ಮಹಿಳೆಯರಿಗೆ ಇಂದು ಕೂಡ ಬಂಗಾರದಂತಹ ಸುದ್ದಿ ಸಿಕ್ಕಿದೆ.. ಬಂಗಾರದ ಬೆಲೆಯಲ್ಲಿ ಇಳಿಕೆಯನ್ನೇ ನೋಡುತ್ತಿದ್ದ ಮಹಿಳೆಯರಿಗೆ ಸಿಹಿ ಸಿಕ್ಕಂತಾಗಿದೆ. ಏಕೆಂದರೆ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ನಿನ್ನೆಯೂ ಬೆಲೆಯಲ್ಲಿ ಕಂಡಿದ್ದ ಮಹಿಳೆಯರಿಗೆ, ಇಂದು ನಿರಾಸೆಯಾಗಿಲ್ಲ. ನ್ನದ ಬೆಲೆ ಒಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾದರೆ, ದಿಢೀರ್ ಅಂತಾ ಗಗನಕ್ಕೇರುತ್ತದೆ. ಆದರೆ ಇಂದು ಮಹಿಳೆಯರಿಗೆ ಸ್ವಲ್ಪ ಖುಷಿ ಸುದ್ದಿ ಸಿಕ್ಕಿದೆ. ಇದರಿಂದ ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಸ್ವಲ್ಪ ನಿರಾಳವಾಗಿದೆ.

ನಾರಿಮಣಿಯರಿಗೆ ಚಿನ್ನ ಎಂದರೆ ಅಚ್ಚು-ಮೆಚ್ಚು.. ಅವರಿಗೆ ಚಿನ್ನದ ಮೇಲಿರುವ ಪ್ರೀತಿಯನ್ನು ಅಳೆಯೋದಕ್ಕೂ ಸಾಧ್ಯವಿಲ್ಲ. ಚಿನ್ನ ಕೊಟ್ಟಾಗ ಸಿಕ್ಕ ಖುಷಿ ಬೇರೆಲ್ಲೂ ಸಿಗಲ್ಲ. ಹೀಗಾಗಿ ಅವರಿಗೆ ಚಿನ್ನದ ಬೆಲೆ ಇಳಿಕೆಯಾಗಿರುವ ಸುದ್ದಿ ಸಿಕ್ಕಿತೆಂದರೆ ಇನ್ನೂ ಖುಷಿಯಾಗುತ್ತದೆ. ಸಭೆ ಸಮಾರಂಭಗಳಲ್ಲಿ ಪ್ರತಿಷ್ಠೆ ತಂದುಕೊಡುವುದೇ ಚಿನ್ನ. ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಮಹಿಳೆಯರು ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಆಭರಣದ ರೂಪದಲ್ಲಿ ಮಹಿಳೆಯರಿಗೆ ಆಕರ್ಷಣೆ ನೀಡುವ ಈ ಚಿನ್ನಕ್ಕೆ ಭಾರತದಲ್ಲಿ ದಿನೇ ದಿನೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ.
ಇನ್ನು ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಯು ಒಂದೇ ಕಾರಣದಿಂದ ಆಗುವುದಿಲ್ಲ. ಹಲವಾರು ಕಾರಣಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತದೆ. ಅಂದರೆ ಜಾಗತಿಕ ಚಿನ್ನದ ಬೆಲೆಗಳು ಪ್ರಮುಖವಾಗಿ ಡಾಲರ್‌ನ ಬಲ, ತೈಲದ ಬೆಲೆಗಳು, ಮತ್ತು ಜಿಯೋಪಾಲಿಟಿಕಲ್ ಘಟನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಅವುಗಳ ಆಧಾರದ ಮೇಲೆ ಚಿನ್ನದ ಬೆಲೆ ಇಳಿಕೆ ಅಥವಾ ಏರಿಕೆಯಾಗುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿದ್ದರೆ, ಅದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಬಹುದು.ಅಮೆರಿಕಾದ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ಹೂಡಿಕೆದಾರರು ಚಿನ್ನದ ಬದಲು ಬಡ್ಡಿದರ ಹೊಂದಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ, ಇದು ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಹಾಗೆಯೇ ರೂಪಾಯಿ ಮೌಲ್ಯವು ಡಾಲರ್ ಎದುರು ಬಲವಾಗಿದ್ದರೆ, ಚಿನ್ನದ ಆಮದು ವೆಚ್ಚ ಕಡಿಮೆಯಾಗುತ್ತದೆ, ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಬಹುದು. ವಿವಿಧ ಹಬ್ಬಗಳು, ವಿವಾಹ ಸೀಸನ್ ಮುಂತಾದ ಸಂದರ್ಭಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಇಂತಹ ಸಂದರ್ಭಗಳಿಲ್ಲದಿದ್ದಾಗ ಅಥವಾ ಆರ್ಥಿಕ ಸ್ಥಿತಿಯಿಂದ ಬೇಡಿಕೆ ಕಡಿಮೆಯಾದಾಗ, ಬೆಲೆ ಇಳಿಯಬಹುದು. ಹೀಗೆ ನಾನಾ ಕಾರಣಗಳಿಂದ ಚಿನ್ನದ ಬೆಲೆ ಇಳಿಕೆ ಅಥವಾ ಏರಿಕೆಯಾಗಬಹುದು. ಹಾಗಾದರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,185 ಆಗಿದೆ. ನಿನ್ನೆ ಇದರ ಬೆಲೆ ₹8,215 ಆಗಿದ್ದು ನಿನ್ನೆಗಿಂತ ಇಂದು, ₹30 ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹81,850 ಆಗಿದೆ. ನಿನ್ನೆಯ ಬೆಲೆ ₹82,150 ಆಗಿದ್ದು ನಿನ್ನೆಗಿಂತ ಇಂದಿಗೆ ₹300 ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷದ 18 ಸಾವಿರದ 500 ರೂ. ಆಗಿದೆ. ನಿನ್ನೆಯ ಬೆಲೆ ₹8,21,500 ರೂ. ಆಗಿದ್ದು ನಿನ್ನೆಗಿಂತ ಇಂದು ₹3,000 ಇಳಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,929 ಆಗಿದೆ. ನಿನ್ನೆ ಇದರ ಬೆಲೆ ₹8,962 ಆಗಿದ್ದು ನಿನ್ನೆಗಿಂತ ಇಂದು, ₹33 ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹89,290 ಆಗಿದೆ. ನಿನ್ನೆಯ ಬೆಲೆ ₹89,620 ಆಗಿದ್ದು ನಿನ್ನೆಗಿಂತ ಇಂದಿಗೆ ₹330 ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 92 ಸಾವಿರದ 900 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 96 ಸಾವಿರದ 200 ರೂ. ಆಗಿದ್ದು ನಿನ್ನೆಗಿಂತ ಇಂದು ₹3,300 ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹6,697 ಆಗಿದೆ. ನಿನ್ನೆ ಇದರ ಬೆಲೆ ₹6,722 ಆಗಿದ್ದು ನಿನ್ನೆಗಿಂತ ಇಂದು, 25 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹66,970 ಆಗಿದೆ. ನಿನ್ನೆಯ ಬೆಲೆ ₹67,220 ಆಗಿದ್ದು ನಿನ್ನೆಗಿಂತ ಇಂದಿಗೆ 250 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 69 ಸಾವಿರದ 700 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 72 ಸಾವಿರದ 200 ರೂ. ಆಗಿದ್ದು ನಿನ್ನೆಗಿಂತ ಇಂದು 2,500 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,765 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,200 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,944 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,709 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,185 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,929 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,697 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,190 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,934 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,701 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,190 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,934 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,701 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇನ್ನು ಕಳೆದ ಎರಡ್ಮೂರು ದಿನಗಳ ಬೆಳ್ಳಿ ಬೆಲೆಯನ್ನು ಹೋಲಿಸಿದರೆ, ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹101ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹1,010 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹10,100 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹1,01,000 ಆಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ಇಂದು (ಮಾರ್ಚ್ 25) ಸ್ಪಾಟ್ ಗೋಲ್ಡ್ ಬೆಲೆಯು 0425 GMT ವೇಳೆಗೆ ಪ್ರತಿ ಔನ್ಸ್‌ಗೆ $3,015.42ಕ್ಕೆ 0.1% ಏರಿಕೆ ಕಂಡುಬಂದಿದೆ. ಇದರ ನಡುವೆ ಅಮೆರಿಕಾದ ಚಿನ್ನದ ಭವಿಷ್ಯದ ದರವು ಕೂಡ 0.1% ಏರಿಕೆಯಿಂದ $3,019.40ಕ್ಕೆ ತಲುಪಿದೆ. ಸ್ಪಾಟ್ ದರವು ಷೇರು ಮಾರುಕಟ್ಟೆಯ ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ಹೆಚ್ಚಳ ಕಂಡಿತು. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿನ ವಾರದಿಂದ ಜಾರಿಗೆ ಬರುವ ನಿರೀಕ್ಷೆಯಿರುವ ಸುಂಕಗಳನ್ನು ಘೋಷಿಸಿದ ನಂತರ, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿದರು.
ಇನ್ನು ನಿನ್ನೆಯ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದರೂ ಅಷ್ಟೇನು ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರಲಿಲ್ಲ. ಅಲ್ಪ ಪ್ರಮಾಣದಲ್ಲಿ ಮಾತ್ರ ಚಿನ್ನದ ಬೆಲೆ ಇಳಿಕೆಯಾಗಿತ್ತು. ಆದರೆ ಚಿನ್ನದ ಬೆಲೆ ಏರಿಕೆಯಾಗಿಲ್ಲ ಎಂಬ ಖುಷಿಯಂತೂ ಇತ್ತು. ಆದರೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಈ ಖುಷಿ ದುಪ್ಪಟ್ಟಾಗಿದೆ. ಇತ್ತೀಚಿನ ಚಿನ್ನದ ಬೆಲೆಯನ್ನು ಪರಿಗಣಿಸಿದರೆ, ಚಿನ್ನ ಕೊಳ್ಳುವುದಕ್ಕಿಂತ ಸೈಟ್ ಅಥವಾ ಮನೆ ಮೇಲೆ ಹೂಡಿಕೆ ಮಾಡುವುದೇ ಎಷ್ಟೋ ಉತ್ತಮ ಎಂಬಂತಾಗಿದೆ.


Click it and Unblock the Notifications