ಬೆಂಗಳೂರು: ಚಿನ್ನದ ದರ (Gold Rate) ಇತ್ತೀಚೆಗೆ ಭಾರೀ ಕುಸಿತ ಕಾಣುತ್ತಿದೆ. ಅದೇ ಹಿನ್ನೆಲೆ ಹೂಡಿಕೆದಾರರು ಕೂಡಾ ಚಿನ್ನ-ಬೆಳ್ಳಿ ಬೆಲೆ ಬಗ್ಗೆ ಗಮನ ಹರಿಸುತ್ತಲೇ ಇದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನ ಪ್ರಿಯರು ಬಹಳಷ್ಟು ಇದ್ದಾರೆ. ಆದ್ದರಿಂದ ಚಿನ್ನವನ್ನು ಸುರಕ್ಷಿತ ಹೂಡಿಕೆಯೆಂದು ಹೆಚ್ಚಿನವರು ಪರಿಗಣಿಸುತ್ತಾರೆ. ಅದೇ ಕಾರಣದಿಂದ ಚಿನ್ನದ ಮೇಲಿನ ಹೂಡಿಕೆಯನ್ನೂ ಹೆಚ್ಚಿಸಿದ್ದಾರೆ. ಇದೀಗ ಭಾನುವಾರ (ಫೆ.21) ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate Bengaluru) ಏರಿಕೆಯಾಗಿದೆಯೇ? ಇಳಿಕೆಯಾಗಿದೆಯೇ? ಎಂಬ ಕುತೂಹಲದಲ್ಲಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹15,928 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹1,27,424 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,59,280 ರೂ. ಇದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹15,92,800 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ ಚಿನ್ನದ ಬೆಲೆಯಲ್ಲಿ ಇಂದು ಶೂನ್ಯ ಬದಲಾವಣೆಯಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ 14,600 ರೂ. ಆಗಿದ್ದು, ನಿನ್ನೆಯಷ್ಟೇ ಬೆಲೆ ಇದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,16,800 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,46,000 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 14,60,000 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ 18K ಚಿನ್ನದ 1 ಗ್ರಾಂ ಬೆಲೆ ಇಂದು 11,946 ರೂ. ಆಗಿದ್ದು, ನಿನ್ನೆಯಷ್ಟೇ ಬೆಲೆ ಇದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು ₹95,568 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಯಾವುದೇ ವ್ಯತ್ಯಾಸವಾಗಿಲ್ಲ. 10 ಗ್ರಾಂ ಚಿನ್ನದ ಬೆಲೆ ಇಂದು 1,19,460 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ ಇಂದು ಒಟ್ಟು ಬೆಲೆ 11,94,600 ರೂ. ಆಗಿದೆ. ಈ ಮೂಲಕ ಭಾನುವಾರ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆ ಸ್ಥಿರವಾದಂತೆ, ಇತ್ತ ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ. ಆ ಪ್ರಕಾರ 1 ಗ್ರಾಂ ಬೆಳ್ಳಿ ದರ ₹275 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. 8 ಗ್ರಾಂ ಬೆಳ್ಳಿ ದರ ₹2,200 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,750 ರೂ. ಇತ್ತು. ಇನ್ನು 100 ಗ್ರಾಂ ಬೆಲೆ ₹27,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ ₹2,75,000 ರೂ. ಆಗಿದೆ.
ಸ್ಪಾಟ್ ಚಿನ್ನದ ದರ:
ಫೆಬ್ರವರಿ 20ರ ರಾಯಿಟರ್ಸ್ ವರದಿ ಪ್ರಕಾರ, GMT 1831ರ ವೇಳೆಗೆ ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ $4,979.18 ಆಗಿದ್ದು, ಯಾವುದೇ ಬದಲಾವಣೆಯಾಗಿರಲಿಲ್ಲ.


Click it and Unblock the Notifications