ಕಳೆದೆರಡು ದಿನಗಳಿಂದ ಚಿನ್ನವನ್ನು ಮುಟ್ಟೋಕು ಆಗದಂತೆ ಬೆಲೆ ಏರಿಕೆಯಾಗಿತ್ತು. ಇನ್ಯಾವತ್ತೂ ಭಾರತದಲ್ಲಿ ಚಿನ್ನದ ಬೆಲೆ ಕಡಿಮೆ ಆಗುವುದೇ ಇಲ್ಲವೇ ಎಂಬ ಪ್ರಶ್ನೆ ಹೂಡಿಕೆದಾರರಲ್ಲಿ ಮೂಡಿಸಿತ್ತು. ಆದ್ರೆ ಇದೀಗ ಮತ್ತೆ ಚಿನ್ನ ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಭಾರೀ ಏರಿಕೆ ಕಂಡಿದ್ದ ಚಿನ್ನ ಬೆಲೆ ಇಂದು ಮತ್ತೆ ಪಾತಾಳಕ್ಕಿಳಿದಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate Today) ಎಷ್ಟು ಇಳಿಕೆಯಾಗಿದೆ? ಖರೀದಿಸೋಕೆ ಇದೇ ಬೆಸ್ಟ್ ಟೈಮಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಭಾರೀ ಏರಿಕೆ ಕಂಡಿತ್ತು. ಆದರೆ ಇಂದು ಬಂಪರ್ ಲಾಟರಿ ಹೊಡೆದಂಗಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ ₹80 ರೂ. ಇಳಿಕೆ ಕಂಡಿದೆ. ಅಂದರೆ ಇಂದು ಚಿನ್ನದ ಒಂದು ಗ್ರಾಂ ಬೆಲೆ ಒಟ್ಟು ಬೆಲೆ 12,785 ರೂ. ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹1,02,280 ರೂ. ಆಗಿದ್ದು, ನಿನ್ನೆ 1,02,920 ಇತ್ತು. ನಿನ್ನೆಗಿಂತ ಇಂದು ₹640 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,850 ರೂ. ಆಗಿದೆ. ಒಂದೇ ದಿನದಲ್ಲಿ 10 ಗ್ರಾಂ ಚಿನ್ನದಲ್ಲಿ ₹800 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,78,500 ರೂ. ಆಗಿದ್ದು, ನಿನ್ನೆ 12,86,500 ರೂ. ಇತ್ತು. ಈ ಮೂಲಕ ಒಂದೇ ದಿನ 8 ಸಾವಿರ ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,720 ರೂ. ಆಗಿದ್ದು, ನಿನ್ನೆ ₹11,790 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹70 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 93,760 ರೂ. ಆಗಿದ್ದು, ನಿನ್ನೆ 94,320 ರೂ. ಇತ್ತು. ಒಂದೇ ದಿನದಲ್ಲಿ ₹560 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,17,200 ರೂ ಆಗಿದ್ದು, ಒಟ್ಟು ₹700 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,72,000 ರೂ. ಆಗಿದ್ದು, ನಿನ್ನೆ 11,79,000 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 7,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು ₹9,589 ರೂ. ಆಗಿದ್ದು, ನಿನ್ನೆ 9,647 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 58 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹76,712 ರೂ. ಆಗಿದ್ದು, ಒಟ್ಟು 464 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 95,890 ರೂ. ಆಗಿದ್ದು, ಒಟ್ಟು 580 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,58,900 ರೂ. ಆಗಿದೆ. ಈ ಮೂಲಕ 5,800 ರೂ. ಇಳಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,916, 22K ರೂ. 11,840, 18K ರೂ. 9,875
