Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್‌ 9,800 ರೂ. ಕುಸಿತ

ಮಧ್ಯಪ್ರಾಚ್ಯದಲ್ಲಿ ಯುದ್ಧದ (Middle East War) ಭೀತಿ ತೀವ್ರವಾಗುತ್ತಿದ್ದರೂ, ಇತ್ತ ಭಾರತೀಯ ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಹೂಡಿಕೆದಾರರಿಗಂತೂ ಇದೇ ಸೂಕ್ತ ಸಮಯವಾಗಿದೆ. ಭಾರತದಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಕೆ ಕಂಡಿದ್ದು (Gold Rate Down), ಒಟ್ಟು ಎಷ್ಟಿದೆ ದರ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! 9,800 ರೂ. ಕುಸಿತ

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?

24K ಚಿನ್ನದ 1 ಗ್ರಾಂ ಬೆಲೆ ಇಂದು ₹16,124 ರೂ. ಆಗಿದ್ದು, ನಿನ್ನೆ 16,222 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹98 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,28,992 ರೂ. ಆಗಿದ್ದು, ನಿನ್ನೆ ₹1,29,776 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹784 ರೂ. ಕುಸಿತ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,61,240 ರೂ. ಆಗಿದ್ದು, ನಿನ್ನೆ ₹1,62,220 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಕೇವಲ ₹980 ರೂ. ಕುಸಿತವಾಗಿದೆ. 100 ಗ್ರಾಂ ಚಿನ್ನದ ದರ 16,12,400 ರೂ. ಆಗಿದ್ದು, ನಿನ್ನೆ 16,22,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹9,800 ರೂ. ಇಳಿಕೆಯಾಗಿದೆ. ಇನ್ನು ಏರಿಕೆಯ ಪ್ರಮಾಣಕ್ಕೆ ಹೋಲಿಸಿದ್ರೆ, ಇಳಿಕೆ ಪ್ರಮಾಣ ತುಂಬಾ ಕಡಿಮೆಯೇ ಇದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?

22K ಚಿನ್ನದ 1 ಗ್ರಾಂ ಬೆಲೆ ಇಂದು ₹14,780 ರೂ. ಆಗಿದ್ದು, ನಿನ್ನೆ 14,870 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹90 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,240 ರೂ. ಆಗಿದ್ದು, ನಿನ್ನೆ 1,18,960 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹720 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,47,800 ರೂ. ಆಗಿದ್ದು, ನಿನ್ನೆ ₹1,48,700 ರೂ. ಇತ್ತು. ನಿನ್ನೆಗಿಂತ ಇಂದು ₹900 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,78,000 ರೂ. ಆಗಿದ್ದು, ನಿನ್ನೆ 14,87,000 ರೂ. ಇತ್ತು. ಒಂದೇ ದಿನದಲ್ಲಿ ಕೇವಲ ₹9,000 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?

18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,093 ರೂ. ಆಗಿದ್ದು, ನಿನ್ನೆ 12,167 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಕೇವಲ 74 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹96,744 ರೂ. ಆಗಿದ್ದು, ನಿನ್ನೆ 97,336 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಬರೀ 592 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 1,20,930 ರೂ. ಆಗಿದ್ದು, ನಿನ್ನೆ 1,21,670 ರೂ. ಇತ್ತು. ನಿನ್ನೆಗಿಂತ ಇಂದು 740 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹12,09,300 ರೂ. ಆಗಿದ್ದು, ನಿನ್ನೆ ₹12,16,700 ರೂ. ಇತ್ತು. ನಿನ್ನೆಗಿಂತ ಇಂದು 7,400 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?

ಚೆನ್ನೈ: 24K ರೂ. 16,256, 22K ರೂ. 14,900, 18K ರೂ. 12,550
ಮುಂಬೈ: 24K ರೂ. 16,124, 22K ರೂ. 14,780, 18K ರೂ. 12,093
ದೆಹಲಿ: 24K ರೂ. 16,139, 22K ರೂ. 14,793, 18K ರೂ. 12,108
ಕೋಲ್ಕತ್ತಾ: 24K ರೂ. 16,124, 22K ರೂ. 14,780, 18K ರೂ. 12,093
ಬೆಂಗಳೂರು: 24K ರೂ. 16,124, 22K ರೂ. 14,780, 18K ರೂ. 12,093
ಹೈದರಾಬಾದ್: 24K ರೂ. 16,124, 22K ರೂ. 14,780, 18K ರೂ. 12,093
ಕೇರಳ: 24K ರೂ. 16,124, 22K ರೂ. 14,780, 18K ರೂ. 12,093
ಪುಣೆ: 24K ರೂ. 16,124, 22K ರೂ. 14,780, 18K ರೂ. 12,093
ವಡೋದರಾ: 24K ರೂ. 16,129, 22K ರೂ. 14,783, 18K ರೂ. 12,098
ಅಹಮದಾಬಾದ್: 24K ರೂ. 16,129, 22K ರೂ. 14,783, 18K ರೂ. 12,098

ಭಾರತದಲ್ಲಿ ಬೆಳ್ಳಿ ದರ:

ಭಾರತದಲ್ಲಿ ಇಂದು ಬೆಳ್ಳಿ ದರವೂ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಅಂದರೆ ನಿನ್ನೆಯಷ್ಟೇ 10 ರೂ. ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಪ್ರತೀ ಗ್ರಾಂನಲ್ಲಿ 0.10 ಪೈಸೆ ರೂ. ಇಳಿಕೆ ಕಂಡಿದೆ. ಅಂದರೆ ಒಂದು ಗ್ರಾಂ ಬೆಳ್ಳಿ ದರ ಇಂದು ₹279.90 ರೂ. ಆಗಿದ್ದು, ನಿನ್ನೆ ₹280 ರೂ. ಇತ್ತು. 8 ಗ್ರಾಂ ಬೆಳ್ಳಿ ದರ ಇಂದು ₹2,239.20 ರೂ. ಆಗಿದ್ದು, ನಿನ್ನೆ ₹2,240 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹0.80 ಪೈಸೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹2,799 ರೂ. ಆಗಿದ್ದು, ನಿನ್ನೆ ₹2,800 ರೂ. ಇತ್ತು. 10 ಗ್ರಾಂ ಬೆಳ್ಳಿಯಲ್ಲಿ ಕೇವಲ 1 ರೂ. ಕುಸಿತ ಕಂಡಿದೆ. 100 ಗ್ರಾಂ ಬೆಳ್ಳೀ ಬೆಲೆ ₹27,990 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ ₹2,79,900 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಮಾರ್ಚ್‌ 13, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಸತತ ಎರಡನೇ ವಾರದಲ್ಲಿ ಚಿನ್ನದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇಂಧನ ಬೆಲೆ ಏರಿಕೆ, ಯುಎಸ್‌ ಬಡ್ಡಿದರದ ನಿರೀಕ್ಷೆಯಿಂದಾಗಿ ಈ ಬೆಳವಣಿಗೆ ಕಂಡುಬಂದಿದೆ.

ಶುಕ್ರವಾರ GMT 0411 ರ ವೇಳೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 0.7% ಏರಿಕೆ ಕಂಡು, $5,112.82 ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+