ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತವಾಗುತ್ತಲೇ ಇದೆ. ಕಳೆದ ವಾರವೆಲ್ಲ ಖುಷಿ ನೀಡಿದ್ದ ಚಿನ್ನದ ಬೆಲೆ, ಈ ವಾರದ ಆರಂಭದಲ್ಲೇ ಏರಿಕೆಯಾಗಿ ಕಹಿ ನೀಡಿದೆ. ಇದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಬೇಕೆಂದಿರುವವರು, ಗೊಂದಲಕ್ಕೀಡಾಗಿದ್ದಾರೆ. ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೆ ಬೆವರಿಳಿಯುವ ಸಂದರ್ಭ ಬಂದೊದಗಿದೆ. ಅತಿ ಚುರುಕಾಗಿ ಏರುತ್ತಿರುವ ಚಿನ್ನದ ಬೆಲೆ, ಕೆಲವೇ ದಿನಗಳಲ್ಲಿ ಪ್ರತಿ ಗ್ರಾಂಗೆ 10 ಸಾವಿರ ತಲುಪುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಗಡಿಗೆ ಬಂದು ನಿಂತಿರುವ ಚಿನ್ನ, ಹೂಡಿಕೆದಾರರ ಎದೆ ಮೇಲೆ ತಾಂಡವವಾಡುತ್ತಿದೆ.

ಹೂಡಿಕೆಗೆ ಆಸಕ್ತರಾಗಿರುವವರಿಗೆ ಈ ಪರಿಸ್ಥಿತಿ ಎರಡು ಬಗೆಯ ಪ್ರಭಾವ ಬೀರಬಹುದು.ಹೀಗಾಗಿ ಒಂದೆಡೆ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಲೇ ಹೂಡಿಕೆ ಮಾಡೋದು ಸೂಕ್ತವೆಂಬ ಯೋಚನೆ,ಮತ್ತೊಂದೆಡೆ ಈಗ ತಕ್ಷಣ ಹೂಡಿಕೆಗೆ ಮುನ್ನುಡಿಯಿಟ್ಟರೆ ನಷ್ಟವೋ ಎಂಬ ಆತಂಕ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಒತ್ತಡ,ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,775 ಇದೆ.ಅಂದರೆ ನಿನ್ನೆ ₹8,755 ಆಗಿದ್ದು ಇಂದು ₹20 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದಬೆಲೆ 10 ಗ್ರಾಂಗೆ 87,750 ರೂ. ಇದೆ. ಅಂದರೆ ನಿನ್ನೆ 87,550 ರೂ. ಆಗಿದ್ದು ಇಂದು ₹200 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 77 ಸಾವಿರದ 500 ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 75,500 ರೂ. ಆಗಿದ್ದು ಇಂದು ₹2,000 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,573 ಇದೆ. ಅಂದರೆ ನಿನ್ನೆ ₹9,551 ಆಗಿದ್ದು ಇಂದು ₹22 ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 97 ಸಾವಿರದ 730 ರೂ. ಇದೆ. ಅಂದರೆ ನಿನ್ನೆ 97ಸಾವಿರದ 510 ರೂ. ಆಗಿದ್ದು ಇಂದು ₹220 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 57 ಸಾವಿರದ 300 ರೂ. ಆಗಿದೆ. ಅಂದರೆ ನಿನ್ನೆ 9 ಲಕ್ಷ 55 ಸಾವಿರದ 100 ರೂ. ಆಗಿದ್ದು ಇಂದು ₹2,200 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,180 ಇದೆ. ಅಂದರೆ ನಿನ್ನೆಯ ಬೆಲೆ ₹7,164 ಆಗಿದ್ದು ಇಂದು ಪ್ರತಿ ಗ್ರಾಂಗೆ ₹16 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 71 ಸಾವಿರದ 800 ರೂ. ಇದೆ. ಅಂದರೆ ನಿನ್ನೆಯ ಬೆಲೆ 71 ಸಾವಿರದ 640 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹160 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 7 ಲಕ್ಷ 18 ಸಾವಿರ ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 7 ಲಕ್ಷದ 16 ಸಾವಿರದ 400 ರೂ. ಆಗಿದ್ದು ಇಂದು ₹1,600 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,250 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,790 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,588 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,192 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,775 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,573 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,180 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,780 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,578 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,184 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,780 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,578 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,184 ಆಗಿದೆ.
ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:
ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಗೆ ಇದ್ದು ₹97 ನಿನ್ನೆ ಈ ಬೆಲೆ ₹98 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹1 ರಷ್ಟು ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ₹970 ಇದ್ದು ನಿನ್ನೆ ಈ ಬೆಲೆ ₹980 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹10 ರಷ್ಟು ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಗೆ ₹9,700 ಇದ್ದು ನಿನ್ನೆ ಈ ಬೆಲೆ ₹9,800 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹100 ರಷ್ಟು ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಗೆ ₹97,000 ಇದ್ದು ನಿನ್ನೆ ಈ ಬೆಲೆ ₹98,000 ಆಗಿತ್ತು. ಅಂದರೆ ನಿನ್ನೆಗಿಂತ ಇಂದಿಗೆ ₹1,000 ರಷ್ಟು ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಮೇ 5ರಂದು ಸ್ಪಾಟ್ ಚಿನ್ನದ ಬೆಲೆಯು 0.5% ಹೆಚ್ಚಾಗಿ ಪ್ರತಿ ಔನ್ಸ್‌ಗೆ $3,256.85 ವಹಿವಾಟು ನಡೆಸುತ್ತಿದೆ. ಅಮೆರಿಕದ ಡಾಲರ್ ಮೌಲ್ಯ ಕುಸಿತಗೊಂಡಿರುವುದು ಮತ್ತು ಫೆಡರಲ್ ರಿಸರ್ವ್‌ನ ಬಡ್ಡಿದರ ನಿರ್ಧಾರಗಳ ನಿರೀಕ್ಷೆಯು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ .
ಚಿನ್ನದ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಈ ಪರಿಯ ಏರಿಕೆ ನೋಡುತ್ತಿರುವುದು ಆತಂಕ ಎದುರಾಗಿಸುವ ಸಂಗತಿಯಾಗಿದೆ. ಟ್ರಂಪ್ ಅವರ ಈ ತೀರ್ಮಾನದಿಂದ ತಕ್ಷಣವೇ ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬಂದಿತು. ಇದರಿಂದ ಹೂಡಿಕೆದಾರರಲ್ಲಿ ಭೀತಿಯಿಂದಾಗಿ ಉಂಟಾಗಿದ್ದ ಒತ್ತಡ ಕಡಿಮೆಯಾಯಿತು.ಈ ನಿರ್ಧಾರವು ಜಾಗತಿಕ ಆರ್ಥಿಕ ಸ್ಥಿತಿಗೆ ತಾತ್ಕಾಲಿಕ ಉಸಿರಾಟ ನೀಡಿದರೂ, ಮುಂದಿನ ದಿನಗಳಲ್ಲಿ ಟ್ರಂಪ್ ಆಡಳಿತದ ವ್ಯಾಪಾರ ನೀತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ.
ಮದುವೆ ಸೀಸನ್‌ಗೆ ಚಿನ್ನ ಖರೀದಿ ಯೋಜಿಸುತ್ತಿದ್ದ ಕುಟುಂಬಗಳು ಹಿಂದಕ್ಕೆ ಜಾರುವ ಸ್ಥಿತಿ ಎದುರಾಗಿದೆ. ಇದರೊಂದಿಗೆ, ಬಂಗಾರ ಹೂಡಿಕೆಗೆ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆ ಇನ್ನಷ್ಟು ಗಂಭೀರವಾಗಿ ಎದುರಾಗುತ್ತಿದೆ. ಇಂಧನ ದರ, ಡಾಲರ್-ರೂಪಾಯಿ ವಿನಿಮಯ ಮೌಲ್ಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು ಈ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ, ಚಿನ್ನದ ಖರೀದಿಗೆ ಮೊದಲು ನಿಖರ ಮಾಹಿತಿ ಪಡೆದು, ಸಮಗ್ರ ಹೂಡಿಕೆ ಯೋಚನೆಯೊಂದಿಗೆ ಮುಂದಾಗುವುದು ಸೂಕ್ತ.
ಒಟ್ಟಿನಲ್ಲಿ, ಅಮೆರಿಕಾ-ಚೀನಾ ಸಂಘರ್ಷ, ಯುದ್ಧದ ಭೀತಿ, ರೂಪಾಯಿಯ ಮೌಲ್ಯ ಕುಸಿತ, ಜಾಗತಿಕ ಬ್ಯಾಂಕುಗಳ ಬಂಗಾರದ ಸಂಗ್ರಹ, ಹಾಗೂ ದೇಶೀಯ ಮದುವೆ ಅವಧಿಯ ಬೇಡಿಕೆಸೇರಿ ಎಲ್ಲ ಅಂಶಗಳ ಸಮೂಹ ಪರಿಣಾಮವಾಗಿ ಚಿನ್ನದ ದರ ಜಿಗಿತ ಕಂಡಿದೆ. ಹೀಗಾಗಿ ಹೂಡಿಕೆದಾರರು ಶೇರು ಮಾರುಕಟ್ಟೆ ಅಥವಾ ಕ್ರಿಪ್ಟೋ ಮಾರುಕಟ್ಟೆಯ ಬದಲು ಚಿನ್ನವನ್ನು ಭದ್ರ ಹೂಡಿಕೆ ಮಾಧ್ಯಮವೆಂದು ಆಯ್ಕೆ ಮಾಡುತ್ತಿದ್ದಾರೆ.


Click it and Unblock the Notifications