ಮಹಿಳೆಯರಿಗೆ ಇಂದು ಬಂಗಾರದಂತಹ ಸುದ್ದಿ ಸಿಕ್ಕಿದೆ. ಅದೇನೆಂದರೆ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದೆ. ಇದು ಮಹಿಳೆಯರ ಪಾಲಿಗೆ ದೊಡ್ಡ ಗುಡ್‌ನ್ಯೂಸ್ ಎಂದರೂ ತಪ್ಪಾಗಲ್ಲ. ಚಿನ್ನದ ಬೆಲೆಯಲ್ಲಿ ಇಂದು ಪ್ರಮುಖ ಇಳಿಕೆ ಕಂಡುಬಂದಿದ್ದು, ತಯಾರಿಕದರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಬದಲಾವಣೆಯಿಂದ ಇದು ಸಂಭವಿಸಿದೆ. ಹಿನ್ನೂಟವಾಗಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಏರಿಳಿತ ಕಂಡುಬರುತ್ತಿದ್ದರೂ, ಇಂದಿನ ಇಳಿಕೆ ಗ್ರಾಹಕರಿಗೆ ಹಾಗೂ ಬಂಗಾರದ ಹೂಡಿಕೆದಾರರಿಗೆ ಉತ್ತಮ ಅವಕಾಶ ಒದಗಿಸಿದೆ.

ಮಹಿಳೆಯರಿಗೆ ಚಿನ್ನದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದೂ ಇಲ್ಲ. ಏಕೆಂದರೆ ಚಿನ್ನ ಒಂದು ಅಮೂಲ್ಯವಾದ ಸಂಪತ್ತಿಗೆ ಸಮಾನ. ಮಹಿಳೆಯರಿಗೆ ಅತೀ ಇಷ್ಟವಾದ ಚಿನ್ನದ ಬೆಲೆ ಕಡಿಮೆಯಾದರೆ, ಅವರಿಗಾಗೋ ಸಂತಸ ಅಷ್ಟಿಷ್ಟಲ್ಲ. ನಾರಿಮಣಿಯರ ಅಲಂಕಾರಕ್ಕೆ ಇನ್ನಷ್ಟು ರೂಪ ಕೊಡುವ ಈ ಚಿನ್ನ ಎಲ್ಲಕ್ಕಿಂತ ಮಿಗಿಲು. ಹೀಗಾಗಿಯೇ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಈ ಚಿನ್ನ ತನ್ನ ಬೆಲೆ ಎಷ್ಟೇ ಹೆಚ್ಚಿಸಿಕೊಂಡರೂ ಮಹಿಳೆಯರಿಗೆ ಇದರ ಮೇಲಿನ ಆಸಕ್ತಿ ಕೊಂಚವೂ ಕಡಿಮೆಯಾಗುವುದಿಲ್ಲ. ಬೆಳ್ಳಿಯ ದರದಲ್ಲೂ ಸಮಾನ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.
