ಬೆಂಗಳೂರಿನಲ್ಲಿ ಬಹಳಷ್ಟು ಮಂದಿ ಚಿನ್ನ ಪ್ರಿಯರಿದ್ದಾರೆ. ಆದ್ರೆ ಇತ್ತೀಚಿನ ಬೆಲೆ ಏರಿಕೆ ನೋಡಿ ಅದೆಷ್ಟೋ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಬೆಂಗಳೂರಿನಲ್ಲಂತೂ ಚಿನ್ನದ ಬೆಲೆ ಈ ವಾರ ಒಂದೆರಡು ಬಾರಿ ಇಳಿಕೆಯಾಗಿದೆ ಹೊರತು, ಉಳಿದ ದಿನವೆಲ್ಲಾ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿತ್ತು. ಅತ್ತ ಗ್ರಾಹಕರು ಕೂಡಾ ಚಿನ್ನದ ಬೆಲೆ (Gold Rate Today) ಇಂದು ಕಮ್ಮಿಯಾಗಬದು, ನಾಳೆ ಕಮ್ಮಿಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ರೆ ಇಂದು (ಜ.25) ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಶೂನ್ಯ ಬದಲಾವಣೆಯಾಗಿದೆ. ನಿನ್ನೆಯ ಬೆಲೆಯಲ್ಲೇ ಚಿನ್ನದ ಬೆಲೆಗಳು ಮುಂದುವರೆದಿದ್ದು, ಒಂದು ಗ್ರಾಂ ಚಿನ್ನದ ಬೆಲೆ ₹16,026 ರೂ. ಆಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,28,208 ರೂ. ಆಗಿದ್ದು, ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,60,260 ರೂ. ಇದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,02,600 ರೂ. ಆಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 14,690 ರೂ. ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,17,520 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,46,900 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 14,69,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ 22K ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 18K ಚಿನ್ನದ 1 ಗ್ರಾಂ ಬೆಲೆ ಇಂದು 12,019 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಇಂದು ಮುಂದುವರೆದಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹96,152 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,20,190 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 12,01,900 ರೂ. ಆಗಿದೆ. ಈ ಮೂಲಕ ಭಾನುವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆಯಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ನಿಂತ ನೀರಾಗಿಬಿಟ್ಟಿದೆ. ಇಂದು 1 ಗ್ರಾಂ ಬೆಳ್ಳಿ ದರ ₹335 ರೂ., 8 ಗ್ರಾಂ ಬೆಳ್ಳಿ ಬೆಲೆ ₹2,680 ರೂ., 10 ಗ್ರಾಂ ಬೆಳ್ಳಿ ದರ ₹3,350 ರೂ., 100 ಗ್ರಾಂ ಬೆಳ್ಳಿ ದರ ₹33,500 ರೂ., 1000 ಗ್ರಾಂ ಅಂದರೆ 1 ಕೆಜಿ ಬೆಳ್ಳಿ ಬೆಲೆ ₹3,35,000 ರೂ. ಆಗಿದೆ.
ಸ್ಪಾಟ್ ಚಿನ್ನದ ದರ:
ಜನವರಿ 24ರ ರಾಯಿಟರ್ಸ್ ವರದಿ ಪ್ರಕಾರ, ಮುಂಬರುವ ಬಜೆಟ್‌ನಲ್ಲಿ ಆಮದು ಸುಂಕ ಹೆಚ್ಚಳದ ನಿರೀಕ್ಷೆಯಿಂದ ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದಾರೆ. ಅದೇ ಕಾರಣದಿಂದ ಚಿನ್ನದ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ $5000 ಗಡಿಯಲ್ಲಿ ವಹಿವಾಟು ನಡೆಸುತ್ತಿದೆ.


Click it and Unblock the Notifications