Gold Rate: ರಿಯಾಯಿತಿ ನೀಡಿದ್ರೂ ಚಿನ್ನದ ಬೇಡಿಕೆಯಲ್ಲಿ ಭಾರೀ ಕುಸಿತ! ಕಾರಣವೇನು?

ಫೆಬ್ರವರಿ 2026 ರ, ಎರಡನೇ ವಾರದಲ್ಲಿ ಭಾರತದಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ (Indian Gold Market) ಭಾರೀ ಬದಲಾವಣೆ ಕಂಡು ಬಂದಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ, ಈ ತಿಂಗಳು ಚಿನ್ನದ ಬೆಲೆ ಭಾರೀ ಕುಸಿತ ಕಂಡಿದೆ. ಭಾರತದಲ್ಲಿ ಚಿನ್ನದ ಬೆಲೆ ಈ ವಾರ ಸುಮಾರು ಒಂದು ತಿಂಗಳ ನಂತರ ಭಾರೀ ಇಳಿಕೆಯೊಂದಿಗೆ ವಹಿವಾಟು ನಡೆಸಿದೆ. ತೀವ್ರ ಬೆಲೆ ಏರಿಳಿತಗಳು ಗ್ರಾಹಕರ ಬೇಡಿಕೆಯನ್ನು ತಗ್ಗಿಸಿವೆ.

ರಿಯಾಯಿತಿ ನೀಡಿದ್ರೂ ಚಿನ್ನದ ಬೇಡಿಕೆಯಲ್ಲಿ ಭಾರೀ ಕುಸಿತ!

ಚಿನ್ನದ ಬೆಲೆಯಲ್ಲಿ ಇಳಿಕೆ!
ಭಾರತದಲ್ಲಿ ಬುಲಿಯನ್ ವ್ಯಾಪಾರಿಗಳು ಅಧಿಕೃತ ದೇಶೀಯ ಬೆಲೆಗಳ (ಶೇ.6 ಆಮದು ಸುಂಕ ಮತ್ತು ಶೇ.3 ಮಾರಾಟ ತೆರಿಗೆ ಸಹಿತ) ಮೇಲೆ ಪ್ರತಿ ಔನ್ಸ್‌ಗೆ 12 ಡಾಲರ್‌ವರೆಗೆ ರಿಯಾಯಿತಿ ನೀಡುತ್ತಿದ್ದಾರೆ. ಹೈದರಾಬಾದ್‌ನ ಆಭರಣ ವ್ಯಾಪಾರಿಯೊಬ್ಬರು, "ತಯಾರಿಕೆ ಶುಲ್ಕದಲ್ಲಿ ರಿಯಾಯಿತಿ ನೀಡಿದರೂ ಆಭರಣ ಬೇಡಿಕೆ ಸುಧಾರಿಸಿಲ್ಲ. ಚಿಲ್ಲರೆ ಖರೀದಿದಾರರು ಪ್ರಸ್ತುತ ಬೆಲೆಗಳಿಗೆ ಖರೀದಿಸಲು ಹಿಂಜರಿಯುತ್ತಿದ್ದಾರೆ," ಎಂದು ಹೇಳಿದ್ದಾರೆ.

ಕಳೆದ ವಾರ ಪ್ರತಿ 10 ಗ್ರಾಂಗೆ ₹1.33 ಲಕ್ಷಕ್ಕೆ ಕುಸಿದಿದ್ದ ದೇಶೀಯ ಚಿನ್ನದ ಬೆಲೆ, ಫೆಬ್ರವರಿ 13ರ ಶುಕ್ರವಾರದಂದು ₹1.54 ಲಕ್ಷದಷ್ಟಿತ್ತು. ಭಾರತ-ಯುಎಇ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (CEPA)ದಡಿಯಲ್ಲಿ, ಯುಎಇಯಿಂದ ಚಿನ್ನದ ಸಾಗಣೆಗಳಿಗೆ ಕಡಿಮೆ ಸುಂಕ ಅನ್ವಯವಾಗುತ್ತಿದೆ. ಈ ತಿಂಗಳು ಸರ್ಕಾರ 80 ಮೆಟ್ರಿಕ್ ಟನ್ ಚಿನ್ನವನ್ನು ರಿಯಾಯಿತಿ ಸುಂಕದಲ್ಲಿ ಯುಎಇಯಿಂದ ಆಮದು ಮಾಡಿಕೊಳ್ಳುವ ನಿರೀಕ್ಷೆಯಲ್ಲಿ ಹಲವು ವರ್ತಕರು ಖರೀದಿಗಳನ್ನು ಮುಂದೂಡಿದ್ದಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಚಿನ್ನದ ಮೇಲೆ ಇದ್ದಕ್ಕಿದ್ದಂತೆ ರಿಯಾಯಿತಿ ನೀಡಲು ಕಾರಣವೇನು?
ಬೆಲಯಲ್ಲಿ ಅಸ್ಥಿರತೆ:
ಚಿನ್ನದ ಬೆಲೆಗಳು ದಿನಹೋದಂತೆ ಏರುಪೇರಾಗುತ್ತಲೇ ಇದೆ. ಇದರಿಂದ ಗ್ರಾಹಕರು ಕೂಡಾ ಖರೀದಿಗೆ ಹಿಂಜರಿಯುತ್ತಿದ್ದಾರೆ. ಇನ್ನು ಈ ಬಗ್ಗೆ ಹೈದರಾಬಾದ್‌ನ ಒಬ್ಬ ಆಭರಣ ವ್ಯಾಪಾರಿ ಕೂಡಾ, ಆಭರಣ ಖರೀದಿಗೆ ಗ್ರಾಹಕರು ಮರಳಿ ಬರುತ್ತಿಲ್ಲ. ಮೇಕಿಂಗ್‌ ಚಾರ್ಜ್‌ನಲ್ಲಿ ರಿಯಾಯಿತಿ ನೀಡಿದರೂ ಗ್ರಾಹಕರು ಖರೀದಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.

