ಸತತ ಏರಿಕೆ ಕಂಡಿದ್ದು ಸಾರ್ವಕಾಲಿಕ ಗರಿಷ್ಠ ಬೆಲೆ ಮುಟ್ಟಿದ್ದ ಚಿನ್ನದ ಬೆಲೆ ಕೊನೆಗೂ ಇಳಿಕೆಯತ್ತ ಮುಖ ಮಾಡಿದೆ. ಸೋಮವಾರ ಭಾರತದಲ್ಲಿ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಯುಎಸ್ ಡಾಲರ್ ಬಲವನ್ನು ಹೆಚ್ಚಿಸಿಕೊಂಡಿದ್ದು, ಪೆಡರಲ್ ರಿಸರ್ವ್ ಮುಂದಿನ ತಿಂಗಳು ರೇಟ್ ಕಟ್ ಮಾಡುವ ವಿಶ್ವಾದಲ್ಲಿ ಹೂಡಿಕೆದಾರರು ಇರುವ ಕಾರಣ, ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಸೋಮವಾರ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 50 ರೂಪಾಯಿ ಕುಸಿತ ಕಂಡಿದೆ.
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 50 ರೂಪಾಯಿ ಇಳಿಕೆಯಾಗಿ 71,150 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಕುಸಿತ ಕಂಡಿದ್ದು 7,11,500 ರೂಪಾಯಿಯಲ್ಲಿ ವಹಿವಾಡು ನಡೆಸುತ್ತಿದೆ. 24ಕ್ಯಾರೆಟ್ ಚಿನ್ನದ ಬೆಲೆ ಕೂಡ 10 ಗ್ರಾಂಗೆ 50 ರೂಪಾಯಿ ಕಡಿಮೆಯಾಗಿದೆ. ಸೋಮವಾರ 10 ಗ್ರಾಂ 24 ಕ್ಯಾರೆಟ್ ಚಿನ್ನವು 77,620 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ, 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7,76,200 ರೂಪಾಯಿಗೆ ಕುಸಿದಿದೆ. ವಾರದ ಆರಂಭದಲ್ಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯುವ ಭರವಸೆ ಮೂಡಿಸಿವೆ.

10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 40 ರೂಪಾಯಿ ಕುಸಿತ ಕಂಡಿದೆ. ಇಂದು 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 58,220 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. 100ಗ್ರಾಂನ 18ಕ್ಯಾರೆಟ್ ಚಿನ್ನದ ಬೆಲೆ 400 ರೂಪಾಯಿ ಕುಸಿದಿದ್ದು, 5,82,200 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆಯಲ್ಲಿ ಕುಸಿತದ ಮುನ್ಸೂಚನೆ
ಜಿಆರ್ ಇಂಗ್ಲಿಷ್ ವರದಿ ಮಾಡಿರುವಂತೆ, ಚಿನ್ನದ ಬೆಲೆ ಕುಸಿತದ ಬಗ್ಗೆ ಮೋತಿಲಾಲ್ ಓಸ್ವಾಲ್ ಪ್ರತಿಕ್ರಿಯೆ ನೀಡಿ, "ಚಿನ್ನದ ಬೆಲೆತಲ್ಲಿ 5-7% ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ. ಚಿನ್ನದ ದರ ಕುಸಿದಾಗ ಖರೀದಿ ಮಾಡಲು ನಾವು ಶಿಫಾರಸ್ಸು ಮಾಡುತ್ತೇವೆ" ಎಂದು ಹೇಳಿದ್ದಾರೆ. ಚಿನ್ನದ ವ್ಯಾಪಾರಿಗಳು ಕೂಡ ಚಿನ್ನದ ಬೆಲೆ ಕುಸಿಯುತ್ತಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಖರೀದಿಗೆ ಮುಂದಾಗಬಹುದು.
ಮುಂದಿನ ಎರಡು ವರ್ಷಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 86,000 ದಾಟಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ನಿರೀಕ್ಷೆ ಮಾಡಿದ್ದಾರೆ. ಸಾಲು ಸಾಲು ಹಬ್ಬಗಳ ನಡುವೆ ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ದೀಪಾವಳಿ ಕೂಡ ಹತ್ತಿರ ಇರುವ ಕಾರಣ ಚಿನ್ನ ಖರೀದಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷೆ ಮಾಡಬಹುದು ಎನ್ನಲಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಭಾರತದಲ್ಲಿ ಸೋಮವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒಂದು ಕೆ.ಜಿ. ಬೆಳ್ಳಿ ಬೆಲೆ ಸದ್ಯ 97,000 ರೂಪಾಯಿಗಳಾಗಿದೆ. 100 ಗ್ರಾಂ ಬೆಳ್ಳಿ 9700 ರೂಪಾಯಿಗಳಷ್ಟಿದೆ. ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications