ಮಹಿಳೆಯರಿಗೆ ಬಂದಾರದಂತಹ ಸುದ್ದಿ.. ಶಿವರಾತ್ರಿ ಬಳಿಕ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬರುತ್ತಿಲ್ಲ. ಬದಲಾಗಿ ದಿನೇ ದಿನೆ ಬೆಲೆಯಲ್ಲಿ ಸ್ವಲ್ಪವಾದರೂ ಕಡಿಮೆಯಾಗುತ್ತಿದೆ. ಅದರಲ್ಲೂ ಇಂದಿನ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಕಳೆದ ಶನಿವಾರ ಚಿನ್ನದ ಬೆಲೆ ಎಷ್ಟಿತ್ತೋ ಇಂದು ಕೂಡ ಅಷ್ಟೇ ಇದೆ. ಇದು ಮಹಿಳೆಯರ ಪಾಲಿಗೆ ದೊಡ್ಡ ಗುಡ್‌ನ್ಯೂಸ್ ಎಂದರೂ ತಪ್ಪಾಗಲ್ಲ. ಮಹಿಳೆಯರಿಗೆ ಚಿನ್ನದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದೂ ಇಲ್ಲ. ಏಕೆಂದರೆ ಚಿನ್ನ ಒಂದು ಅಮೂಲ್ಯವಾದ ಸಂಪತ್ತಿಗೆ ಸಮಾನ. ಮಹಿಳೆಯರಿಗೆ ಅತೀ ಇಷ್ಟವಾದ ಚಿನ್ನದ ಬೆಲೆ ಕಡಿಮೆಯಾದರೆ, ಅವರಿಗಾಗೋ ಸಂತಸ ಅಷ್ಟಿಷ್ಟಲ್ಲ. ನಾರಿಮಣಿಯರ ಅಲಂಕಾರಕ್ಕೆ ಇನ್ನಷ್ಟು ರೂಪ ಕೊಡುವ ಈ ಚಿನ್ನ ಎಲ್ಲಕ್ಕಿಂತ ಮಿಗಿಲು. ಹೀಗಾಗಿಯೇ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಈ ಚಿನ್ನ ತನ್ನ ಬೆಲೆ ಎಷ್ಟೇ ಹೆಚ್ಚಿಸಿಕೊಂಡರೂ ಮಹಿಳೆಯರಿಗೆ ಇದರ ಮೇಲಿನ ಆಸಕ್ತಿ ಕೊಂಚವೂ ಕಡಿಮೆಯಾಗುವುದಿಲ್ಲ.

ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಮಹಿಳೆಯರಿಗೆ ಅದರ ಮೇಲಿನ ಆಸೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಇನ್ನು ಚಿನ್ನದ ಬೆಲೆ ಕಡಿಮೆಯಾಗಿದ್ದರೆ ಕೇಳೋದೇ ಬೇಡ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಚಿನ್ನದ ಬೆಲೆ ಶನಿವಾರದಷ್ಟೇ ಕಾಯ್ದುಕೊಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
ಭಾರತದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಏರಿಕೆಯಾಗಿಲ್ಲ. ಹಾಗೆಯೇ ಕಡಿಮೆಯೂ ಆಗಿಲ್ಲ ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,940 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 79,400 ಇದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 7 ಲಕ್ಷದ 94,000 ಇದೆ. ಈ ಬೆಲೆ ಶನಿವಾರ ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
24 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,662 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 86,620 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 66 ಸಾವಿರದ 200 ಇದೆ. ಅಂದರೆ 24 ಕ್ಯಾರಟ್ ಚಿನ್ನದ ಬೆಲೆಯೂ ಶನಿವಾರದಷ್ಟೇ ಕಾಯ್ದಿರಿಸಿಕೊಂಡಿದೆ.
18 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,497 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 64,970 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 6 ಲಕ್ಷ 49 ಸಾವಿರದ 700 ಇದೆ. ಅಂದರೆ 18 ಕ್ಯಾರಟ್ ಚಿನ್ನದ ಬೆಲೆಯೂ ಶನಿವಾರದಷ್ಟೇ ಕಾಯ್ದಿರಿಸಿಕೊಂಡಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ
ನಗರಗಳು 22K 24K 18K
ಚೆನೈ ₹7,940 ₹8,662 ₹6,497
ಮುಂಬೈ ₹7,940 ₹8,662 ₹6,497
ದೆಹಲಿ ₹7,955 ₹8,677 ₹6,509
ಕೋಲ್ಕತಾ ₹7,940 ₹8,662 ₹6,497
ಬೆಂಗಳೂರು ₹7,940 ₹8,662 ₹6,497
ಹೈದರಾಬಾದ್ ₹7,940 ₹8,662 ₹6,497
ಕೇರಳ ₹7,940 ₹8,662 ₹6,497
ಪುಣೆ ₹7,940 ₹8,662 ₹6,497
ಬರೋಡಾ ₹7,945 ₹8,667 ₹6,501
ಅಹಮದಾಬಾದ್ ₹7,945 ₹8,667 ₹6,501
ಭಾರತದಲ್ಲಿ ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹97 ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹970 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹9,700 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹97,000 ಆಗಿದೆ. ಬೆಳ್ಳಿ ಬೆಲೆಯಲ್ಲೂ ಶಿವರಾತ್ರಿ ಬಳಿಕ ಕಡಿಮೆ ಕಂಡುಬರುತ್ತಿದ್ದು, ಕಳೆದೆರಡು ದಿನಗಳಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ಸೋಮವಾರದ ಪ್ರಕಾರ ಸ್ಪಾಟ್ ಗೋಲ್ಡ್ ಬೆಲೆ 0.3%ನಷ್ಟು ಏರಿಕೆಯಾಗಿದ್ದು, $2,866.76 ಪ್ರತಿ ಔನ್ಸ್‌ಗೆ ವಹಿವಾಟು ನಡೆಯುತ್ತಿದೆ. ಅಮೆರಿಕದ ಗೋಲ್ಡ್ ಭವಿಷ್ಯದ ವಹಿವಾಟುಗಳು 1.1% ಏರಿಕೆಯಾಗಿ $2,880.50ಗೆ ವಹಿವಾಟು ನಡೆಯುತ್ತಿವೆ. ಇದೇ ವೇಳೆ ಡಾಲರ್ ಸೂಚ್ಯಂಕ 0.4% ಇಳಿಕೆಯಾಗಿದೆ.


Click it and Unblock the Notifications