ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸತತವಾಗಿ ಏರಿಕೆ ಕಂಡು ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಕೊನೆಗೂ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಶನಿವಾರ (ನವೆಂಬರ್ 2) ರಂದು ದೇಶದಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇನ್ನಷ್ಟು ಕುಸಿಯುವ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ. ಯುಎಸ್ ಅಧ್ಯಕ್ಷೀಯ ಚುನಾವಣೆ ಸಮೀಪವಾಗುತ್ತಿರುವ ಬೆನ್ನಲ್ಲೇ ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ಕೂಡ ಏರಿಳಿತ ಕಾಣುತ್ತಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು, ಯುಎಸ್ ಚುನಾವಣೆ ಫಲಿತಾಂಶದ ಅನಿಶ್ಚಿತತೆಗಳು, ರಷ್ಯಾ ಉಕ್ರೇನ್ ಯುದ್ಧ ಸೇರಿದಂತೆ ಹಲವು ವಿಚಾರಗಳು ಚಿನ್ನದ ಬೆಲೆ ಏರಿಕೆಯಲ್ಲಿ ಮುಖ್ಯವಾದ ಪಾತ್ರ ವಹಿಸಿವೆ. ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ಕೊನೆಗೂ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಶನಿವಾರ ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 16 ರೂಪಾಯಿ ಕಡಿಮೆಯಾಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ 15 ರೂಪಾಯಿ ಕಡಿಮೆಯಾಗಿದೆ. 18 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ 12 ರೂಪಾಯಿ ಕಡಿಮೆಯಾಗಿದೆ.
ಇಂದು ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ ಬೆಲೆ ಶುಕ್ರವಾರ 8,056 ರೂಪಾಯಿ ಇದ್ದರೆ, ಶನಿವಾರ 8,040 ರೂಪಾಯಿಗೆ ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ 160 ರೂಪಾಯಿ ಕಡಿಮೆಯಾಗಿದ್ದು ಶುಕ್ರವಾರ 80,560 ರೂಪಾಯಿ ಇದ್ದರೆ ಶನಿವಾರ 80,400 ರೂಪಾಯಿಗೆ ಕಡಿಮೆಯಾಗಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,600 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರಟ್ ಬೆಲೆ ಗ್ರಾಂಗೆ 15 ರೂಪಾಯಿ ಕಡಿಮೆಯಾಗಿದ್ದು, ಶುಕ್ರವಾರ 7,385 ರೂಪಾಯಿ ಇದ್ದರೆ ಶನಿವಾರ 7,370 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 150 ರೂಪಾಯಿ ಕಡಿಮೆಯಾಗಿದೆ. ಶುಕ್ರವಾರ 73,850 ರೂಪಾಯಿ ಇದ್ದ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಶನಿವಾರ 73,700 ರೂಪಾಯಿಗೆ ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ 12 ರೂಪಾಯಿ ಕಡಿಮೆಯಾಗಿದೆ. ಶುಕ್ರವಾರ 6,042 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 6,030 ರೂಪಾಯಿಗೆ ಕಡಿಮೆಯಾಗಿದೆ. 60,420 ರೂಪಾಯಿ ಇದ್ದ 10 ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 120 ರೂಪಾಯಿ ಕಡಿಮೆಯಾಗಿ, 60,300 ರೂಪಾಯಿಗೆ ಇಳಿಕೆಯಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಕಡಿಮೆಯಾಗಿದ್ದರೆ ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ನವೆಂಬರ್ 1ರಂದು 3000 ರೂಪಾಯಿ ಇಳಿಕೆಯಾಗಿದ್ದ ಬೆಳ್ಳಿ ಬೆಲೆ 1 ಕೆಜಿಗೆ 97,000 ರೂಪಾಯಿಗಳಷ್ಟಾಗಿದೆ. ಶನಿವಾರ ಕೂಡ ಅದೇ ದರದಲ್ಲಿ ಮಾರಾಟವಾಗುತ್ತಿದೆ.


Click it and Unblock the Notifications