ಕಳೆದ ವಾರದಿಂದ ಕೂಡ ಸತತವಾಗಿ ಏರಿಕೆಯಾಗಿ ಹೊಸ ದಾಖಲೆ ಬರೆದಿದ್ದ ಚಿನ್ನದ ಬೆಲೆ ಕೊನೆಗೂ ಇಳಿಕೆ ಕಂಡಿದೆ. ದೀಪಾವಳಿ ಹಬ್ಬಕ್ಕೆ ಚಿನ್ನ ಖರೀದಿಸುವ ಉತ್ಸಾಹದಲ್ಲಿದ್ದ ಭಾರತೀಯರಿಗೆ ಬೆಲೆ ಏರಿಕೆ ಬಿಸಿ ಹೆಚ್ಚಾಗಿಯೇ ತಟ್ಟಿತ್ತು. ಆದರೆ ಗುರುವಾರ ಚಿನ್ನದ ಬೆಲೆಯಲ್ಲಿ ತಕ್ಕ ಮಟ್ಟಿಗೆ ಕುಸಿತ ಕಂಡಿದ್ದು ಚಿನ್ನ ಖರೀದಿದಾರಲ್ಲಿ ಸಂತಸ ಮೂಡಿಸಿದೆ. 10 ಗ್ರಾಮ ಶುದ್ಧ ಚಿನ್ನದ ಬೆಲೆಯಲ್ಲಿ 600 ರೂಪಾಯಿ ಕುಸಿತ ಕಂಡಿದ್ದು 80,000 ರೂಪಾಯಿಗಳಿಗಿಂತ ಕಡಿಮೆಯಾಗಿದೆ.
ರೂಪಾಯಿ ಮೌಲ್ಯ ಕುಸಿತ, ಡಾಲರ್ ಬೆಲೆ ಏರಿಕೆ, ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ದೀಪಾವಳಿಗೆ ಮುಂಚಿವಾಗಿಯೇ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 80,000 ರೂಪಾಯಿ ದಾಟುವ ಮೂಲಕ ಹೊಸ ದಾಖಲೆ ಬರೆದಿತ್ತು. ಗುರುವಾರ ಚಿನ್ನದ ಬೆಲೆ ಅಲ್ಪ ಇಳಿಕೆ ಕಾಣುವ ಮೂಲಕ ಮತ್ತೆ 80,000 ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ ಬಂದಿದೆ.

ಗುರುವಾರ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಇಳಿಕೆ ಕಂಡಿದೆ. ಬುಧವಾರ 8,007 ರೂಪಾಯಿಗೆ ತಲುಪಿದ್ದ 1 ಗ್ರಾಂ ಶುದ್ಧ ಚಿನ್ನ ಗುರುವಾರ 7,947 ರೂಪಾಯಿಯಂತೆ ಮಾರಾಟವಾಗುತ್ತಿದೆ. 10 ಗ್ರಾಮ ಚಿನ್ನದ ಬೆಲೆ 60 ರೂಪಾಯಿ ಕಡಿಮೆಯಾಗಿದ್ದು 80,070 ರೂಪಾಯಿಗಳಿಂದ 79,470 ರೂಪಾಯಿಗಳಿಗೆ ಕಡಿಮೆಯಾಗಿದೆ. 100 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 6,000 ರೂಪಾಯಿ ಕುಸಿತ ಕಂಡಿದೆ.
1 ಗ್ರಾಂ 22 ಕ್ಯಾರಟ್ (ಆಭರಣ) ಚಿನ್ನದ ಬೆಲೆ ಕೂಡ ಗ್ರಾಂಗೆ 55 ರೂಪಾಯಿ ಇಳಿಕೆಯಾಗಿದೆ. ಬುಧವಾರ 7,340 ರೂಪಾಯಿ ಇದ್ದ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಗುರುವಾರ 7,285 ರೂಪಾಯಿಗೆ ಕುಸಿತ ಕಂಡಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಇಳಿಕೆಯಾಗಿದ್ದು, 100 ಗ್ರಾಂ ಆಭರಣ ಚಿನ್ನದ ಬೆಲೆ 5,500 ರೂಪಾಯಿ ಕಡಿಮೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ಭರ್ಜರಿ ಇಳಿಕೆ ಕಂಡಿದೆ. ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 45 ರೂಪಾಯಿ ಕಡಿಮೆಯಾಗಿದೆ. ಬುಧವಾರ 6,006 ರೂಪಾಯಿ ಇದ್ದ ಒಂದು ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ ಗುರುವಾರ 5,961 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಬೆಳ್ಳಿ ಬೆಲೆಯಲ್ಲಿ ಹೆಚ್ಚಳ
ಒಂದು ಕಡೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡರೆ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಒಂದು ಲಕ್ಷ ರೂಪಾಯಿ ಗಡಿ ದಾಟಿರುವ ಬೆಳ್ಳಿ ಇಂದು ಕೆಜಿಗೆ 2000 ರೂಪಾಯಿ ಏರಿಕೆಯಾಗಿದೆ. ಬುಧವಾರ (ಅಕ್ಟೋಬರ್ 23) 2100 ರೂಪಾಯಿ ಏರಿಕೆ ಕಂಡು 99,000 ರೂಪಾಯಿಗೆ ತಲುಪಿದ್ದ ಕೆಜಿ ಬೆಳ್ಳಿ ಇಂದು ಕೂಡ 2000 ರೂಪಾಯಿ ಏರಿಕೆ ಕಂಡಿದ್ದ 1,01,000 ರೂಪಾಯಿಗೆ ತಲುಪಿದೆ.


Click it and Unblock the Notifications