಕ್ಷಣವೇ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬಂದಿತು. ಇದರಿಂದ ಹೂಡಿಕೆದಾರರಲ್ಲಿ ಭೀತಿಯಿಂದಾಗಿ ಉಂಟಾಗಿದ್ದ ಒತ್ತಡ ಕಡಿಮೆಯಾಯಿತು.ಈ ನಿರ್ಧಾರವು ಜಾಗತಿಕ ಆರ್ಥಿಕ ಸ್ಥಿತಿಗೆ ತಾತ್ಕಾಲಿಕ ಉಸಿರಾಟ ನೀಡಿದರೂ, ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತದ ವ್ಯಾಪಾರ ನೀತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.
ಮದುವೆ ಸೀಸನ್‌ಗೆ ಚಿನ್ನ ಖರೀದಿ ಯೋಜಿಸುತ್ತಿದ್ದ ಕುಟುಂಬಗಳು ಹಿಂದಕ್ಕೆ ಜಾರುವ ಸ್ಥಿತಿ ಎದುರಾಗಿದೆ. ಇದರೊಂದಿಗೆ, ಬಂಗಾರ ಹೂಡಿಕೆಗೆ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಇನ್ನಷ್ಟು ಗಂಭೀರವಾಗಿ ಎದುರಾಗುತ್ತಿದೆ. ಇಂಧನ ದರ, ಡಾಲರ್-ರೂಪಾಯಿ ವಿನಿಮಯ ಮೌಲ್ಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು ಈ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಚಿನ್ನದ ಖರೀದಿಗೆ ಮೊದಲು ನಿಖರ ಮಾಹಿತಿ ಪಡೆದು, ಸಮಗ್ರ ಹೂಡಿಕೆ ಯೋಚನೆಯೊಂದಿಗೆ ಮುಂದಾಗುವುದು ಸೂಕ್ತ.
ಒಟ್ಟಿನಲ್ಲಿ, ಅಮೆರಿಕಾ-ಚೀನಾ ಸಂಘರ್ಷ, ಯುದ್ಧದ ಭೀತಿ, ರೂಪಾಯಿಯ ಮೌಲ್ಯ ಕುಸಿತ, ಜಾಗತಿಕ ಬ್ಯಾಂಕುಗಳ ಬಂಗಾರದ ಸಂಗ್ರಹ, ಹಾಗೂ ದೇಶೀಯ ಮದುವೆ ಅವಧಿಯ ಬೇಡಿಕೆಸೇರಿ ಎಲ್ಲ ಅಂಶಗಳ ಸಮೂಹ ಪರಿಣಾಮವಾಗಿ ಚಿನ್ನದ ದರ ಜಿಗಿತ ಕಂಡಿದೆ. ಹೀಗಾಗಿ ಹೂಡಿಕೆದಾರರು ಶೇರು ಮಾರುಕಟ್ಟೆ ಅಥವಾ ಕ್ರಿಪ್ಟೋ ಮಾರುಕಟ್ಟೆಯ ಬದಲು ಚಿನ್ನವನ್ನು ಭದ್ರ ಹೂಡಿಕೆ ಮಾಧ್ಯಮವೆಂದು ಆಯ್ಕೆ ಮಾಡುತ್ತಿದ್ದಾರೆ.
ಚಿನ್ನದ ಬೆಲೆ ಏರಿಳಿತಕ್ಕೆ ಕಾರಣ:
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು..


Click it and Unblock the Notifications