ಚಿನ್ನದ ಬೆಲೆ ಹಲವು ಕಾರಣಗಳಿಂದಾಗಿ ಇಳಿಯಬಹುದು. ಚಿನ್ನದ ಬೆಲೆ ಹೆಚ್ಚಾಗಿ ಅಮೆರಿಕಾ ಡಾಲರ್‌ನ ಹಾರಾಟ ಮತ್ತು ಜಾಗತಿಕ ಆರ್ಥಿಕ ಸ್ಥಿತಿಗತಿಗಳು ಮೇಲೆ ಅವಲಂಬಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಹೆಚ್ಚಿಸಿದರೆ, ಚಿನ್ನದ ಬೇಡಿಕೆ ಕಡಿಮೆಯಾಗಬಹುದು. ಡಾಲರ್ ಗಟ್ಟಿಯಾಗಿದರೆ, ಚಿನ್ನದ ದರ ದುಬಾರಿಯಾಗುತ್ತೆ, ಡಾಲರ್ ದುರ್ಬಲವಾದರೆ ಚಿನ್ನದ ದರ ಕಡಿಮೆಯಾಗಬಹುದು. ರೂಪಾಯಿ ಹಿಗ್ಗಿದರೆ, ಚಿನ್ನದ ಬೆಲೆ ಇಳಿಯಬಹುದು. ಹೀಗೆ ಚಿನ್ನದ ಬೆಲೆ ನಾನಾ ಕಾರಣಗಳಿಂದ ಇಳಿಕೆಯಾಗುತ್ತದೆ. ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಮಹಿಳೆಯರಿಗೆ ಅದರ ಮೇಲಿನ ಆಸೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಇನ್ನು ಚಿನ್ನದ ಬೆಲೆ ಕಡಿಮೆಯಾಗಿದ್ದರೆ ಕೇಳೋದೇ ಬೇಡ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಚಿನ್ನದ ಬೆಲೆ ಶನಿವಾರದಷ್ಟೇ ಕಾಯ್ದುಕೊಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
ಭಾರತದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,020 ಆಗಿದೆ. ನಿನ್ನೆ ಇದರ ಬೆಲೆ ₹8,050 ಆಗಿದ್ದು ನಿನ್ನೆಗಿಂತ ಇಂದು, ₹30 ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹80,200 ಆಗಿದೆ. ನಿನ್ನೆಯ ಬೆಲೆ ₹80,500 ಆಗಿದ್ದು ನಿನ್ನೆಗಿಂತ ಇಂದಿಗೆ ₹300 ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷದ 2 ಸಾವಿರ ರೂ. ಆಗಿದೆ. ನಿನ್ನೆಯ ಬೆಲೆ 8,05,000 ರೂ. ಆಗಿದ್ದು ನಿನ್ನೆಗಿಂತ ಇಂದು ₹3,000 ಇಳಿಕೆಯಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,749 ಆಗಿದೆ. ನಿನ್ನೆ ಇದರ ಬೆಲೆ ₹8,782 ಆಗಿದ್ದು ನಿನ್ನೆಗಿಂತ ಇಂದು, 33 ರೂ. ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹87,490 ಆಗಿದೆ. ನಿನ್ನೆಯ ಬೆಲೆ ₹87,820 ಆಗಿದ್ದು ನಿನ್ನೆಗಿಂತ ಇಂದಿಗೆ ₹330 ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 74 ಸಾವಿರದ 900 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 78 ಸಾವಿರದ 200 ರೂ. ಆಗಿದ್ದು ನಿನ್ನೆಗಿಂತ ಇಂದು ₹3,300 ಇಳಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹6,562 ಆಗಿದೆ. ನಿನ್ನೆ ಇದರ ಬೆಲೆ ₹6,587 ಆಗಿದ್ದು ನಿನ್ನೆಗಿಂತ ಇಂದು, 25 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹65,620 ಆಗಿದೆ. ನಿನ್ನೆಯ ಬೆಲೆ ₹65,870 ಆಗಿದ್ದು ನಿನ್ನೆಗಿಂತ ಇಂದಿಗೆ 250 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 56 ಸಾವಿರದ 200 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 58 ಸಾವಿರದ 700 ರೂ. ಆಗಿದ್ದು ನಿನ್ನೆಗಿಂತ ಇಂದು 2,500 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,615 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,562 