ನಿನ್ನೆಯಷ್ಟೇ ಸ್ಥಿರವಾಗಿದ್ದ ಭಾರತದಲ್ಲಿ ಚಿನ್ನದ ಬೆಲೆ ಇಂದು (ಜ.28, ಬುಧವಾರ) ಭಾರೀ ಏರಿಕೆ ಕಂಡಿದೆ. ಸುರಕ್ಷಿತ ಹೂಡಿಕೆಗಳಲ್ಲಿ ಚಿನ್ನ ಕೂಡಾ ಒಂದು ಎಂದು ಹಲವರು ಭಾವಿಸುತ್ತಾರೆ. ಅಲ್ಲದೇ ಹಿಂದಿನಿಂದಲೂ ಅದೆಷ್ಟೋ ಮಂದಿ ಚಿನ್ನದ ಮೇಲೆ ಹೂಡಿಕೆ (Gold Investment) ಮಾಡುತ್ತಾ ಬಂದಿದ್ದಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯಿಂದಾಗಿ (Gold Price Rise) ಜನಸಮಾನ್ಯರಂತೂ ಪರದಾಡುವಂತಾಗಿದೆ. ಇಂದೂ ಕೂಡಾ ಚಿನ್ನದ ಬೆಲೆ ಏರಿಕೆಯಾಗಿದ್ದು, ಒಟ್ಟು ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆ ಒಂದು ಗ್ರಾಂ ಬೆಲೆ 16,517 ರೂ. ಆಗಿದೆ. ನಿನ್ನೆಯಷ್ಟೇ 16,195 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹322 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,32,136 ರೂ. ಆಗಿದ್ದು, ನಿನ್ನೆ 1,29,560 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,576 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,65,170 ರೂ. ಆಗಿದ್ದು, ನಿನ್ನೆ 1,61,950 ರೂ. ಇತ್ತು. ನಿನ್ನೆಗಿಂತ ಇಂದು 3,220 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,51,700 ರೂ. ಆಗಿದ್ದು, ನಿನ್ನೆ 16,19,500 ರೂ. ಇತ್ತು. ಒಟ್ಟು 32,200 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 15,140 ರೂ. ಆಗಿದ್ದು, ನಿನ್ನೆ 14,845 ರೂ. ಇತ್ತು. ನಿನ್ನೆಗಿಂತ ಇಂದು ₹295 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,21,120 ರೂ. ಆಗಿದ್ದು, ನಿನ್ನೆ 1,18,760 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,360 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,51,400 ರೂ. ಆಗಿದ್ದು, ನಿನ್ನೆ 1,48,450 ರೂ. ಇತ್ತು. ಒಟ್ಟು 2,950 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು 15,14,000 ರೂ. ಆಗಿದ್ದು, ನಿನ್ನೆ 14,84,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 29,500 ರೂ. ಏರಿಕೆ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ ಬೆಲೆ ಕೂಡಾ ಇಂದು ಭಾರೀ ಏರಿಕೆಯಾಗಿದೆ. 1 ಗ್ರಾಂ ಚಿನ್ನದ ಬೆಲೆ ಇಂದು 12,388 ರೂ. ಆಗಿದ್ದು, ನಿನ್ನೆ 12,146 ರೂ. ಇತ್ತು. ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು ₹242 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹99,104 ರೂ. ಆಗಿದ್ದು, ನಿನ್ನೆ 97,168 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,936 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,23,880 ರೂ. ಆಗಿದ್ದು, ನಿನ್ನೆ 1,21,460 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,420 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,734, 22K ರೂ. 15,330, 18K ರೂ. 12,785
ಮುಂಬೈ: 24K ರೂ. 16,517, 22K ರೂ. 15,140, 18K ರೂ. 12,388
ದೆಹಲಿ: 24K ರೂ. 16,530, 22K ರೂ. 15,155, 18K ರೂ. 12,403
ಕೋಲ್ಕತ್ತಾ: 24K ರೂ. 16,517, 22K ರೂ. 15,140, 18K ರೂ. 12,388
ಬೆಂಗಳೂರು: 24K ರೂ. 16,517, 22K ರೂ. 15,140, 18K ರೂ. 12,388
ಹೈದರಾಬಾದ್: 24K ರೂ. 16,517, 22K ರೂ. 15,140, 18K ರೂ. 12,388
ಕೇರಳ: 24K ರೂ. 16,517, 22K ರೂ. 15,140, 18K ರೂ. 12,388
ಪುಣೆ: 24K ರೂ. 16,517, 22K ರೂ. 15,140, 18K ರೂ. 12,388
ವಡೋದರಾ: 24K ರೂ. 16,520, 22K ರೂ. 15,145, 18K ರೂ. 12,393
ಅಹಮದಾಬಾದ್: 24K ರೂ. 16,520, 22K ರೂ. 15,145, 18K ರೂ. 12,393
ಬೆಳ್ಳಿ ಬೆಲೆ ಎಷ್ಟಿದೆ?
ಬೆಳ್ಳಿ ದರವೂ ಇಂದು ಭಾರೀ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಂತೂ ದಿನ ಹೋದಂತೆ ಏರಿಕೆಯಾಗುತ್ತಲೇ ಇದೆ. ಚಿನ್ನದ ಬೆಲೆ ಇಳಿಕೆ ಕಂಡರೂ, ಬೆಳ್ಳಿ ದರ ಮಾತ್ರ ಕಡಿಮೆಯಾಗೋದು ಕಾಣುತ್ತಿಲ್ಲ. ಅದೇ ರೀತಿ ಇಂದೂ ಕೂಡಾ ಪ್ರತೀ ಗ್ರಾಂ ಬೆಳ್ಳಿಯಲ್ಲಿ 10 ರೂ. ಹೆಚ್ಚಳವಾಗಿದೆ. ಅಂದರೆ 1 ಗ್ರಾಂ ಬೆಳ್ಳಿ ದರ ಇಂದು ₹380 ರೂ. ಆಗಿದ್ದು, ನಿನ್ನೆ ₹370 ರೂ. ಇತ್ತು. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹3,040 ರೂ. ಆಗಿದ್ದು, ನಿನ್ನೆ ₹2,960 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ₹3,800 ರೂ., 100 ಗ್ರಾಂ ಬೆಳ್ಳಿ ಬೆಲೆ ₹38,000 ರೂ., 1000 ಗ್ರಾಂ ಬೆಳ್ಳಿ ದರ ₹3,80,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 28ರ ರಾಯಿಟರ್ಸ್ ವರದಿ ಪ್ರಕಾರ, ಯುಎಸ್ ಫೆಡರಲ್ ರಿಸರ್ವ್ ಹಣಕಾಸು ನೀತಿ ನಿರ್ಧಾರಕ್ಕೆ ಮೊದಲೇ, ಜಾಗತಿಕವಾಗಿ ರಾಜಕೀಯ ಕಳವಳ, ಡಾಲರ್ ಮೌಲ್ಯ ಕುಸಿದಿದ್ದರಿಂದ, ಬುಧವಾರ ಚಿನ್ನದ ಬೆಲೆ ಮೊದಲ ಬಾರಿಗೆ ದಾಖಲೆಯಲ್ಲಿ ಅಂದರೆ $5,200 ದಾಟಿದೆ.
GMT 0314 ವೇಳೆಗೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ 1.1% ರಷ್ಟು ಏರಿಕೆ ಕಂಡು, $5,243.58 ಕ್ಕೆ ತಲುಪಿದೆ.


Click it and Unblock the Notifications