ಮುಂಬೈ: 24K ರೂ. 12,785, 22K ರೂ. 11,720, 18K ರೂ. 9,589
ದೆಹಲಿ: 24K ರೂ. 12,878, 22K ರೂ. 11,806, 18K ರೂ. 9,663
ಕೋಲ್ಕತ್ತಾ: 24K ರೂ. 12,785, 22K ರೂ. 11,720, 18K ರೂ. 9,589
ಬೆಂಗಳೂರು: 24K ರೂ. 12,785, 22K ರೂ. 11,720, 18K ರೂ. 9,589
ಹೈದರಾಬಾದ್: 24K ರೂ. 12,785, 22K ರೂ. 11,720, 18K ರೂ. 9,589
ಕೇರಳ: 24K ರೂ. 12,785, 22K ರೂ. 11,720, 18K ರೂ. 9,589
ಪುಣೆ: 24K ರೂ. 12,785, 22K ರೂ. 11,720, 18K ರೂ. 9,589
ವಡೋದರಾ: 24K ರೂ. 12,868, 22K ರೂ. 11,796, 18K ರೂ. 9,653
ಅಹಮದಾಬಾದ್: 24K ರೂ. 12,868, 22K ರೂ. 11,796, 18K ರೂ. 9,653
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 14ರ ರಾಯಿಟರ್ಸ್ ವರದಿ ಪ್ರಕಾರ, ಶುಕ್ರವಾರ ಚಿನ್ನದ ಬೆಲೆಗಳು ಏರಿಕೆಯಾಗಿದ್ದು, ದುರ್ಬಲ ಡಾಲರ್ ಮೌಲ್ಯದಿಂದಾಗಿ ವಾರಕ್ಕೊಮ್ಮೆ ಬೆಲೆ ಏರಿಕೆಯಾಗುವ ಸಾಧ್ಯತೆ ಇತ್ತು. ಆದರೆ ಡಿಸೆಂಬರ್ ವೇಳೆಯಲ್ಲಿ ಬಡ್ಡಿದರ ಕಡಿತದ ಬಗ್ಗೆ ಅಮೆರಿಕ ಫೆಡರಲ್ ರಿಸರ್ವ್ ಅಧಿಕಾರಿಗಳು ನೀಡಿದ ಹೇಳಿಕೆಗಳು ಹೂಡಿಕೆದಾರರಲ್ಲಿ ಸ್ವಲ್ಪ ಹಿನ್ನಡೆಯನ್ನು ಅನುಭವಿಸಿತು..
0200 GMT ವೇಳೆಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 0.4% ಏರಿಕೆಯಾಗಿ $4,188.93 ಕ್ಕೆ ತಲುಪಿದೆ. ಈ ಮೂಲಕ ವಾರದಲ್ಲಿ ಇಲ್ಲಿಯವರೆಗೆ ಬುಲಿಯನ್ ಮಾರುಕಟ್ಟೆ 4.8% ಏರಿಕೆ ಕಂಡಿದೆ.
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆ ಇಳಿಕೆಯಾದರೂ, ಬೆಳ್ಳಿ ಬೆಲೆ ಮಾತ್ರ ಇನ್ನೂ ತಗ್ಗಿಲ್ಲ. ಭಾರೀ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತಲೇ ಇದೆ. ಇದೀಗ ಇಂದು 1 ಗ್ರಾಂ ಬೆಳ್ಳಿ ದರ 173.10 ರೂ. ಆಗಿದ್ದು, ನಿನ್ನೆ 173 ರೂ. ಇತ್ತು. ಒಂದು ಗ್ರಾಂ ಬೆಳ್ಳಿಯಲ್ಲಿ 0.10 ಪೈಸೆಯಷ್ಟು ಬೆಲೆ ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ 1,384 ರೂ. ಆಗಿದೆ. ಇನ್ನು 10 ಗ್ರಾಂ ಬೆಳ್ಳಿಯಲ್ಲಿ 1 ರೂ. ಹೆಚ್ಚಳವಾಗಿದ್ದು, ಒಟ್ಟು ಬೆಲೆ 1,731 ರೂ. ಆಗಿದೆ. 100 ಗ್ರಾಂ ಬೆಳ್ಳಿದರ ₹17,310 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹1,73,100 ರೂ. ಆಗಿದೆ.


Click it and Unblock the Notifications