ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ: 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ₹2,200 ಇಳಿಕೆ.. ಹಾಗಾದ್ರೆ 22K ಗೋಲ್ಡ್ ಬೆಲೆ ಎಷ್ಟು..?

ಕಳೆದ ಮೂರ್ನಾಲ್ಕು ದಿನಗಳಿಂದ ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್ ಸಿಗುತ್ತಿದೆ. ಅದೇನೆಂದರೆ ಭಾರತದಲ್ಲಿ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಲೇ ಇದೆ. ಮಹಿಳೆಯರಿಗೆ ಅತೀ ಇಷ್ಟವಾದ ಚಿನ್ನದ ಬೆಲೆ ಕಡಿಮೆಯಾದರೆ, ಅವರಿಗಾಗೋ ಸಂತಸ ಅಷ್ಟಿಷ್ಟಲ್ಲ. ಸಭೆ, ಸಮಾರಂಭಗಳಲ್ಲಿ ಆಕರ್ಷಣೆ ಮಾಡುವುದೇ ಬಂಗಾರ. ಮಹಿಳೆಯರು ಬಂಗಾರ ತೊಡುವುದೇ ಒಂದು ಚಂದ. ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವ ಆಸೆ ಮಾತ್ರ ಕಡಿಮೆಯಾಗಲ್ಲ. ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಚಿನ್ನದಂಗಡಿಗೆ ಓಡೋಡಿ ಹೋಗಿ ಖರೀದಿಸುತ್ತಾರೆ.

24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ₹2,200 ಇಳಿಕೆ..!

ನಾರಿಮಣಿಯರ ಅಲಂಕಾರಕ್ಕೆ ಇನ್ನಷ್ಟು ರೂಪ ಕೊಡುವ ಈ ಚಿನ್ನ ಎಲ್ಲಕ್ಕಿಂತ ಮಿಗಿಲು. ಹೀಗಾಗಿಯೇ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಈ ಚಿನ್ನ ತನ್ನ ಬೆಲೆ ಎಷ್ಟೇ ಹೆಚ್ಚಿಸಿಕೊಂಡರೂ ಮಹಿಳೆಯರಿಗೆ ಇದರ ಮೇಲಿನ ಆಸಕ್ತಿ ಕೊಂಚವೂ ಕಡಿಮೆಯಾಗುವುದಿಲ್ಲ. ಇನ್ನು ಬೆಲೆ ಕಡಿಮೆಯಾದರೆ ಕೇಳಬೇಕಾ. ಮಹಿಳೆಯರಿಗೆ ಈ ಚಿನ್ನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತದೆ. . ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಹಾಗೆಯೇ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನ ದುಬಾರಿಯಾಗಿದೆ. ಇಂದು ಕೊಂಚ ಬೆಲೆ ಇಳಿಕೆಯಾಗಿದ್ದು, ಭಾರತದಲ್ಲಿ ಚಿನ್ನದ ಬೆಲೆ ಇಂದು ಹೇಗಿದೆ. ನಿನ್ನೆಗಿಂತ ಇಂದು ಎಷ್ಟು ಬೆಲೆ ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಇಂದು ಚಿನ್ನದ ಬೆಲೆ:

22 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 7,940 ರೂ. ಆಗಿದೆ. ನಿನ್ನೆ ಇದರ ಬೆಲೆ 7,960 ರೂ. ಆಗಿದ್ದು ನಿನ್ನೆಗಿಂತ ಇಂದು, 20 ರೂ. ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 79,400 ರೂ. ಆಗಿದೆ. ನಿನ್ನೆಯ ಬೆಲೆ 79,600 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 200 ರೂ. ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 7 ಲಕ್ಷದ 94 ಸಾವಿರ ರೂ. ಆಗಿದೆ. ನಿನ್ನೆಯ ಬೆಲೆ 7 ಲಕ್ಷದ 96 ಸಾವಿರ ರೂ. ಆಗಿದ್ದು ನಿನ್ನೆಗಿಂತ ಇಂದು 2,000 ರೂ. ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,662 ರೂ. ಆಗಿದೆ. ನಿನ್ನೆ ಇದರ ಬೆಲೆ 8,684 ರೂ. ಆಗಿದ್ದು ನಿನ್ನೆಗಿಂತ ಇಂದು, 22 ರೂ. ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 86,620 ರೂ. ಆಗಿದೆ. ನಿನ್ನೆಯ ಬೆಲೆ 86,840 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 220 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 66 ಸಾವಿರದ 200 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 68 ಸಾವಿರದ 400 ರೂ. ಆಗಿದ್ದು ನಿನ್ನೆಗಿಂತ ಇಂದು 2,200 ರೂ. ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 6,497 ರೂ. ಆಗಿದೆ. ನಿನ್ನೆ ಇದರ ಬೆಲೆ 6,513 ರೂ. ಆಗಿದ್ದು ನಿನ್ನೆಗಿಂತ ಇಂದು, 16 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 64,970 ರೂ. ಆಗಿದೆ. ನಿನ್ನೆಯ ಬೆಲೆ 65,130 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 160 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 49 ಸಾವಿರದ 700 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 51 ಸಾವಿರದ 300 ರೂ. ಆಗಿದ್ದು ನಿನ್ನೆಗಿಂತ ಇಂದು 1,600 ರೂ. ಇಳಿಕೆಯಾಗಿದೆ.


ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ

ನಗರಗಳು 22K 24K 18K
ಚೆನೈ ₹7,940 ₹8,662 ₹6,497
ಮುಂಬೈ ₹7,940 ₹8,662 ₹6,497
ದೆಹಲಿ ₹7,955 ₹8,677 ₹6,509
ಕೋಲ್ಕತಾ ₹7,940 ₹8,662 ₹6,497
ಬೆಂಗಳೂರು ₹7,940 ₹8,662 ₹6,497
ಹೈದರಾಬಾದ್ ₹7,940 ₹8,662 ₹6,497
ಕೇರಳ ₹7,940 ₹8,662 ₹6,497
ಪುಣೆ ₹7,940 ₹8,662 ₹6,497
ಬರೋಡಾ ₹7,945 ₹8,667 ₹6,501
ಅಹಮದಾಬಾದ್ ₹7,945 ₹8,667 ₹6,501

ಸ್ಪಾಟ್ ಗೋಲ್ಡ್ ವಿವರ:

ರಾಯಿಟರ್ಸ್ ವರದಿ ಪ್ರಕಾರ 2025ರ ಫೆಬ್ರವರಿ 28ರಂದು, ಅಮೆರಿಕಾ ಚಿನ್ನದ ದರಗಳು 0.3% ಕಡಿಮೆಯಾಗಿದೆ. ಅಂದರೆ $2,886.80 ಪ್ರತಿ ಔನ್ಸ್‌ಗೆ ವಹಿವಾಟು ನಡೆಯುತ್ತಿದೆ. ಸ್ಪಾಟ್ ಚಿನ್ನದ ದರವು 0.1% ಇಳಿಕೆಯಾಗಿ 02:32 GMT $2,874.69 ಪ್ರತಿ ಔನ್ಸ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+