ಚಿನ್ನದ ಬೇಡಿಕೆಯೂ ಕುಸಿತ:
ಭಾರತದಲ್ಲಿ ಚಿನ್ನವು ಮುಖ್ಯವಾಗಿ ಆಭರಣಕ್ಕಾಗಿ ಬಳಸಲಾಗುತ್ತದೆ. ಆದರೆ ಪ್ರಸ್ತುತ ಚಿನ್ನ-ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಆದರೆ ಗ್ರಾಹಕರು ಯಾವಾಗ ಇಳಿಕೆಯಾಗುತ್ತೆ ಎಂದು ಕಾತುರಲ್ಲಿದ್ದಾರೆ. ಇದರಿಂದಲೇ ಬೇಡಿಕೆಯಲ್ಲಿ ಭಾರೀ ಕುಸಿತ ಕಂಡಿದೆ ಎನ್ನಲಾಗಿದೆ.

ಚೀನಾ vs ಭಾರತ ಚಿನ್ನದ ಬೇಡಿಕೆ:
ಚೀನಾದಲ್ಲಿ ಲೂನಾರ್‌ ನ್ಯೂಸ್‌ ಇಯರ್‌ (ಫೆ.15 ರಿಂದ ಆರಂಭ) ಮುನ್ನವೇ ಚಿನ್ನದ ಬೇಡಿಕೆ ಬಲವಾಗಿದೆ. ಆದರೆ ಭಾರತದಲ್ಲಿ ಬೇಡಿಕೆ ಇಳಿಕೆಯಾಗಿದ್ದರಿಂದ ಇದೀಗ ದರವೂ ಇಳಿಕೆಯಾಗುತ್ತಿದೆ ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಸದ್ಯ ಚಿನ್ನಕ್ಕೆ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎನ್ನಲಾಗಿದೆ.

ಇನ್ನು ಇತರ ಏಷ್ಯಾದ ಮಾರುಕಟ್ಟೆಗಳಲ್ಲಿ, ಹಾಂಗ್ ಕಾಂಗ್‌ನಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ $1.80 ಪ್ರೀಮಿಯಂವರೆಗೆ ವಹಿವಾಟು ನಡೆಸಿದರೆ, ಜಪಾನ್‌ನಲ್ಲಿ $6 ರಿಯಾಯಿತಿಯಿಂದ $1 ಪ್ರೀಮಿಯಂಗೆ ಮತ್ತು ಸಿಂಗಾಪುರದಲ್ಲಿ $0.50 ರಿಯಾಯಿತಿಯಿಂದ $3.50 ಪ್ರೀಮಿಯಂ ನಡುವೆ ಇತ್ತು. ಜಾಗತಿಕ ಆರ್ಥಿಕ ಅನಿಶ್ಚಿತತೆ, ಕರೆನ್ಸಿ ಚಲನೆಗಳು, ಕೇಂದ್ರೀಯ ಬ್ಯಾಂಕ್ ನೀತಿ ನಿರೀಕ್ಷೆಗಳು ಸುರಕ್ಷಿತ ಆಶ್ರಯದ ಬೇಡಿಕೆಯನ್ನು ಬೆಂಬಲಿಸಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ಇತ್ತೀಚಿನ ಲೋಹದ ಬೆಲೆಯಲ್ಲಿನ ಏರುಪೇರಾದ ನಂತರ ದೇಶೀಯ ಬೆಲೆಗಳು ಸ್ಥಿರಗೊಳ್ಳುತ್ತಿವೆ ಎಂದು ಹೇಳಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+