ಭಾರತದ ಹಲವು ಕಡೆಗಳಲ್ಲಿ ಚಿನ್ನದ ಬೆಲೆ (Gold Rate Today) ಭಾರೀ ಇಳಿಕೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಚಿನ್ನದ ಬೆಲೆ (Bengaluru Gold Rate) ಬಹಳಷ್ಟು ಕುಸಿತ ಕಂಡಿದೆ. ಚಿನ್ನವನ್ನು ಸುರಕ್ಷಿತ ಹೂಡಿಕೆಗಳಲ್ಲಿ ಒಂದು ಎಂದು ಹಲವರು ಭಾವಿಸುತ್ತಾರೆ. ಅದೇ ಕಾರಣದಿಂದ ಇತ್ತೀಚೆಗೆ ಚಿನ್ನ, ಬೆಳ್ಳಿ ದರದಲ್ಲಿ (Gold-Silver Rate) ಭಾರೀ ಏರಿಕೆ ಕಂಡಿದೆ. ಇದೀಗ ಬೆಂಗಳೂರಿನಲ್ಲಿ ಚಿನ್ನದ ಜೊತೆ ಬೆಳ್ಳಿ ದರ ಕೂಡಾ ಇಳಿಕೆ ಕಂಡಿದೆ. ಹಾಗಿದ್ರೆ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. 1 ಗ್ರಾಂ ಬೆಲೆ ಇಂದು ₹16,058 ರೂ. ಆಗಿದ್ದು, ನಿನ್ನೆ ₹16,920 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ಬರೋಬ್ಬರಿ ₹862 ರೂ. ಕುಸಿತವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹1,28,464 ರೂ. ಆಗಿದ್ದು, ನಿನ್ನೆ ₹1,35,360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 8 ಗ್ರಾಂ ಚಿನ್ನದಲ್ಲಿ ದಿಢೀರ್ 6,896 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,60,580 ರೂ. ಆಗಿದ್ದು, ನಿನ್ನೆ ₹1,69,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 8,620 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 16,05,800 ರೂ. ಆಗಿದ್ದು, ನಿನ್ನೆ 16,92,000 ರೂ. ಇತ್ತು. ಒಟ್ಟು ₹86,200 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ₹790 ರೂ. ಇಳಿಕೆಯಾಗಿದೆ. ₹14,720 ರೂ. ಆಗಿದ್ದು, ನಿನ್ನೆ ₹15,510 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೋಬ್ಬರಿ ₹790 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 1,17,760 ರೂ. ಆಗಿದ್ದು, ನಿನ್ನೆ 1,24,080 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹6,320 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,47,200 ರೂ. ಆಗಿದ್ದು, ನಿನ್ನೆ ₹1,55,100 ರೂ. ಇತ್ತು. ಒಟ್ಟು 7,900 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,72,000 ರೂ. ಆಗಿದ್ದು, ನಿನ್ನೆ ₹15,51,000 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ ₹79,000 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಇಂದು ಬೆಂಗಳೂರಿನಲ್ಲಿ 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,044 ರೂ. ಆಗಿದ್ದು, ನಿನ್ನೆ ₹12,690 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹646 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹96,352 ರೂ. ಆಗಿದ್ದು, ನಿನ್ನೆ ₹1,01,520 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 5,168 ರೂ. ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ದರ 1,20,440 ರೂ. ಆಗಿದ್ದು, ನಿನ್ನೆ 1,26,900 ರೂ. ಇತ್ತು. ಒಟ್ಟು 6,460 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹12,04,400 ರೂ. ಆಗಿದ್ದು, ನಿನ್ನೆ ₹12,69,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹64,600 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹350 ರೂ. ಇದೆ. ನಿನ್ನೆ ₹395 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹45 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,800 ರೂ. ಆಗಿದ್ದು, ನಿನ್ನೆ ₹3,160 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹360 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,500 ರೂ., 100 ಗ್ರಾಂ ಬೆಳ್ಳಿ ಬೆಲೆ ₹35,000 ರೂ., 1000 ಗ್ರಾಂ ಬೆಳ್ಳಿ ದರ ₹3,50,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 30, 2026 ರ ರಾಯಿಟರ್ಸ್ ವರದಿ ಪ್ರಕಾರ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆ ಸುಮಾರು 8.15% ದಷ್ಟು ಕಡಿಮೆಯಾಗಿದ್ದು, ಪ್ರತೀ ಔನ್ಸ್‌ಗೆ $4,893.2 ಕ್ಕೆ ಇಳಿದಿದೆ.


Click it and Unblock the Notifications