ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಭಾರೀ ಇಳಿಕೆಯ ಹಾದಿಯಲ್ಲಿದೆ. ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ (Bengaluru Gold Rate) ಇಂದು ಭರ್ಜರಿ ಇಳಿಕೆಯಾಗಿದೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಚಿನ್ನ ಪ್ರಿಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಂತಾಗಿದೆ. 24K ಚಿನ್ನದ ಪ್ರತೀ ಗ್ರಾಂನಲ್ಲಿ ಇಂದು ₹103 ರೂ. ಇಳಿಕೆಯಾಗಿದ್ದು, ಒಟ್ಟು ಬೆಲೆ ₹15,966 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು ₹1,27,728 ರೂ. ಆಗಿದ್ದು, ನಿನ್ನೆ ₹1,28,552 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹824 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,59,660 ರೂ. ಆಗಿದ್ದು, ನಿನ್ನೆ ₹1,60,690 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಚಿನ್ನದ ಬೆಲೆ ₹1,030 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 15,96,600 ರೂ. ಆಗಿದ್ದು, ನಿನ್ನೆ 16,06,900 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದೇ ದಿನ ₹10,300 ರೂ. ಕುಸಿತ ಕಂಡಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ₹14,635 ರೂ. ಆಗಿದ್ದು, ನಿನ್ನೆ ₹14,730 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹95 ರೂ. ಕುಸಿತ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 1,17,080 ರೂ. ಆಗಿದ್ದು, ನಿನ್ನೆ 1,17,840 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹760 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,46,350 ರೂ. ಆಗಿದ್ದು, ನಿನ್ನೆ ₹1,47,300 ರೂ. ಇತ್ತು. ನಿನ್ನೆಗಿಂತ ಇಂದು ₹950 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,63,500 ರೂ. ಆಗಿದ್ದು, ನಿನ್ನೆ ₹14,73,000 ರೂ. ಇತ್ತು. ಒಂದೇ ದಿನದಲ್ಲಿ ₹9,500 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,974 ರೂ. ಆಗಿದ್ದು, ನಿನ್ನೆ ₹12,052 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹78 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹95,792 ರೂ. ಆಗಿದ್ದು, ನಿನ್ನೆ ₹96,416 ಇತ್ತು. ನಿನ್ನೆಗಿಂತ ಇಂದು ₹624 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 1,19,740 ರೂ. ಆಗಿದ್ದು, ನಿನ್ನೆ 1,20,520 ರೂ. ಇತ್ತು. ನಿನ್ನೆಗಿಂತ ಇಂದು ₹780 ರೂ. ಕುಸಿತ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,97,400 ರೂ. ಆಗಿದ್ದು, ನಿನ್ನೆ ₹12,05,200 ರೂ. ಇತ್ತು.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರವೂ ಭರ್ಜರಿ ಇಳಿಕೆಯಾಗಿದೆ. ನಿನ್ನೆ ಪೈಸೆಯಷ್ಟು ಇಳಿಕೆಯಾಗಿದ್ದ ಬೆಳ್ಳಿ ದರ, ಇಂದು 5 ರೂ.ನಷ್ಟು ಇಳಿಯಾಗಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ 5 ರೂ. ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ₹275 ರೂ. ತಲುಪಿದೆ. 8 ಗ್ರಾಂ ಬೆಳ್ಳಿ ದರ ₹2,200 ರೂ., 10 ಗ್ರಾಂ ಬೆಳ್ಳಿ ಬೆಲೆ ₹2,750 ರೂ., 100 ಗ್ರಾಂ ಬೆಳ್ಳಿ ದರ ₹27,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,75,000 ರೂ. ಆಗಿದೆ.


Click it and Unblock the Notifications