ಚಿನ್ನ ಪ್ರಿಯರಿಗೆ ಬಂಪರ್ ಸುದ್ದಿ. ನಿನ್ನೆ ಸ್ಥಿರವಾಗಿದ್ದ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ದಿಢೀರ್ ಇಳಿಕೆ ಕಂಡಿದೆ. ಅಂತೂ ಚಿನ್ನ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ನಿರೀಕ್ಷೆಯಂತೆ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Gold Rate) ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ 12,513 ರೂ. ಆಗಿದ್ದು, ನಿನ್ನೆ 12,584 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ₹71 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,00,104 ರೂ. ಆಗಿದ್ದು, ನಿನ್ನೆ 1,00,672 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಎಂಟು ಗ್ರಾಂ ಚಿನ್ನದಲ್ಲಿ ₹568 ರೂ. ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು 1,25,130 ರೂ. ಆಗಿದ್ದು ನಿನ್ನೆ ₹1,25,840 ರೂ. ಇತ್ತು. 100 ಗ್ರಾಂ ಚಿನ್ನದ ಬೆಲೆ ಇಂದು 12,51,300 ರೂ. ಆಗಿದ್ದು, ನಿನ್ನೆ 12,58,400 ರೂ. ಇತ್ತು. ಈ ಮೂಲಕ ಒಂದೇ ದಿನದಲ್ಲಿ 7,100 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 11,470 ರೂ. ಇದೆ. ಅಂದರೆ ನಿನ್ನೆಗಿಂತ 65 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 91,760 ರೂ. ಆಗಿದ್ದು, ನಿನ್ನೆ 92,280 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆಯಲ್ಲಿ ₹520 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,14,700 ಆಗಿದೆ. ನಿನ್ನೆಗಿಂತ 650 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,47,000 ರೂಪಾಯಿ ಇದ್ದು, ನಿನ್ನೆ 11,53,500 ರೂ. ಇತ್ತು.
18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,385 ರೂಪಾಯಿಯಾಗಿದೆ. ನಿನ್ನೆ 9,438 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ಒಟ್ಟು ₹53 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,080 ರೂ. ಆಗಿದ್ದು, ನಿನ್ನೆ 75,504 ರೂ. ಇತ್ತು. ನಿನ್ನೆಗಿಂತ ಇಂದು ₹424 ರೂ. ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 93,850 ರೂ. ಆಗಿದ್ದು, ನಿನ್ನೆ 94,380 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಅತ್ತ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರವೂ ಭಾರೀ ಇಳಿಕೆಯಾಗಿದೆ,. ಅಂದರೆ ಇಂದು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ 163 ರೂ ಆಗಿದ್ದು, ನಿನ್ನೆ ₹164 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ 1 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,304 ರೂ. ಆಗಿದ್ದು, ನಿನ್ನೆ ₹1,312 ರೂ. ಇತ್ತು. ನಿನ್ನೆಗಿಂತ ಇಂದು ₹8 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ಇಂದು ₹1,630 ರೂ. ಆಗಿದೆ. 1000 ಗ್ರಾಂ ಬೆಳ್ಳಿ ದರ ₹1,63,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 2೪ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಹಿನ್ನೆಲೆ ಚಿನ್ನದ ಮೇಲೂ ಭಾರ ಬೀಳುತ್ತಿದ್ದಂತೆ ಸೋಮವಾರ ಚಿನ್ನದ ಬೆಲೆ ಸತತ ಮೂರನೇ ದಿನವೂ ಕುಸಿತ ಕಂಡಿದೆ. ಇನ್ನು ಅಮೆರಿಕಾ ಬಡ್ಡಿದರ ಕಡಿತದ ಬಗ್ಗೆ ಹೂಡಿಕೆದಾರರು ಕಾತುರದಲ್ಲಿದ್ದಾರೆ.
0353 GMT ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ $4,051.31 ಕ್ಕೆ, ಶೇ.04% ರಷ್ಟು ಇಳಿಕೆಯಾಗಿದೆ.


Click it and Unblock the Notifications