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,035 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,764 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,574 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,562 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,562 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,562 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,020 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,749 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,562 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತೀಯರಿಗೆ ಬೆಳ್ಳಿ ವಿಚಾರದಲ್ಲಿ ಕೊಂಚ ಖುಷಿ ಸಿಕ್ಕಿದಂತಾಗಿದೆ. ಏಕೆಂದರೆ ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹1 ರಷ್ಟು ಇಳಿಕೆಯಾಗಿದೆ. ಅಂದರೆ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹98 ಇದೆ. ನಿನ್ನೆ ಈ ಬೆಲೆ ₹99 ಇತ್ತು. ಹಾಗೆಯೇ ಪ್ರತಿ 10 ಗ್ರಾಂ ಬೆಳ್ಳಿ ಬೆಲೆ ₹980 ಆಗಿದೆ. ನಿನ್ನೆ ಈ ಬೆಲೆ ₹990 ಆಗಿದ್ದು ಇಂದು ₹10 ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ಇಂದು, ₹9,800 ಆಗಿದೆ. ನಿನ್ನೆ ಈ ಬೆಲೆ ₹9,900 ಆಗಿತ್ತು. ಅಂದರೆ ಇಂದು ₹100 ಕಡಿಮೆಯಾಗಿದೆ. ಇನ್ನು ಒಂದು ಕೆ.ಜಿ ಬೆಳ್ಳಿ ಬೆಲೆ ಇಂದು ₹98,000 ಆಗಿದೆ. ನಿನ್ನೆ ಈ ₹99,000 ಆಗಿದ್ದು ಇಂದು ₹1,000 ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಇಂದು (ಮಾರ್ಚ್ 11, 2025) ಸ್ಪಾಟ್ ಗೋಲ್ಡ್ ಬೆಲೆ 0.3% ಏರಿಕೆ ಕಂಡುಬಂದಿದ್ದು, ಪ್ರತಿ ಔನ್ಸ್‌ಗೆ $2,897.39 ವಹಿವಾಟು ನಡೆಸಿದೆ. ಈ ಏರಿಕೆಗೆ ಅಮೆರಿಕಾದ ಡಾಲರ್‌ನ ದುರ್ಬಲತೆ ಮತ್ತು ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡಿರುವುದು ಕಾರಣವಾಗಿದೆ. ಇನ್ನು, ಗೋಲ್ಡ್‌ಮನ್ ಸ್ಯಾಕ್ಸ್ ಸಂಸ್ಥೆಯು 2025ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,000 ತಲುಪಬಹುದು ಎಂದು ನಿರೀಕ್ಷಿಸಿದೆ.
ಇನ್ನು ಚಿನ್ನದ ಬೆಲೆ ಹೆಚ್ಚಾಗುವುದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಅದರಲ್ಲೂ ವಿವಾಹ ಮತ್ತು ಹಬ್ಬದ ವೇಳೆಗೆ ಚಿನ್ನದ ಬೇಡಿಕೆ ಹೆಚ್ಚಾದರೆ ಬೆಲೆ ಏರುತ್ತದೆ. ಬೇಡಿಕೆ ಕಡಿಮೆಯಾದರೆ ಚಿನ್ನದ ಬೆಲೆ ಸಾಮಾನ್ಯವಾಗಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ. ಚಿನ್ನದ ಗಣಿಗಾರಿಕೆ ಮತ್ತು ಸರಬರಾಜು ಹೆಚ್ಚಾದರೆ ದರ ಕಡಿಮೆಯಾಗಬಹುದು.. ಇನ್ನು ಚಿನ್ನದ ಬೆಲೆ ಮೇಲೆ ಜಾಗತಿಕ ಅಸ್ಥಿರತೆ ಮತ್ತು ಭೂರಾಜಕೀಯ ಪ್ರಭಾವ ಬೀರಬಹುದು. ಅಂದರೆ ಯುದ್ಧ, ಆರ್ಥಿಕ ಕುಸಿತ, ತೈಲ ಬೆಲೆಗಳ ಏರಿಳಿತ, ಚೀನಾ-ಅಮೆರಿಕಾ ವ್ಯಾಪಾರ ಯುದ್ಧಗಳಂಥ ಅಂಶಗಳು ಚಿನ್ನದ ಬೆಲೆಯನ್ನು ಮೇಲೆತ್ತಬಹುದು ಅಥವಾ ಕೆಳಗೆ ಬೀಳಿಸಬಹುದು.


Click it and Unblock the Notifications